ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫಿಫಾ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಭಾರತೀಯ ಮೂಲದ ನಿಶಾನ್ ವೇಲುಪಿಳ್ಳೈ

2024ರ ಅಕ್ಟೋಬರ್‌ನಲ್ಲಿ ಚೀನಾ ವಿರುದ್ಧದ ಪಂದ್ಯದ ಮೂಲಕ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅವರು ತಮ್ಮ ಮೊದಲ ಪಂದ್ಯದಲ್ಲೇ ಗೋಲು ಬಾರಿಸಿ ಗಮನ ಸೆಳೆದಿದ್ದರು. ಇದೀಗ ಕನಸಿನ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿಯೂ ಆಡಿದ್ದಾರೆ.

ಫಿಫಾ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ನಿಶಾನ್ ವೇಲುಪಿಳ್ಳೈ ಯಾರು?

nishan velupillay -

Abhilash BC
Abhilash BC Jun 14, 2026 5:06 PM

ನ್ಯೂಯಾರ್ಕ್‌, ಜೂ. 14: ಫಿಫಾ ವಿಶ್ವಕಪ್‌ ಟೂರ್ನಿಯ(FIFA World Cup 2026)ಲ್ಲಿ ಭಾರತ ತಂಡ ಆಡದಿದ್ದರೂ, ಭಾರತೀಯ ಮೂಲಕ ಹಲವು ಆಟಗಾರರು ಬೇರೆ ದೇಶದ ಪರ ಆಡುತ್ತಿದ್ದಾರೆ. ಭಾನುವಾರ ನಡೆದ ಟರ್ಕಿ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ 2-0 ಅಂತರದ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಭಾರತೀಯ ಮೂಲದ ನಿಶಾನ್ ವೇಲುಪಿಳ್ಳೆ ಆಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಫಿಫಾ ಟೂರ್ನಿಯಲ್ಲಿ ಚೊಚ್ಚಲ ಪಂದ್ಯವನ್ನಾಡಿದರು.

ಮೆಲ್ಬೋರ್ನ್‌ನಲ್ಲಿ ಜನಿಸಿದ 25 ವರ್ಷದ ನಿಶಾನ್ ವೇಲುಪಿಳ್ಳೈ ಅವರ ತಾಯಿ ಆಂಗ್ಲೋ-ಇಂಡಿಯನ್ ಮತ್ತು ತಂದೆ ಶ್ರೀಲಂಕಾ ತಮಿಳು ಮೂಲದವರಾಗಿದ್ದಾರೆ. ಮಲೇಷ್ಯಾಕ್ಕೆ ವಲಸೆ ಹೋಗಿದ್ದರು. ಆ ಬಳಿಕ ಆಸ್ಟ್ರೇಲಿಯಾದಲ್ಲಿ ನೆಲೆಸಿದರು. ಬಾಲ್ಯದಿಂದಲೇ ಫುಟ್ಬಾಲ್‌ ಮೇಲೆ ಪ್ರೀತಿ ಹೊಂದಿದ್ದ ನಿಶಾನ್ ವೇಲುಪಿಳ್ಳೈ ಮೆಲ್ಬೋರ್ನ್ ವಿಕ್ಟರಿ ಕ್ಲಬ್ ಪರ ಆಡುವ ಮೂಲಕ ಫುಟ್ಬಾಲ್‌ ವೃತ್ತಿ ಜೀವನವನ್ನು ಪ್ರಾರಂಭಿಸಿದರು.

ಮೊರೊಕ್ಕೊ ವಿರುದ್ಧ ಡ್ರಾ ಸಾಧಿಸಿದ ಬ್ರೆಜಿಲ್‌, ಟರ್ಕಿಯನ್ನು ಮಣಿಸಿದ ಆಸ್ಟ್ರೇಲಿಯಾ

2024ರ ಅಕ್ಟೋಬರ್‌ನಲ್ಲಿ ಚೀನಾ ವಿರುದ್ಧದ ಪಂದ್ಯದ ಮೂಲಕ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅವರು ತಮ್ಮ ಮೊದಲ ಪಂದ್ಯದಲ್ಲೇ ಗೋಲು ಬಾರಿಸಿ ಗಮನ ಸೆಳೆದಿದ್ದರು. ಇದೀಗ ಕನಸಿನ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿಯೂ ಆಡಿದ್ದಾರೆ. 61ನೇ ನಿಮಿಷದಲ್ಲಿ ಇರಂಕುಂಡಾ ಅವರ ಬದಲಿಗೆ ಮೈದಾನಕ್ಕಿಳಿಯವ ಮೂಲಕ ಈ ಸಾಧನೆಗೈದರು. ಇವರು ಈವರೆಗೆ ಆಸ್ಟ್ರೇಲಿಯಾ ಪರ 8 ಪಂದ್ಯಗಳಿಂದ 3 ಗೋಲುಗಳನ್ನು ಗಳಿಸಿದ್ದಾರೆ. ಈ ಎಲ್ಲಾ ಗೋಲುಗಳು ಜಾಗತಿಕ ಟೂರ್ನಮೆಂಟ್‌ನ ಅರ್ಹತಾ ಪಂದ್ಯಗಳಲ್ಲಿ ಬಂದಿವೆ.



ಟರ್ಕಿ ವಿರುದ್ಧದ ಪಂದ್ಯದಲ್ಲಿ ಕ್ರಮವಾಗಿ 27ನೇ ಮತ್ತು 75ನೇ ನಿಮಿಷಗಳಲ್ಲಿ ನೆಸ್ಟೋರಿ ಇರಾಂಕುಂಡ ಮತ್ತು ಕಾನರ್ ಮೆಟ್‌ಕಾಲ್ಫ್ ಗಳಿಸಿದ ಗೋಲುಗಳು ಆಸ್ಟ್ರೇಲಿಯಾದ ಗೆಲುವನ್ನು ಖಚಿತಪಡಿಸಿದವು. ಏತನ್ಮಧ್ಯೆ, 24 ವರ್ಷಗಳ ಬಳಿಕ ಫಿಫಾ ವಿಶ್ವಕಪ್‌ಗೆ ಮರಳಿದ ಟರ್ಕಿ ಕನಿಷ್ಠ 1 ಗೋಲು ಬಾರಿಸಲು ವಿಫಲವಾಯಿತು.

ಆಸ್ಟ್ರೇಲಿಯಾ ತಂಡವು ಜೂನ್ 20 ರಂದು ಆತಿಥೇಯ ಅಮೇರಿಕಾ ವಿರುದ್ಧ ಆಡಲಿದೆ, ನಂತರ ಜೂನ್ 26 ರಂದು ಪರಾಗ್ವೆ ವಿರುದ್ಧದ ತಮ್ಮ ಅಂತಿಮ ಲೀಗ್ ಪಂದ್ಯವನ್ನು ಆಡಲಿದೆ. ಅವರು ಈ ಎರಡೂ ಪಂದ್ಯಗಳಲ್ಲಿ ಒಂದರಲ್ಲಿ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರೆ, ಅವರು ಪ್ರೀ-ಕ್ವಾರ್ಟರ್‌ ಸುತ್ತಿಗೆ ಮುನ್ನಡೆಯುವ ನಿರೀಕ್ಷೆಯಿದೆ.