ಭಾರತ ವಿರುದ್ಧದ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದ ಬ್ರೆಜಿಲ್
Brazil squad for India clash: ಭಾರತ ತಂಡ ಬ್ರೆಜಿಲ್ ವಿರುದ್ಧದ ಪಂದ್ಯಕ್ಕೂ ಮುನ್ನ ಸೆಪ್ಟೆಂಬರ್ 26 ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಪನಾಮ ವಿರುದ್ಧ ಪಂದ್ಯವನ್ನಾಡಲಿದೆ. ಭಾರತದ 26 ಸದಸ್ಯರ ತಂಡ ಕೂಡ ಈಗಾಗಲೇ ಪ್ರಕಟಗೊಂಡಿದೆ. ತಂಡದಲ್ಲಿ ನಾಲ್ವರು ಗೋಲ್‌ಕೀಪರ್‌ಗಳು, ಎಂಟು ಡಿಫೆಂಡರ್‌ಗಳು, ಎಂಟು ಮಿಡ್‌ಫೀಲ್ಡರ್‌ಗಳು ಮತ್ತು ಆರು ಫಾರ್ವರ್ಡ್‌ಗಳಿದ್ದಾರೆ.
Brazil squad for India clash -
ನವದೆಹಲಿ, ಸೆ.10: ಅಕ್ಟೋಬರ್ 3 ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಸೌಹಾರ್ದ ಪಂದ್ಯಕ್ಕಾಗಿ ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ತನ್ನ 26 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮುಖ್ಯ ತರಬೇತುದಾರ ಕಾರ್ಲೊ ಅನ್ಸೆಲೋಟಿ ಅವರು ವಿನಿಸಿಯಸ್ ಜೂನಿಯರ್, ರಾಫಿನ್ಹಾ, ಎಂಡ್ರಿಕ್ ಮತ್ತು ಬ್ರೂನೋ ಗೈಮರೇಸ್ ಸೇರಿದಂತೆ ಹಲವಾರು ಅನುಭವಿ ಹೆಸರುಗಳನ್ನು ಒಳಗೊಂಡ ಬಲಿಷ್ಠ ತಂಡವನ್ನು ಹೆಸರಿಸಿದ್ದಾರೆ. ತಂಡವು ಮೂರು ಬ್ಯಾಲನ್ ಡಿ'ಓರ್ ನಾಮನಿರ್ದೇಶಿತರನ್ನು ಸಹ ಒಳಗೊಂಡಿದೆ.
ಬ್ರೆಜಿಲ್ ತಂಡವು ಭಾರತ ವಿರುದ್ಧದ ಪಂದ್ಯಕ್ಕಾಗಿ ಕೋಲ್ಕತ್ತಾಗೆ ಪ್ರಯಾಣಿಸುವ ಮೊದಲು ಸೆಪ್ಟೆಂಬರ್ 25 ಮತ್ತು 29 ರಂದು ಆಸ್ಟ್ರೇಲಿಯಾವನ್ನು ಎರಡು ಬಾರಿ ಎದುರಿಸಲಿದೆ. ಬ್ರೂನೋ ಗೈಮಾರೆಸ್ ಮತ್ತು ಡೌಗ್ಲಾಸ್ ಲೂಯಿಜ್ ಮಿಡ್‌ಫೀಲ್ಡ್ ಗುಂಪಿನ ಮುಖ್ಯ ಆಟಗಾರಾಗಿದ್ದಾರೆ. ಜತೆಗೆ ಆಂಡ್ರೆ ಸ್ಯಾಂಟೋಸ್, ಬ್ರೆನೋ ಬಿಡೋನ್, ಡ್ಯಾನಿಲೋ ಸ್ಯಾಂಟೋಸ್ ಮತ್ತು ಗೇಬ್ರಿಯಲ್ ಬೊಂಟೆಂಪೊ ಸೇರಿದ್ದಾರೆ.
