ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರೈಸಿಂಗ್‌ ಸ್ಟಾರ್ಸ್ ಏಷ್ಯಾಕಪ್‌ ಟಿ20 ಟೂರ್ನಿ; ಲಂಕಾ ಮಣಿಸಿ ಫೈನಲ್‌ ತಲುಪಿದ ಭಾರತ ಮಹಿಳಾ ತಂಡ

ACC Women's Asia Cup Rising Stars 2026: ಲಂಕಾ ಪರ ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ್ತಿ ಸಂಜನಾ ಕವಿಂದಿ(31) ಮತ್ತು ಶಶಿನಿ ಗಿಮ್ಹಾನಿ (22) ರನ್‌ ಬಾರಿಸಿದ್ದು ಬಿಟ್ಟರೆ ಉಳಿದವರೆಲ್ಲರೂ ವಿಫಲರಾದರು. ತಂಡದ ಪರ 7 ಮಂದಿ ಬ್ಯಾಟರ್‌ಗಳು ಒಂದಂಕಿಗೆ ಸೀಮಿತರಾದರು.

Women’s Women’s Team

ಬ್ಯಾಂಕಾಕ್‌, ಫೆ.20: ಇಲ್ಲಿನ ಟೆರ್ಡ್‌ಥೈ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಎ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಭಾರತ ಎ(India A Women vs Sri Lanka A Women) ತಂಡ ಎಸಿಸಿ ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್‌ನ ಫೈನಲ್‌ಗೆ ಪ್ರವೇಶಿಸಿತು. ಫೈನಲ್‌ನಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಎರಡನೇ ಸೆಮಿಫೈನಲ್‌ನ ವಿಜೇತರನ್ನು ಭಾರತ ಎದುರಿಸಲಿದೆ. ಫೈನಲ್ ಪಂದ್ಯ ಫೆಬ್ರವರಿ 22 ರಂದು ನಡೆಯಲಿದೆ.

ನಿರ್ಣಾಯಕ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ನಾಯಕಿ ರಾಧಾ ಯಾದವ್, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು 19 ರನ್‌ಗೆ ನಾಲ್ಕು ವಿಕೆಟ್ ಜತೆಗೆ 18 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ ಅಮೋಘ ಪ್ರದರ್ಶನ ತೋರಿದ್ದರು. ಉಳಿದಂತೆ ತನುಜಾ ಕನ್ವರ್ ಮತ್ತು ಪ್ರೇಮಾ ರಾವತ್ ತಲಾ ಎರಡು ವಿಕೆಟ್ ಪಡೆದರು.



ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ಎ ತಂಡವು 118 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ 13.3 ಓವರ್‌ಗಳಲ್ಲಿ 5 ವಿಕೆಟ್‌ಗೆ 119 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಚೇಸಿಂಗ್‌ ವೇಳೆ ಕನ್ನಡತಿ ವೃಂದಾ ದಿನೇಶ್‌ 42, ಅನುಷ್ಕಾ ಶರ್ಮಾ 27 ಮತ್ತು ರಾಧಾ ಯಾದವ್‌ ಅಜೇಯ 31 ರನ್‌ ಬಾರಿಸಿದರು. ಲಂಕಾ ಪರ ಬೌಲಿಂಗ್‌ನಲ್ಲಿ ಶಶಿನಿ ಗಿಮ್ಹಾನಿ 2 ವಿಕೆಟ್‌ ಕಿತ್ತರು.

ಹುಬ್ಬಳ್ಳಿಯಲ್ಲಿ ಕರ್ನಾಟಕ vs ಜಮ್ಮು-ಕಾಶ್ಮೀರ ರಣಜಿ ಫೈನಲ್

ಲಂಕಾ ಪರ ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ್ತಿ ಸಂಜನಾ ಕವಿಂದಿ(31) ಮತ್ತು ಶಶಿನಿ ಗಿಮ್ಹಾನಿ (22) ರನ್‌ ಬಾರಿಸಿದ್ದು ಬಿಟ್ಟರೆ ಉಳಿದವರೆಲ್ಲರೂ ವಿಫಲರಾದರು. ತಂಡದ ಪರ 7 ಮಂದಿ ಬ್ಯಾಟರ್‌ಗಳು ಒಂದಂಕಿಗೆ ಸೀಮಿತರಾದರು.

ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ: 118 ಆಲೌಟ್‌(ಸಂಜನಾ ಕವಿಂದಿ 31, ಶಶಿನಿ ಗಿಮ್ಹಾನಿ 22, ರಾಧಾ ಯಾದವ್ 19 ಕೆ 4, ಪ್ರೇಮಾ ರಾವತ್‌ 9ಕ್ಕೆ 2, ತನುಜಾ ಕನ್ವರ್ 21ಕೆ 2).

ಭಾರತ: ವೃಂದಾ ದಿನೇಶ್‌ 42, ಅನುಷ್ಕಾ ಶರ್ಮಾ 27, ರಾಧಾ ಯಾದವ್‌ ಅಜೇಯ 31, ಶಶಿನಿ ಗಿಮ್ಹಾನಿ 33 ಕ್ಕೆ 2). ಪಂದ್ಯಶ್ರೇಷ್ಠ: ರಾಧಾ ಯಾದವ್‌.