ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆರ್ಚರಿ ವಿಶ್ವಕಪ್‌; ಒಲಿಂಪಿಕ್ ಚಾಂಪಿಯನ್‌ಗೆ ಆಘಾತವಿಕ್ಕಿ ಚಿನ್ನ ಗೆದ್ದ ಭಾರತ ಮಿಶ್ರ ತಂಡ

2022 ರಲ್ಲಿ ಅಂಟಾಲ್ಯದಲ್ಲಿಯೇ ನಡೆದಿದ್ದ ಈ ಟೂರ್ನಿಯಲ್ಲಿ ರಿಕರ್ವ್ ಮಿಶ್ರ ತಂಡ ಚಿನ್ನ ಗೆದ್ದಿತ್ತು. ಆಗ ರಿಧಿ ಫೋರ್ ಮತ್ತು ತರುಣ್‌ದೀಪ್ ರೈ ಅವರು ಗ್ರೇಟ್ ಬ್ರಿಟನ್‌ನ ಬ್ರಯೋನಿ ಪಿಟ್‌ಮನ್ ಮತ್ತು ಅಲೆಕ್ಸ್ ವೈಸ್ ಅವರನ್ನು ಶೂಟ್-ಆಫ್‌ನಲ್ಲಿ ಸೋಲಿಸಿದ್ದರು. ಇದೀ 4 ವರ್ಷದ ಬಳಿಕ ಇಲ್ಲಿ ಭಾರತೀಯ ಮಿಶ್ರ ತಂಡ ಚಿನ್ನ ಗೆದ್ದಿದೆ.

Dhiraj Bommadevara and Kumkum Mohod

ನವದೆಹಲಿ, ಜೂ.14: ಭಾನುವಾರ ನಡೆದ ಆರ್ಚರಿ ವಿಶ್ವಕಪ್(Archery World Cup) ಹಂತ 3ರಲ್ಲಿ ಫೈನಲ್‌ ಪಂದ್ಯದಲ್ಲಿ ಭಾರತದ ಮಿಶ್ರ ತಂಡ ವಿಭಾಗದಲ್ಲಿ ಧೀರಜ್ ಬೊಮ್ಮದೇವರ ಮತ್ತು ಕುಂಕುಮ್ ಮೊಹೋದ್ ಜೋಡಿಯು ಒಲಿಂಪಿಕ್ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಮಣಿಸಿ ಚಿನ್ನದ ಪದಕಕ್ಕೆ ಗುರಿಯಿಸಿದ್ದಾರೆ.

ಓಹ್ ಯೆಜಿನ್ ಮತ್ತು ಕಿಮ್ ಜೆ ಡಿಯೋಕ್ ವಿರುದ್ಧದ ತೀವ್ರ ಪೈಪೋಟಿಯ ಹಣಾಹಣಿಯಲ್ಲಿ ಭಾರತೀಯ ಜೋಡಿಯು ಅಸಾಧಾರಣ ಪ್ರದರ್ಶನ ನೀಡಿ ನಿರ್ಣಾಯಕ ಕ್ಷಣಗಳಲ್ಲಿ ಮುನ್ನಡೆ ಸಾಧಿಸಿ ಮೆರೆದಾಡಿತು. 5-1 (37-36, 37-36, 39-39) ಅಂತರದಿಂದ ಸೋಲಿಸಿತು. ಅಂತಿಮ ಹಂತದಲ್ಲಿ ಧೀರಜ್ ತಮ್ಮ ಎಲ್ಲ ಬಾಣಗಳನ್ನು ಸತತವಾಗಿ ಪರಿಪೂರ್ಣ 10 ಅಂಕಕ್ಕೆ ಗುರಿಯಿರಿಸಿದರು. 17 ವರ್ಷದ ಕುಂಕುಮ್ ಅವರು ತನ್ನ ವಯಸ್ಸಿಗೆ ಮೀರಿದ ಪ್ರದರ್ಶನವನ್ನು ತೋರಿದರು. ಈ ಋತುವಿನ ಆರಂಭದಲ್ಲಿ ಶಾಂಘೈ ವಿಶ್ವಕಪ್ ಹಂತ 2 ರಲ್ಲಿ ಯಶಸ್ಸನ್ನು ಕಂಡಿದ್ದರು, ಅಲ್ಲಿ ಅವರು ಚಿನ್ನ ಗೆದ್ದ ಭಾರತದ ಮಹಿಳಾ ರಿಕರ್ವ್ ತಂಡದ ಭಾಗವಾಗಿದ್ದರು.

ಫಿಫಾ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಭಾರತೀಯ ಮೂಲದ ನಿಶಾನ್ ವೇಲುಪಿಳ್ಳೈ

ಈ ಗೆಲುವು ಮಿಶ್ರ ತಂಡ ವಿಭಾಗದಲ್ಲಿ ಇಬ್ಬರೂ ಬಿಲ್ಲುಗಾರರಿಗೆ ಲಭಿಸಿದ ಮೊದಲ ವಿಶ್ವಕಪ್ ಚಿನ್ನದ ಪದಕವಾಗಿದೆ. ಪ್ರಸ್ತುತ ಭಾರತದ ಅಗ್ರ ಶ್ರೇಯಾಂಕಿತ ಬಿಲ್ಲುಗಾರರಾಗಿರುವ ಧೀರಜ್ ಅವರ ಈ ಗೆಲುವು ಅಂತರರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಅವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ. ವೈಯಕ್ತಿಕ ವಿಭಾಗದಲ್ಲಿ ಅವರು ಸೆಮಿಫೈನಲ್‌ನಲ್ಲಿ ಆಡಲಿದ್ದಾರೆ.



2022 ರಲ್ಲಿ ಅಂಟಾಲ್ಯದಲ್ಲಿಯೇ ನಡೆದಿದ್ದ ಈ ಟೂರ್ನಿಯಲ್ಲಿ ರಿಕರ್ವ್ ಮಿಶ್ರ ತಂಡ ಚಿನ್ನ ಗೆದ್ದಿತ್ತು. ಆಗ ರಿಧಿ ಫೋರ್ ಮತ್ತು ತರುಣ್‌ದೀಪ್ ರೈ ಅವರು ಗ್ರೇಟ್ ಬ್ರಿಟನ್‌ನ ಬ್ರಯೋನಿ ಪಿಟ್‌ಮನ್ ಮತ್ತು ಅಲೆಕ್ಸ್ ವೈಸ್ ಅವರನ್ನು ಶೂಟ್-ಆಫ್‌ನಲ್ಲಿ ಸೋಲಿಸಿದ್ದರು. ಇದೀ 4 ವರ್ಷದ ಬಳಿಕ ಇಲ್ಲಿ ಭಾರತೀಯ ಮಿಶ್ರ ತಂಡ ಚಿನ್ನ ಗೆದ್ದಿದೆ.

ಈ ಋತುವಿನಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಧೀರಜ್ ಮತ್ತು ಕುಂಕುಮ್ ಸ್ಪರ್ಧೆಯ ಉದ್ದಕ್ಕೂ ತಮ್ಮ ಧೈರ್ಯವನ್ನು ಮೆರೆದರು, ಒತ್ತಡದಲ್ಲಿ ನಿರ್ಣಾಯಕ ಹೊಡೆತಗಳನ್ನು ಹೊಡೆದರು. ವಿಶ್ವದ 16ನೇ ಸ್ಥಾನದಲ್ಲಿರುವ ಭಾರತದ ಅತ್ಯುನ್ನತ ಶ್ರೇಯಾಂಕಿತ ರಿಕರ್ವ್ ಬಿಲ್ಲುಗಾರ ಪ್ಯಾರಿಸ್ ಒಲಿಂಪಿಯನ್ ಧೀರಜ್, ಪಂದ್ಯದ ಕೊನೆಯ ಬಾಣದಲ್ಲಿ ಪರಿಪೂರ್ಣ 10 ಅಂಕಗಳನ್ನು ಗಳಿಸುವ ಮೂಲಕ ವಿಜಯವನ್ನು ತಮ್ಮದಾಗಿಸಿಕೊಂಡರು.