ಹ್ಯೂಗೋ ಸೌಜಾ, ಪೆಡ್ರೊ ಮೊರಿಸ್ಕೊ ಮತ್ತು ಒಟಾವಿಯೊ ಆನ್ಸೆಲೋಟಿ ತಂಡದಲ್ಲಿರುವ ಮೂವರು ಗೋಲ್‌ಕೀಪರ್‌ಗಳಾಗಿದ್ದಾರೆ. ಈ ಪಂದ್ಯವು ಖಾಲಿದ್ ಜಮಿಲ್ ನೇತೃತ್ವದ ಭಾರತ ತಂಡಕ್ಕೆ ಅಂತರರಾಷ್ಟ್ರೀಯ ಫುಟ್‌ಬಾಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದರ ವಿರುದ್ಧ ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ. ಭಾರತದಲ್ಲಿ ಬ್ರೆಜಿಲ್ ತಂಡ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.
ಪನಾಮ, ಬ್ರೆಜಿಲ್, ಉರುಗ್ವೆ ವಿರುದ್ಧದ ಪಂದ್ಯಕ್ಕೆ ಭಾರತ ತಂಡ ಪ್ರಕಟ
ಭಾರತ ತಂಡ ಬ್ರೆಜಿಲ್ ವಿರುದ್ಧದ ಪಂದ್ಯಕ್ಕೂ ಮುನ್ನ ಸೆಪ್ಟೆಂಬರ್ 26 ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಪನಾಮ ವಿರುದ್ಧ ಪಂದ್ಯವನ್ನಾಡಲಿದೆ. ಭಾರತದ 26 ಸದಸ್ಯರ ತಂಡ ಕೂಡ ಈಗಾಗಲೇ ಪ್ರಕಟಗೊಂಡಿದೆ. ತಂಡದಲ್ಲಿ ನಾಲ್ವರು ಗೋಲ್‌ಕೀಪರ್‌ಗಳು, ಎಂಟು ಡಿಫೆಂಡರ್‌ಗಳು, ಎಂಟು ಮಿಡ್‌ಫೀಲ್ಡರ್‌ಗಳು ಮತ್ತು ಆರು ಫಾರ್ವರ್ಡ್‌ಗಳಿದ್ದಾರೆ. ಗುರುಪ್ರೀತ್ ಸಿಂಗ್ ಸಂಧು, ಅನಿರುದ್ಧ್ ಥಾಪಾ, ಅನ್ವರ್ ಅಲಿ ಮತ್ತು ಮನ್ವೀರ್ ಸಿಂಗ್ ಅವರಂತಹ ಅನುಭವಿ ಹೆಸರುಗಳು ಸೇರಿವೆ.
ಬ್ರೆಜಿಲ್ ತಂಡ
ಗೋಲ್‌ಕೀಪರ್‌ಗಳು: ಹ್ಯೂಗೋ ಸೌಜಾ, ಪೆಡ್ರೊ ಮೊರಿಸ್ಕೊ, ಒಟಾವಿಯೊ.
ಡಿಫೆಂಡರ್ಸ್: ಆರ್ಥರ್ ಡಯಾಸ್, ಡೌಗ್ಲಾಸ್ ಸ್ಯಾಂಟೋಸ್, ಗೇಬ್ರಿಯಲ್ ಮ್ಯಾಗಲ್ಹೇಸ್, ಜೈರ್, ಮಾರ್ಕ್ವಿನೋಸ್, ಮ್ಯಾಥ್ಯುಜಿನ್ಹೋ, ಮೌರೊ ಜೂನಿಯರ್, ವಿಟರ್ ರೀಸ್, ವೆಸ್ಲಿ.
ಮಿಡ್‌ಫೀಲ್ಡರ್‌ಗಳು: ಆಂಡ್ರೆ ಸ್ಯಾಂಟೋಸ್, ಬ್ರೆನೋ ಬಿಡೋನ್, ಬ್ರೂನೋ ಗೈಮಾರೆಸ್, ಡ್ಯಾನಿಲೋ ಸ್ಯಾಂಟೋಸ್, ಡೌಗ್ಲಾಸ್ ಲೂಯಿಜ್, ಗೇಬ್ರಿಯಲ್ ಬೊಂಟೆಂಪೊ.
ಫಾರ್ವರ್ಡ್‌ಗಳು: ಎಂಡ್ರಿಕ್, ಎಸ್ಟೆವಾವೊ, ಜೊವೊ ಪೆಡ್ರೊ, ಪೆಡ್ರೊ, ರಾಫಿನ್ಹಾ, ರಾಯನ್, ಸ್ಯಾಮ್ಯುಯೆಲ್ ಲಿನೊ, ವಿನಿಸಿಯಸ್ ಜೂನಿಯರ್.