Asia Cup squads: ಇಂದು ಭಾರತ ತಂಡ ಪ್ರಕಟ; 15 ಮಂದಿಯ ತಂಡಕ್ಕೆ 30 ಆಟಗಾರರ ಪೈಪೋಟಿ
ಸಂಜು ಸ್ಯಾಮ್ಸನ್ ಜತೆ ಎರಡನೇ ವಿಕೆಟ್ ಕೀಪರ್ ಸ್ಥಾನಕ್ಕೆ ಜಿತೇಶ್ ಶರ್ಮಾ ಮತ್ತು ಧ್ರುವ್ ಜುರೇಲ್ ನಡುವೆ ರೇಸ್ ಇದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಕೆಳಕ್ರಮಾಂಕದಲ್ಲಿ ಆಡಿದ್ದ ಜಿತೇಶ್, ಕೆಲವು ಪಂದ್ಯಗಳಲ್ಲಿ ಫಿನಿಷರ್ ಪಾತ್ರದಲ್ಲಿ ಮಿಂಚಿದ್ದರು. ಹೀಗಾಗಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಅಧಿಕ.

ಮುಂಬಯಿ: ಮುಂದಿನ ತಿಂಗಳು ನಡೆಯಲಿರುವ ಏಷ್ಯಾ ಕಪ್ ಟೂರ್ನಿಗೆ(Asia Cup 2025) 15 ಮಂದಿಯ ಭಾರತ ತಂಡದಲ್ಲಿ ತಂಡಕ್ಕೆ(Asia Cup squads) ಯ್ಕೆಯಾಗುವ ಆಟಗಾರರು ಯಾರು ಎಂಬ ಕುತೂಹಲಕ್ಕೆ ಇಂದು (ಮಂಗಳವಾರ) ತೆರೆ ಬೀಳಲಿದೆ. ತಂಡವನ್ನು ಆಯ್ಕೆ ಮಾಡಲು ರಾಷ್ಟ್ರೀಯ ಆಯ್ಕೆ ಸಮಿತಿ ಇಂದು ಸಭೆ ಸೇರಲಿದೆ. 30ರಷ್ಟು ಆಟಗಾರರ ನಡುವೆ ಪೈಪೋಟಿ ಇದ್ದುಅತ್ಯುತ್ತಮ ಎನಿಸಿರುವ ಟಿ20 ತಂಡದಲ್ಲಿ ಅವಕಾಶ ಕಲ್ಪಿಸುವುದು ಆಯ್ಕೆ ಸಮಿತಿ ಮುಂದಿರುವ ದೊಡ್ಡ ಸವಾಲಾಗಿದೆ.
ಏಷ್ಯಾ ಕಪ್ ಟೂರ್ನಿ ಯುಎಇಯಲ್ಲಿ ಸೆ. 9 ರಿಂದ 28ರವರೆಗೆ ನಡೆಯಲಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಮೋಘವಾಗಿ ಆಡಿದ್ದ ನಾಯಕ ಶುಭಮನ್ ಗಿಲ್ ಅವರಿಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ. ಪ್ರತಿಯೊಂದು ಸ್ಥಾನಕ್ಕೂ ಮೂರರಿಂದ ನಾಲ್ಕು ಮಂದಿ ಪೈಪೋಟಿಯಲ್ಲಿದ್ದಾರೆ. ಮೊದಲ ಮೂರು ಸ್ಥಾನಗಳಿಗೆ ಆರು ಆಟಗಾರರ ಮಯೆ ಸ್ಪರ್ಧೆ ಇದೆ.
ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಮತ್ತು ತಿಲಕ್ ವರ್ಮ ಮಧ್ಯೆ ಪೈಪೋಟಿ ಇದೆ. ಸ್ಪಿನ್ ವಿಭಾಗದಲ್ಲಿ ಉಪನಾಯಕ ಅಕ್ಷರ್ ಪಟೇಲ್ ಜತೆ ಒಂದು ಸ್ಥಾನಕ್ಕಾಗಿ ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ರವಿ ಬಿಷ್ಣೋಯಿ ನಡುವೆ ಪೈಪೋಟಿಯಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬಮ್ರಾ ಮತ್ತು ಅರ್ಷದೀಪ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಸಹಜ ಆಯ್ಕೆ ಎನಿಸಲಿದ್ದಾರೆ. ಮೀಸಲು ವೇಗಿಯ ಸ್ಥಾನಕ್ಕೆ ಹರ್ಷಿತ್ ರಾಣಾ, ಕನ್ನಡಿಗ ಪ್ರಸಿದ್ಧ ಕೃಷ್ಣನಡುವೆ ಪೈಪೋಟಿಯಿದೆ.