ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 3rd Test: ನಿತೀಶ್‌ ರೆಡ್ಡಿಗೆ ತೆಲುಗಿನಲ್ಲೇ ಪ್ರಶಂಸೆ ವ್ಯಕ್ತಪಡಿಸಿದ ಶುಭಮನ್‌ ಗಿಲ್‌; ವಿಡಿಯೊ ವೈರಲ್‌

Shubman Gill speaks Telugu: ನಿತೀಶ್ ಕುಮಾರ್ ಅವರ ಇದೇ ಓವರ್‌ನಲ್ಲಿ ಗಲ್ಲಿ ಫೀಲ್ಡರ್ ಶುಭಮನ್ ಗಿಲ್ ಅವರು ಒಲಿ ಪೋಪ್ ಅವರ ಕ್ಯಾಚ್‌ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಒಂದೊಮ್ಮೆ ಅವರು ಈ ಕ್ಯಾಚ್‌ ಹಿಡಿಯುತ್ತಿದರೆ ನಿತೀಶ್ ಒಂದೇ ಓವರ್‌ನಲ್ಲಿ ಮೂರು ವಿಕೆಟ್‌ ಕಿತ್ತ ಸಾಧನೆ ಮಾಡುತ್ತಿದ್ದರು. ರೂಟ್‌ ಮತ್ತು ಓಲಿ ಪೋಪ್‌ ಮೂರನೇ ವಿಕೆಟ್‌ಗೆ 109 ರನ್‌ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ಅಪಾಯಕಾರಿಯಾಗಿದ್ದ ಈ ಜೊತೆಯಾಟವನ್ನು ರವೀಂದ್ರ ಜಡೇಜ ಮುರಿದರು.

ನಿತೀಶ್‌ ರೆಡ್ಡಿಗೆ ತೆಲುಗಿನಲ್ಲೇ ಪ್ರಶಂಸೆ ವ್ಯಕ್ತಪಡಿಸಿದ ಶುಭಮನ್‌ ಗಿಲ್‌

Profile Abhilash BC Jul 11, 2025 10:14 AM

ಲಂಡನ್‌: ಮೂರನೇ ಟೆಸ್ಟ್‌(IND vs ENG 3rd Test) ಪಂದ್ಯದ ಮೊದಲ ದಿನಾಟದಲ್ಲಿ ಇಂಗ್ಲೆಂಡ್‌ ಆರಂಭಿಕರಿಬ್ಬರ ವಿಕೆಟ್‌ ಕಿತ್ತು ಭಾರತಕ್ಕೆ ಮುನ್ನಡೆ ತಂದುಕೊಟ್ಟ ಆಲ್‌ರೌಂಡರ್‌ ನಿತೀಶ್‌ ರೆಡ್ಡಿ(Nitish Reddy)ಗೆ ನಾಯಕ ಶುಭಮನ್‌ ಗಿಲ್‌(Shubman Gill) ಅವರು ತೆಲುಗಿನಲ್ಲೇ ಪ್ರಶಂಸೆ ವ್ಯಕ್ತಪಡಿಸಿ(Shubman Gill speaks Telugu) ಗಮನ ಸೆಳೆದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

14ನೇ ಓವರ್‌ ಬೌಲಿಂಗ್ ಮಾಡಿದ ಆಲ್‌ರೌಂಡರ್ ನಿತೀಶ್ ಕುಮಾರ್ (35ಕ್ಕೆ2) ಅವರು ಮೂರು ಎಸೆತಗಳ ಅಂತರದಲ್ಲಿ ಡಕೆಟ್ ಮತ್ತು ಕ್ರಾಲಿ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಈ ಮೂಲಕ ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಇದೇ ಸಂತಸದಲ್ಲಿ ನಶಯಕ ಗಿಲ್‌ ಅವರು ತೆಲುಗಿನಲ್ಲಿ ʼಬಾಗುಂದಿ ರಾ ಮಾವಾʼ(ಚೆನ್ನಾಗಿದೆ ಮಾಮಾ) ಎಂದು ಹೇಳುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು. ಗಿಲ್‌ ಅವರ ಈ ಮಾತುಗಳು ಮೈಕ್‌ ಸ್ಟಂಪ್‌ನಲ್ಲಿ ಸೆರೆಯಾಗಿದೆ. ಸದ್ಯ ಗಿಲ್‌ ತೆಲುಗಿನಲ್ಲಿ ಮಾತನಾಡುವ ಮೂಲಕ ಆಂಧ್ರಪ್ರದೇಶದ ಅಭಿಮಾನಗಳ ಮನಗೆದ್ದಿದ್ದಾರೆ.

ನಿತೀಶ್ ಕುಮಾರ್ ಅವರ ಇದೇ ಓವರ್‌ನಲ್ಲಿ ಗಲ್ಲಿ ಫೀಲ್ಡರ್ ಶುಭಮನ್ ಗಿಲ್ ಅವರು ಒಲಿ ಪೋಪ್ ಅವರ ಕ್ಯಾಚ್‌ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಒಂದೊಮ್ಮೆ ಅವರು ಈ ಕ್ಯಾಚ್‌ ಹಿಡಿಯುತ್ತಿದರೆ ನಿತೀಶ್ ಒಂದೇ ಓವರ್‌ನಲ್ಲಿ ಮೂರು ವಿಕೆಟ್‌ ಕಿತ್ತ ಸಾಧನೆ ಮಾಡುತ್ತಿದ್ದರು. ರೂಟ್‌ ಮತ್ತು ಓಲಿ ಪೋಪ್‌ ಮೂರನೇ ವಿಕೆಟ್‌ಗೆ 109 ರನ್‌ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ಅಪಾಯಕಾರಿಯಾಗಿದ್ದ ಈ ಜೊತೆಯಾಟವನ್ನು ರವೀಂದ್ರ ಜಡೇಜ ಮುರಿದರು.



ಹ್ಯಾರಿ ಬ್ರೂಕ್‌ (11) ಅವರನ್ನು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಇರಲು ಬುಮ್ರಾ ಅವಕಾಶ ನೀಡಲಿಲ್ಲ. ಬಳಿಕ ರೂಟ್‌ ಅವರನ್ನು ಸೇರಿಕೊಂಡ ನಾಯಕ ಬೆನ್‌ ಸ್ಟೋಕ್ಸ್‌ ನಿಧಾನಗತಿಯಲ್ಲಿ ರನ್‌ ಕಲೆಹಾಕುತ್ತಿದ್ದಾರೆ. ಅವರಿಬ್ಬರು ಮುರಿಯದ ಐದನೇ ವಿಕೆಟ್‌ ಜತೆಯಾಟದಲ್ಲಿ 79 ರನ್‌ ಗಳಿಸಿ, ಎರಡನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ. 99 ರನ್‌ ಗಳಿಸಿರುವ ರೂಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ 3,000 ರನ್‌ (60 ಇನಿಂಗ್ಸ್‌) ಗಡಿ ದಾಟಿದರು. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರವಾದರು.