IND vs PAK: ಪಾಕ್ ವಿರೋಧದ ಮಧ್ಯೆಯೂ ಸೂಪರ್ 4 ಪಂದ್ಯಕ್ಕೆ ಪೈಕ್ರಾಫ್ಟ್ ಮ್ಯಾಚ್ ರೆಫರಿ
ಕ್ರಿಕೆಟ್ ಸೇರಿ ಯಾವುದೇ ಕ್ರೀಡೆಯಲ್ಲೂ ಆಟಗಾರರು ಪರಸ್ಪರ ಕೈಕುಲುಕುವುದು, ಅಭಿನಂದನೆ ಸಲ್ಲಿಸುವುದು ವಾಡಿಕೆ. ಆದರೆ ಇದು ಕ್ರೀಡಾಸ್ಫೂರ್ತಿಯ ಭಾಗ ಮಾತ್ರವಾಗಿದ್ದು, ಕಡ್ಡಾಯವೇನಲ್ಲ. ತಜ್ಞರ ಪ್ರಕಾರ, ಹ್ಯಾಂಡ್‌ಶೇಕ್ ನಿರಾಕರಿಸುವುದು ತಾಂತ್ರಿಕವಾಗಿ ನಿಯಮ ಉಲ್ಲಂಘನೆ ಎಂದು ಪರಿಗಣಿಸಬಹುದಾದರೂ, ಅಂತಹ ಉಲ್ಲಂಘನೆಗಳಿಗೆ ದಂಡಗಳು ಹೇರುವ ಕ್ರಮವಿಲ್ಲ.

-

ದುಬೈ: ಇಂದು ನಡೆಯುವ ಭಾರತ ಹಾಗೂ ಪಾಕಿಸ್ತಾನ(IND vs PAK) ನಡುವಿನ ಏಷ್ಯಾಕಪ್ ಹೈವೋಲ್ಟೇಜ್ ಸೂಪರ್ 4(Asia Cup 2025) ಪಂದ್ಯಕ್ಕೂ ಮ್ಯಾಚ್ ರೆಫ್ರಿಯಾಗಿ ಆ್ಯಂಡಿ ಪೈಕ್ರಾಫ್ಟ್(Andy Pycroft) ಅವರನ್ನು ನೇಮಕಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಭಾನುವಾರ ನಡೆದಿದ್ದ ಲೀಗ್ ಹಂತದ ಮೊದಲ ಮುಖಾಮುಖಿಯಲ್ಲಿ ಭಾರತೀಯ ಆಟಗಾರರು ಶೇಕ್‌ಹ್ಯಾಂಡ್ ಮಾಡದ್ದಕ್ಕೆ ಪಾಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ, ಶೇಕ್‌ಹ್ಯಾಂಡ್ ಸಂಘರ್ಷಕ್ಕೆ ಮ್ಯಾಚ್ ರೆಫ್ರಿ ಆ್ಯಂಡ್ರಿ ಪಿಕ್ರಾಫ್ಟ್ ಕಾರಣ ಎಂದು ಪಾಕ್ ದೂರಿ ಅವರನ್ನು ಟೂರ್ನಿಯಿಂದಲೇ ವಜಾಗೊಳಿಸಲು ಐಸಿಸಿಗೆ ಆಗ್ರಹಿಸಿತ್ತು. ಆದರೆ ಪಿಸಿಬಿಯ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು.
ಇಂದು ರಾತ್ರಿ ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೂ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮ್ಯಾಚ್ ರೆಫ್ರಿಯಾಗಿ ಆಂಡಿ ಪೈಕ್ರಾಫ್ಟ್ ಇರಲಿದ್ದಾರೆ ಎಂದು ತಿಳಿಸಿರುವುದಾಗಿ ಪಿಟಿಐಗೆ ವರದಿ ಮಾಡಿದೆ.
ಇದನ್ನೂ ಓದಿ Asia Cup 2025: ಪಾಕ್ ವಿರುದ್ಧ ಕ್ರಮಕ್ಕೆ ಮುಂದಾದ ಐಸಿಸಿ
ಸೂಪರ್-4 ಪಂದ್ಯದಲ್ಲಿ ಭಾರತೀಯ ಆಟಗಾರರು ಶೇಕ್‌ಹ್ಯಾಂಡ್ ಮಾಡದಿದ್ದರು ಪಾಕ್ ತಗಾದೆ ತೆಗೆಯದೆ ಟೂರ್ನಿಯಲ್ಲಿ ಮುಂದುವರಿಯಲಿದೆ. ಈಗಾಗಲೇ ಪಾಕ್‌ಗೆ ಐಸಿಸಿ ಎಚ್ಚರಿಕೆಯನ್ನು ಕೂಡ ನೀಡಿದೆ. ಶಿಷ್ಟಾಚಾರ ಉಲ್ಲಂಘಿಸಿದ ಕಾರಣ ತಂಡದ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಐಸಿಸಿ ಚಿಂತನೆ ನಡೆಸಿದೆ. ಇದರಿಂದ ಪಾಕ್ ಬಾಲ ಬಿಚ್ಚುವಂತಿಲ್ಲ.