ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India Test Schedule: ಇಂಗ್ಲೆಂಡ್‌ ಸರಣಿ ಬಳಿಕ ಭಾರತದ ಮುಂದಿನ ಟೆಸ್ಟ್‌ ಸರಣಿ ವೇಳಾಪಟ್ಟಿ

ಭಾರತವು ನವೆಂಬರ್‌ನಲ್ಲಿ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದು 2025 ರ ಕೊನೆಯ ರೆಡ್-ಬಾಲ್ ಸರಣಿಯಾಗಿದೆ. ಇದಕ್ಕೂ ಮುನ್ನ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ತವರಿನಲ್ಲಿ 2 ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದೆ.

ಇಂಗ್ಲೆಂಡ್‌ ಸರಣಿ ಬಳಿಕ ಭಾರತದ ಮುಂದಿನ ಟೆಸ್ಟ್‌ ಸರಣಿ ವೇಳಾಪಟ್ಟಿ

Abhilash BC Abhilash BC Aug 4, 2025 11:24 AM

ನವದೆಹಲಿ: ಟೀಮ್‌ ಇಂಡಿಯಾದ ಇಂಗ್ಲೆಂಡ್‌ ಪ್ರವಾಸದ(England vs India) ತೆಂಡುಲ್ಕರ್‌-ಆ್ಯಂಡರ್‌ಸನ್‌ ಸರಣಿಗೆ ತೆರೆ ಬೀಳುವ ಕಾಲ ಬಂದಿದೆ. 5ನೇ ಹಾಗೂ ಅಂತಿಮ ಪಂದ್ಯ ಇಂದು(ಸೋಮವಾರ) ಕೊನೆಗೊಳ್ಳಲಿದೆ. ಈ ಸರಣಿ ಬಳಿಕ ಭಾರತ ಮುಂದೆ ಯಾವಾಗ ಟೆಸ್ಟ್‌(India Test Schedule) ಸರಣಿ ಆಡಲಿದೆ ಎಂಬ ಕುತೂಹಲ ಅಭಿಮಾನಿಗಳದ್ದು. ಇದಕ್ಕೆ ಉತ್ತರ ಇಲ್ಲಿದೆ.

ಹಾಲಿ ವರ್ಷದಲ್ಲಿ ಭಾರತ ಎರಡು ಟೆಸ್ಟ್‌ ಸರಣಿ ಮಾತ್ರ ಆಡಲಿದೆ. ಭಾರತವು ನವೆಂಬರ್‌ನಲ್ಲಿ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದು 2025 ರ ಕೊನೆಯ ರೆಡ್-ಬಾಲ್ ಸರಣಿಯಾಗಿದೆ. ಇದಕ್ಕೂ ಮುನ್ನ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ತವರಿನಲ್ಲಿ 2 ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದೆ. ಈ ಸರಣಿ ಅಕ್ಟೋಬರ್‌ನಲ್ಲಿ ನಿಗದಿಯಾಗಿದೆ. ಭಾರತದ WTC 2025-27 ಅಭಿಯಾನವು 2027 ರ ಜನವರಿಯಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಕೊನೆಗೊಳ್ಳುತ್ತದೆ.

ಭಾರತದ ಮುಂಬರುವ ಟೆಸ್ಟ್ ಪಂದ್ಯಗಳ ವೇಳಾಪಟ್ಟಿ

ಭಾರತ vs ವೆಸ್ಟ್ ಇಂಡೀಸ್ - ಮೊದಲ ಟೆಸ್ಟ್ (ಅಹಮದಾಬಾದ್); ಅಕ್ಟೋಬರ್ 2-6, 2025

ಭಾರತ vs ವೆಸ್ಟ್ ಇಂಡೀಸ್ - 2ನೇ ಟೆಸ್ಟ್ (ದೆಹಲಿ) - ಅಕ್ಟೋಬರ್ 10-14, 2025

ಭಾರತ vs ದಕ್ಷಿಣ ಆಫ್ರಿಕಾ - ಮೊದಲ ಟೆಸ್ಟ್ (ಕೋಲ್ಕತ್ತಾ) - ನವೆಂಬರ್ 14-18, 2025

ಭಾರತ vs ದಕ್ಷಿಣ ಆಫ್ರಿಕಾ - 2 ನೇ ಟೆಸ್ಟ್ (ಗುವಾಹಟಿ) - ನವೆಂಬರ್ 22-26, 2025

ಭಾರತ vs ಅಫ್ಘಾನಿಸ್ತಾನ - ಏಕೈಕ ಟೆಸ್ಟ್(ತವರಿನಲ್ಲಿ) - ಜೂನ್, 2026

ಭಾರತ vs ಶ್ರೀಲಂಕಾ - 2 ಟೆಸ್ಟ್‌ಗಳು (ವಿದೇಶದಲ್ಲಿ)- ಆಗಸ್ಟ್, 2026

ಭಾರತ vs ನ್ಯೂಜಿಲೆಂಡ್ - 2 ಟೆಸ್ಟ್‌ಗಳು (ವಿದೇಶದಲ್ಲಿ) - ಅಕ್ಟೋಬರ್, 2026

ಭಾರತ vs ಆಸ್ಟ್ರೇಲಿಯಾ - 5 ಟೆಸ್ಟ್‌ಗಳು (ತವರಿನಲ್ಲಿ) - ಜನವರಿ, 2027

ಇದನ್ನೂ ಓದಿ IND vs ENG Test Series: ಟೆಸ್ಟ್‌ ಇತಿಹಾಸದಲ್ಲೇ ಮೊದಲು!; 9 ಆಟಗಾರರಿಂದ 400+ ರನ್‌