ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Navaratri Saree Fashion 2025: ನವರಾತ್ರಿಯ ಒಂದೊಂದು ದಿನವೂ ಒಂದೊಂದು ಬಣ್ಣದ ಸೀರೆ

Navaratri Saree Fashion 2025: ನವರಾತ್ರಿಯ ಪ್ರತಿದಿನವೂ ಒಂದೊಂದು ಬಣ್ಣಕ್ಕೆ ಆದ್ಯತೆ. ಈ ಸೆಲೆಬ್ರೇಷನ್‌ನಲ್ಲಿ ಟ್ರೆಂಡಿಯಾಗಿರುವ ಎಥ್ನಿಕ್ ಸೀರೆಯನ್ನು ಉಟ್ಟು, ಸ್ಟೈಲಿಂಗ್ ಮಾಡಿ, ಸಂಭ್ರಮಿಸಿ! ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್. ಈ ಕುರಿತಂತೆ ಅವರು ಸೀರೆ ಪ್ರಿಯರಿಗೆ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.

ನವರಾತ್ರಿಯ ಒಂದೊಂದು ದಿನವೂ ಒಂದೊಂದು ಬಣ್ಣದ ಸೀರೆ

ಚಿತ್ರಗಳು: ಫ್ಯಾಷನ್ ಎಕ್ಸ್‌ಪರ್ಟ್ ಪ್ರಿಯಾ ಕುಮಾರ್ ಹಾಗೂ ಸ್ನೇಹಿತೆಯರು. -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನವರಾತ್ರಿಯ ಒಂದೊಂದು ದಿನವೂ ಮಾನಿನಿಯರು ಒಂದೊಂದು ಬಣ್ಣದ ಸೀರೆ ಉಟ್ಟು ಸಂಭ್ರಮಿಸುವುದು ಇತ್ತೀಚಿನ ವರ್ಷಗಳಲ್ಲಿ ಟ್ರೆಂಡಿಯಾಗಿದೆ. (Navaratri Saree Fashion 2025) ಈ ಬಾರಿಯ ಬಣ್ಣ ಬಣ್ಣದ ಸೀರೆಗಳ ಸ್ಟೈಲಿಂಗ್ ಕುರಿತಂತೆ ಇಲ್ಲಿದೆ ಎಕ್ಸ್‌ಪರ್ಟ್ಸ್ ಟಿಪ್ಸ್.

ಯೆಲ್ಲೋ ಬಣ್ಣದಲ್ಲಿ ಬ್ರೈಟ್ ಲುಕ್

ಸೆಪ್ಟೆಂಬರ್ 22 ರಂದು ಖುಷಿಯನ್ನು ಪ್ರತಿನಿಧಿಸುವ ಹಳದಿ ವರ್ಣ. ಇದೀಗ ಸೀರೆ ಲೋಕದಲ್ಲಿ ಬಗೆಬಗೆಯ ಹಳದಿಯೂ ಟ್ರೆಂಡಿಯಾಗಿದೆ. ಡಿಸೈನರ್ ಸೀರೆ, ಸಿಲ್ಕ್ ಸೀರೆ ಹೀಗೆ ಯಾವುದಾದರೂ ಸರಿಯೇ, ನಿಮ್ಮ ಇಷ್ಟದ ಸೀರೆಯುಟ್ಟು ಬ್ರೈಟ್ ಆಗಿ ಕಾಣಿಸಿಕೊಳ್ಳಿ.

