ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಶೂ ಧರಿಸಿ ಹವನದಲ್ಲಿ ಪಾಲ್ಗೊಂಡ ಲಾಲು ಪ್ರಸಾದ್ ಯಾದವ್; ನೆಟ್ಟಿಗರಿಂದ ತರಾಟೆ

ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಯಾದವ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಸೋಫಾದಲ್ಲಿ ಕುಳಿತು ಶೂ ಧರಿಸಿ ಹವನ ಮಾಡುತ್ತಿರುವುದನ್ನು ತೋರಿಸಲಾಗಿದೆ. ಸದ್ಯ ಈ ವಿಡಿಯೋ ಫುಲ್‌ ಟ್ರೋಲ್‌ ಆಗಿದೆ.

ಶೂ ಧರಿಸಿ ಹವನದಲ್ಲಿ ಪಾಲ್ಗೊಂಡ  ಲಾಲು ಪ್ರಸಾದ್ ಯಾದವ್!

Vishakha Bhat Vishakha Bhat Aug 19, 2025 12:53 PM

ಪಟನಾ: ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಯಾದವ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಸೋಫಾದಲ್ಲಿ ಕುಳಿತು ಶೂ ಧರಿಸಿ ಹವನ ಮಾಡುತ್ತಿರುವುದನ್ನು ತೋರಿಸಲಾಗಿದೆ. ಸದ್ಯ ಈ ವಿಡಿಯೋ ಫುಲ್‌ ಟ್ರೋಲ್‌ ಆಗಿದೆ. ಹಿಂದೂ ಸಂಪ್ರದಾಯಗಳಿಗೆ ಗೌರವ ತೋರುವುದಿಲ್ಲವಾದರೆ ನೀವು ಅದರಿಂದ ದೂರವಿರಿ ಎಂದು ಹಲವರು ಟೀಕಿಸಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಹಿಂದೂ ಆಚರಣೆಗಳನ್ನು ಅಗೌರವಿಸುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ವಿಡಿಯೋದಲ್ಲಿ ಲಾಲೂ ಅವರು ಹವನಕ್ಕೆ ಆಹುತಿ ಹಾಕುತ್ತಿದ್ದಾರೆ.

ಸಿನ್ಹಾ ಎಂಬ ಎಕ್ಸ್ ಬಳಕೆದಾರರು ಲಾಲು ಯಾದವ್ ಅವರ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಆರ್‌ಜೆಡಿ ನಾಯಕನ ಕೃತ್ಯವನ್ನು "ಅಸಹ್ಯಕರ" ಎಂದು ಬಣ್ಣಿಸಿದ್ದಾರೆ. ಹವಾನ ಸಾಮಗ್ರಿಗಳನ್ನು ಕುಂಡ್‌ನಲ್ಲಿ ಎಸೆಯುವುದು, ಬೂಟುಗಳನ್ನು ಧರಿಸುವುದು... ಅಸಹ್ಯಕರ ಕೃತ್ಯ... ನಮ್ಮ ಆಚರಣೆಗಳನ್ನು ಗೌರವಿಸಲು ಸಾಧ್ಯವಾಗದಿದ್ದರೆ, ಅವುಗಳಿಂದ ದೂರವಿರಿ. ಸಾರ್ವಜನಿಕರನ್ನು ಮೂರ್ಖರನ್ನಾಗಿಸಲು ಮತ್ತು ಫೋಟೋ ತೆಗೆಯಲು ಹೀಗೆ ಮಾಡುವುದನ್ನು ನಿಲ್ಲಿಸಿ ಎಂದು ಅವರು ಹೇಳಿದ್ದಾರೆ.



ರಂಜನ್ ಸಿಂಗ್ ಎಂಬ ಮತ್ತೊಬ್ಬ ಬಳಕೆದಾರರು, "ಪಂಡಿತ್ ಜಿಗೆ ಯಾವುದೇ ಕೆಲಸವಿಲ್ಲ; ಎಲ್ಲರೂ ಒಟ್ಟಾಗಿ ಬಂದು ಹವನ ಮಾಡುತ್ತಾರೆ. ಪಂಡಿತರು ಇರುವುದಿಲ್ಲ, ಅಥವಾ ನಿಯಮಗಳು ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ಆನಂದ್ ದುಬೆ ಎಂಬ ಮೂರನೇ ಬಳಕೆದಾರರು "ಲಾಲು ಯಾದವ್ ಅಗ್ನಿಕುಂಡ ಮತ್ತು ಅಗ್ನಿ ದೇವರಿಗೆ ಉಪಕಾರ ಮಾಡುತ್ತಿದ್ದಾರೆ" ಎಂದು ಬರೆದಿದ್ದಾರೆ. "ಹಿಂದೂ ನಂಬಿಕೆಗೆ ಅವಮಾನ, ಇದು ಅಖಿಲೇಶ್-ಲಾಲು ರಾಜಕೀಯ! ಲಾಲು ಯಾದವ್ ಹವನದ ಸಮಯದಲ್ಲಿ ಶೂ ಧರಿಸಿ ಕುಳಿತಿದ್ದರು - ಇದು ಕೇವಲ ಅಜಾಗರೂಕತೆಯಲ್ಲ, ಇದು ಲಕ್ಷಾಂತರ ಹಿಂದೂಗಳ ಭಾವನೆಗಳ ಮೇಲಿನ ದಾಳಿ. ಅಖಿಲೇಶ್ ಯಾದವ್ ಅವರನ್ನು ನೋಡಿ, ದೇವಾಲಯ ಮತ್ತು ಧರ್ಮದ ಬಗ್ಗೆ ಮಾತು ಬಂದ ತಕ್ಷಣ ಬಾಯಿ ತೆಗೆಯುತ್ತಾರೆ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Bihar Assembly Elections: ಮತದಾರರ ಪಟ್ಟಿಯಲ್ಲಿ ಲಾಲೂ ಪುತ್ರ ತೇಜಸ್ವಿ ಯಾದವ್ ಹೆಸರಿಲ್ವಾ? ಚು.ಆಯೋಗ ಹೇಳಿದ್ದೇನು?

ಪವಿತ್ರ ಆಚರಣೆಗಳು ಪ್ರದರ್ಶನಕ್ಕಾಗಿ ಅಲ್ಲ. ಅವುಗಳನ್ನು ಶುದ್ಧತೆಯಿಂದ ಅನುಸರಿಸಿ ಅಥವಾ ಅವುಗಳನ್ನು ಮಾಡುವುದೇ ಬೇಡ ಎಂದು ಇನ್ನೂ ಕೆಲವರು ಹೇಳಿದ್ದಾರೆ.ಕರ್ಮ ಎಲ್ಲವನ್ನೂ ನೋಡುತ್ತಿರುತ್ತದೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.