ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದ ಪರ ಗರಿಷ್ಠ ಜತೆಯಾಟದ ದಾಖಲೆ ಬರೆದ ಸ್ಮೃತಿ-ಶಫಾಲಿ

IND-W vs SL-W: 80 ರನ್‌ ಬಾರಿಸಿದ ಮಂಧಾನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಗಡಿದಾಟಿದ್ದಾರೆ. ಮಹಿಳಾ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ್ತಿಯಾಗಿದ್ದಾರೆ.ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 157 ಟಿ–20 ಪಂದ್ಯಗಳಿಂದ 4,094 ರನ್, 117 ಏಕದಿನ ಪಂದ್ಯಗಳಲ್ಲಿ 5,322 ರನ್ ಹಾಗೂ 7 ಟೆಸ್ಟ್ ಪಂದ್ಯಗಳಿಂದ 629 ರನ್‌ ಗಳಿಸಿದ್ದಾರೆ. ಇದರಲ್ಲಿ 17 ಶತಕಗಳು ಕೂಡ ಸೇರಿವೆ.

Smriti and Shafali

ತಿರುವನಂತಪುರ, ಡಿ.29: ಭಾನುವಾರ ಶ್ರೀಲಂಕಾ ವಿರುದ್ಧದ 4ನೇ ಮಹಿಳಾ ಟಿ20 ಪಂದ್ಯದಲ್ಲಿ ಭಾರತ(IND-W vs SL-W) ತಂಡ ದಾಖಲೆಯ ಮೊತ್ತ ಪೇರಿಸಿ ಪಂದ್ಯವನ್ನು ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ಆರಂಭಿಕ ಬ್ಯಾಟರ್‌ಗಳಾದ ಸ್ಮೃತಿ ಮಂಧಾನ(Smriti Mandhana) ಹಾಗೂ ಶಫಾಲಿ ವರ್ಮಾ(Shafali Verma) ಅವರು ಮೊದಲ ವಿಕೆಟ್‌ಗೆ 162 ರನ್‌ಗಳ ಜೊತೆಯಾಟ ನಡೆಸುವ ಮೂಲಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಯಾವುದೇ ವಿಕೆಟ್‌ಗೆ ಅತ್ಯಧಿಕ ರನ್‌ಗಳ ಜೊತೆಯಾಟ ನಡೆಸಿದ ತಮ್ಮದೇ ದಾಖಲೆಯನ್ನು ಮತ್ತಷ್ಟು ಉತ್ತಮಗೊಳಿಸಿದರು. ಇದೇ ಜೋಡಿಯು 2019ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 143 ರನ್‌ಗಳ ಜೊತೆಯಾಟ ಆಡಿತ್ತು.

ಪಂದ್ಯದಲ್ಲಿ 3 ಸಿಕ್ಸರ್‌ ಬಾರಿಸಿದ ಸ್ಮೃತಿ ಮಂಧಾನ ಮಹಿಳಾ ಟಿ20ಯಲ್ಲಿ ಭಾರತದ ಪರ ಅತ್ಯಧಿಕ ಸಿಕ್ಸರ್ ಬಾರಿಸಿದ್ದ ಹರ್ಮನ್‌ಪ್ರೀತ್‌ ಕೌರ್ (78 ಸಿಕ್ಸರ್) ದಾಖಲೆಯನ್ನು ಮುರಿದರು. ಮಂಧಾನ ಒಟ್ಟು 80 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. 69 ಸಿಕ್ಸರ್‌ ಹೊಡೆದಿರುವ ಶಫಾಲಿ ವರ್ಮಾ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ INDW vs SLW: ಮಂಧಾನಾ-ಶಫಾಲಿ ಅಬ್ಬರ, ನಾಲ್ಕನೇ ಟಿ20ಐಯನ್ನೂ ಗೆದ್ದ ಭಾರತ ವನಿತೆಯರು!

80 ರನ್‌ ಬಾರಿಸಿದ ಮಂಧಾನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಗಡಿದಾಟಿದ್ದಾರೆ. ಮಹಿಳಾ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ್ತಿಯಾಗಿದ್ದಾರೆ.ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 157 ಟಿ–20 ಪಂದ್ಯಗಳಿಂದ 4,094 ರನ್, 117 ಏಕದಿನ ಪಂದ್ಯಗಳಲ್ಲಿ 5,322 ರನ್ ಹಾಗೂ 7 ಟೆಸ್ಟ್ ಪಂದ್ಯಗಳಿಂದ 629 ರನ್‌ ಗಳಿಸಿದ್ದಾರೆ. ಇದರಲ್ಲಿ 17 ಶತಕಗಳು ಕೂಡ ಸೇರಿವೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 2 ವಿಕೆಟ್‌ಗೆ 221 ರನ್‌ಗಳ ದೊಡ್ಡ ಮೊತ್ತ ದಾಖಲಿಸಿತು. ಆರಂಭದಲ್ಲಿ ಶ್ರೀಲಂಕಾ ಹೋರಾಟ ನಡೆಸುವಂತೆ ಕಂಡರೂ ಅಂತಿಮವಾಗಿ ಒತ್ತಡಕ್ಕೆ ಸಿಲುಕಿ 6 ವಿಕೆಟ್‌ಗೆ 191 ರನ್ ಗಳಿಸಲಷ್ಟೇ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್‌: ಭಾರತ 221/2 (ಸ್ಮೃತಿ ಮಂಧಾನ 80, ಶಫಾಲಿ ವರ್ಮಾ 79, ರಿಚಾ ಘೋಷ್ 40*) ಶ್ರೀಲಂಕಾ: 20 ಓವರ್‌ಗಳಲ್ಲಿ 191/6 (ಚಾಮರಿ ಅಥಾಪತ್ತು 52; ವೈಷ್ಣವಿ ಶರ್ಮಾ 2/24).