Navaratri Saree Fashion 2025 1

ಹಸಿರು ಸೀರೆ ಉಟ್ಟು ಪರಿಸರ ಪ್ರೇಮ ತೋರ್ಪಡಿಸಿ

ಸೆಪ್ಟೆಂಬರ್ 23 ರಂದು ಪ್ರಕೃತಿಯನ್ನು ಪ್ರತಿನಿಧಿಸುವ ಹಸಿರು ಬಣ್ಣದ ಕಾರುಬಾರು. ಈ ದಿನ ಹಸಿರಿನ ನಾನಾ ಶೇಡ್‌ಗಳನ್ನು ಹೊಂದಿದ ಸೀರೆಗಳಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡು ಪರಿಸರ ಪ್ರೇಮಿಗಳಂತೆ ಮಿಂಚಬಹುದು

ಬೂದಿ .ಬಣ್ಣದಲ್ಲೂ ಅಂದವಾಗಿ ಕಾಣಿಸಿಕೊಳ್ಳಿ

ಸೆಪ್ಟೆಂಬರ್ 24ರಂದು ಡಲ್ ಕಲರ್ ಎನ್ನಲಾಗುವ ಬೂದು ಬಣ್ಣಕ್ಕೆ ಆದ್ಯತೆ. ಈ ದಿನ ಈ ಕಲರ್‌ನ ಸೀರೆಯನ್ನು ಕೊಂಚ ವಿಭಿನ್ನವಾಗಿ ಡ್ರೇಪ್ ಮಾಡಿ, ಉಡಿ. ಇದಕ್ಕೆ ಆಕ್ಸಿಡೈಸ್ಡ್ ಜ್ಯುವೆಲರಿ ಧರಿಸಿ, ಆಕರ್ಷಕವಾಗಿ ಕಾಣಿಸುವಿರಿ.

ನೀಲಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಳ್ಳಿ

ಸೆಪ್ಟೆಂಬರ್ 25 ರಂದು ಡಿವೈನ್ ಎನರ್ಜಿ ಪ್ರತಿನಿಧಿಸುವ ನೀಲಿ ಅಥವಾ ರಾಯಲ್ ಬ್ಲ್ಯೂ ವರ್ಣದ ಸೀರೆಯುಟ್ಟು ನಲಿದಾಡಬಹುದು. ಈ ಸೀರೆಗೆ ಸ್ಟೇಟ್ಮೆಂಟ್ ಜ್ಯುವೆಲರಿಗಳು ಆಕರ್ಷಕವಾಗಿ ಕಾಣಿಸುತ್ತದೆ.

Navaratri Saree Fashion 2025 2

ಶ್ವೇತವರ್ಣದ ಸೀರೆಯುಟ್ಟು ಶಾಂತಿ ಪ್ರಿಯರಾಗಿ

ಸೆಪ್ಟೆಂಬರ್ 26 ರಂದು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ವೈಟ್ ಕಲರ್‌ನ ಅರ್ಗಾನ್ಜಾ, ಟಿಶ್ಯೂ, ಜಾರ್ಜೆಟ್, ಸೆಮಿ ಕ್ರೇಪ್ ಡಿಸೈನರ್ ಸೀರೆಗಳಲ್ಲಿ ಕಾಣಿಸಿಕೊಳ್ಳಬಹುದು. ಪರ್ಲ್ ಆಭರಣಗಳು ಈ ಸೀರೆಗೆ ಮ್ಯಾಚ್ ಆಗುತ್ತವೆ.

ಕೆಂಪು ವರ್ಣದಲ್ಲಿ ಕಂಗೊಳಿಸಿ

ಸೆಪ್ಟೆಂಬರ್ 27 ರಂದು ಕೆಂಪು ಕಲರ್‌ಗೆ ಪ್ರಾಧಾನ್ಯತೆ. ಈ ದಿನದಂದು ಟ್ರೆಂಡ್‌ನಲ್ಲಿರುವ ಸಿಲ್ವರ್ ಹಾಗೂ ಗೋಲ್ಡನ್ ಬಾರ್ಡರ್ ಇರುವಂತಹ ರೇಷ್ಮೆ ಹಾಗೂ ಜಾರ್ಜೆಟ್ ಸೀರೆಗಳನ್ನು ಉಡಬಹುದು. ಗೋಲ್ಡ್ ಅಥವಾ ಕೆಂಪು ಹರಳಿನ ಜ್ಯುವೆಲರಿಗಳನ್ನು ಮ್ಯಾಚ್ ಮಾಡಬಹುದು.

