ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಏಷ್ಯನ್ ಕ್ರೀಡಾಕೂಟಕ್ಕೂ ಮುನ್ನ ಭಾರತಕ್ಕೆ ಮತ್ತೊಂದು ಹಿನ್ನಡೆ; ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಲುಕಿದ ಕುಸ್ತಿಪಟು

Asian Games 2026: ಇತ್ತೀಚೆಗೆ, ಭಾರತೀಯ ಕುಸ್ತಿ ಒಕ್ಕೂಟ (WFI) ಕುಸ್ತಿಪಟುಗಳು ಡೋಪಿಂಗ್ ವಿರೋಧಿ ವಿಷಯಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ಒತ್ತಾಯಿಸಿತ್ತು. ಸೂಕ್ತ ಅನುಮತಿಯಿಲ್ಲದೆ ಕುಸ್ತಿಪಟುಗಳು ರಾಷ್ಟ್ರೀಯ ಶಿಬಿರದಿಂದ ಹೊರಗುಳಿಯುವುದು ಡೋಪಿಂಗ್ ಪ್ರಕರಣಗಳ ಹಿಂದಿನ ಕಾರಣಗಳಲ್ಲಿ ಒಂದಾಗಿದೆ ಎಂದು WFI ಒತ್ತಿ ಹೇಳುತ್ತಿದೆ.

REPRESENTATIVE IMAGE

ನವದೆಹಲಿ, ಸೆ.10: ಏಷ್ಯನ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ಭಾರತಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಕುಸ್ತಿಪಟು ದೀಪಕ್ (ಗ್ರೀಕೋ-ರೋಮನ್ 67 ಕೆಜಿ) ನಿಷೇಧಿತ ವಸ್ತು ಸೇವನೆಯಲ್ಲಿ ಪಾಸಿಟಿವ್ ಬಂದಿದೆ. ಪರಿಣಾಮವಾಗಿ, ಭಾರತವು ಮೆಗಾ ಈವೆಂಟ್‌ನಲ್ಲಿ ತನ್ನ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಇದು ಕುಸ್ತಿ ವಿಭಾಗದಲ್ಲಿ ಕಂಡುಬಂದ ಮೂರನೇ ಪ್ರಕರಣವಾಗಿದೆ. ಇದಕ್ಕೂ ಮೊದಲು, ಮುಕುಲ್ ದಹಿಯಾ (ಫ್ರೀಸ್ಟೈಲ್ 86 ಕೆಜಿ) ಮತ್ತು ದೀಪಾಂಶು (ಗ್ರೀಕೋ-ರೋಮನ್ 130 ಕೆಜಿ) ನಿಷೇಧಿತ ಉದ್ದೀಪನ ಮದ್ದು ಸೇವಿಸಿರುವುದು ದೃಢಪಟ್ಟಿತ್ತು.

ಮುಕುಲ್ ದಹಿಯಾ ಅವರನ್ನು ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ (ನಾಡಾ) ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಹೀಗಾಗಿ ಅವರು ಏಷ್ಯನ್‌ ಗೇಮ್ಸ್‌ನಿಂದ ಹೊರಬಿದ್ದಿದ್ದಾರೆ. ಈದೇ ವರ್ಷ ನಡೆದಿದ್ದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ದಹಿಯಾ ಬೆಳ್ಳಿ ಗೆದ್ದಿದ್ದರು.

ಇತ್ತೀಚೆಗೆ, ಭಾರತೀಯ ಕುಸ್ತಿ ಒಕ್ಕೂಟ (WFI) ಕುಸ್ತಿಪಟುಗಳು ಡೋಪಿಂಗ್ ವಿರೋಧಿ ವಿಷಯಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ಒತ್ತಾಯಿಸಿತ್ತು. ಸೂಕ್ತ ಅನುಮತಿಯಿಲ್ಲದೆ ಕುಸ್ತಿಪಟುಗಳು ರಾಷ್ಟ್ರೀಯ ಶಿಬಿರದಿಂದ ಹೊರಗುಳಿಯುವುದು ಡೋಪಿಂಗ್ ಪ್ರಕರಣಗಳ ಹಿಂದಿನ ಕಾರಣಗಳಲ್ಲಿ ಒಂದಾಗಿದೆ ಎಂದು WFI ಒತ್ತಿ ಹೇಳುತ್ತಿದೆ.

ಭಾರತ ವಿರುದ್ಧದ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದ ಬ್ರೆಜಿಲ್

ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆಯ (WADA) ವರದಿಗಳ ಪ್ರಕಾರ, ಜಾಗತಿಕ ಮಟ್ಟದಲ್ಲಿ ಉದ್ದೀಪನ ಮದ್ದು ನಿಯಮಗಳನ್ನು ಉಲ್ಲಂಘಿಸುವ ದೇಶಗಳ ಪಟ್ಟಿಯಲ್ಲಿ ಭಾರತವು ಅತ್ಯಂತ ಅಪಾಯಕಾರಿ ಸ್ಥಾನದಲ್ಲಿದೆ. ಕೀನ್ಯಾವನ್ನು ಹಿಂದಿಕ್ಕಿ ಅತಿ ಹೆಚ್ಚು ಡೋಪಿಂಗ್ ಪ್ರಕರಣಗಳು ವರದಿಯಾಗುತ್ತಿರುವ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ವರದಿಗಳು ಕಳವಳ ವ್ಯಕ್ತಪಡಿಸಿವೆ. ಭಾರತದಲ್ಲಿ ಈ ಪಿಡುಗನ್ನು ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿವೆ ಎಂದು ವಾಡಾ ಅಧ್ಯಕ್ಷ ವಿಟೋಲ್ಡ್ ಬಾಂಕಾ ತಿಳಿಸಿದ್ದಾರೆ.

ನಗೋಯಾದಲ್ಲಿ ಪ್ರವಾಹ; 400 ಕ್ರೀಡಾಪಟುಗಳ ಸ್ಥಳಾಂತರ

ಜಪಾನ್‌ನ ಐಚಿ- ನಗೋಯಾದಲ್ಲಿ ಕ್ರೀಡಾಕೂಟ ಆರಂಭಕ್ಕೆ ಕೇವಲ 9 ದಿನಗಳು ಇರುವಾಗ ದಾಖಲೆಯ ಪ್ರವಾಹ ಸಂಭವಿಸಿದೆ. ಸೆಪ್ಟೆಂಬರ್ 8ರಂದು ಮಂಗಳವಾರ ಸುರಿದ ಭಾರಿ ಮಳೆಯಿಂದ ಮಧ್ಯ ಜಪಾನ್‌ ನ ನಗೋಯಾ ನಗರದ ಹಲವು ಭಾಗಗಳು ಜಲಾವೃತಗೊಂಡಿವೆ. ಹತ್ತಾರು ರಸ್ತೆಗಳು ಮತ್ತು ಮನೆಗಳಿಗೆ ನೀರು ನುಗ್ಗಿದ್ದು, ಬಸ್‌ ಹಾಗೂ ಮೆಟ್ರೊ ರೈಲು ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿದೆ. ಈಗಾಗಲೇ ನಗರಕ್ಕೆ ಆಗಮಿಸಿರುವ ಸುಮಾರು 400 ಕ್ರೀಡಾಪಟುಗಳು ಮತ್ತು ಸಹಾಯಕ ಸಿಬ್ಬಂದಿಯನ್ನು ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.