ಪೀಕಾಕ್ ಗ್ರೀನ್ ಸೀರೆಯ ಕಮಾಲ್

ಪೀಕಾಕ್ ಬ್ಲ್ಯೂನಲ್ಲಿ ಡಬ್ಬಲ್ ಶೇಡ್ ಹೊಂದಿರುವ ಸೀರೆಗಳು ಇಂದು ಟ್ರೆಂಡಿಯಾಗಿವೆ. ಅವನ್ನು ಸೆಪ್ಟೆಂಬರ್ 28 ರಂದು ಉಟ್ಟು ಸಂಭ್ರಮಿಸಬಹುದು. ಟೆಂಪಲ್ ಜ್ಯುವೆಲರಿಗಳು ಈ ಸೀರೆಯ ಅಂದ ಹೆಚ್ಚಿಸುತ್ತವೆ.

ಉಲ್ಲಾಸ ಹೆಚ್ಚಿಸುವ ಆರೆಂಜ್ ವರ್ಣದ ಸೀರೆ

ಸೆಪ್ಟೆಂಬರ್ 29 ಭಾನುವಾರದಂದು, ಬೆಳಕು ಹಾಗೂ ಜ್ಞಾನದ ಪ್ರತೀಕವಾದ ಆರೆಂಜ್ ವರ್ಣದ ಸೀರೆಗಳನ್ನು ಉಡಬಹುದು. ಈ ಕಲರ್ ಸೀರೆಗಳು ಎಂತಹವರನ್ನು ಆಕರ್ಷಕವಾಗಿ ಬಿಂಬಿಸುತ್ತವೆ.

ಉಲ್ಲಾಸ ಹೆಚ್ಚಿಸುವ ಗುಲಾಬಿ ಕಲರ್ ಸೀರೆ

ಇನ್ನು, ಸೆಪ್ಟೆಂಬರ್ 30ರಂದು ಹೆಣ್ಣುಮಕ್ಕಳ ಫೇವರೇಟ್ ಬಣ್ಣದ ಗುಲಾಬಿ ವರ್ಣದ ಸೀರೆಗಳಿಗೆ ಆದ್ಯತೆ. ಈ ವರ್ಣದ ಸೀರೆಯನ್ನು ಹೇಗೆ ಡ್ರೇಪಿಂಗ್ ಮಾಡಿದರೂ ಚೆನ್ನಾಗಿಯೇ ಕಾಣಿಸುತ್ತದೆ. ಇವಕ್ಕೆ ವಿಕ್ಟೋರಿಯನ್ ಹಾಗೂ ಹರಳಿನ ಜುವೆಲರಿ ಧರಿಸಿದಲ್ಲಿ, ಮತ್ತಷ್ಟು ಅಂದ ಹೆಚ್ಚುತ್ತದೆ.

ನೇರಳೆ ಸೀರೆಯ ಅಂದ

ಅಕ್ಟೋಬರ್ 1ರಂದು ನೇರಳೆ ಬಣ್ಣ. ಈ ಬಣ್ಣ ಕೂಡ ಮುಖದ ಅಂದವನ್ನು ಹೈಲೈಟ್ ಮಾಡುತ್ತದೆ. ಟ್ರೆಡಿಷನಲ್ ಸೀರೆ ಲುಕ್ ಚೆನ್ನಾಗಿ ಕಾಣಿಸುತ್ತದೆ. ಡಿಸೈನರ್ ಸೀರೆಯಾದಲ್ಲಿ ಇಂಡೋ-ವೆಸ್ಟರ್ನ್ ಸ್ಟೈಲಿಂಗ್ ಮಾಡಬಹುದು.

ಈ ಸುದ್ದಿಯನ್ನೂ ಓದಿ | Navaratri Jewel trend 2025: ನವರಾತ್ರಿ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಜ್ಯುವೆಲರಿಗಳಿವು