ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜನವರಿಯಲ್ಲಿ ಭಾರತ vs ಆಸೀಸ್‌ ಬಾರ್ಡರ್–ಗಾವಸ್ಕರ್ ಟ್ರೋಫಿ ಸರಣಿ

Cricket Australia 2026/27 Schedule: ವೆಸ್ಟ್ ಇಂಡೀಸ್ ವಿರುದ್ಧ 3-0 ಸರಣಿ ಗೆಲುವಿನೊಂದಿಗೆ 2025-27ರ ಸರಣಿಯನ್ನು ಆರಂಭಿಸಿದ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸಮಗ್ರ ಪ್ರದರ್ಶನ ನೀಡುವ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ 87.50 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

Australia Cricket Team

ಸಿಡ್ನಿ, ಮಾ.23: ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್‌ ತಂಡದ 2026–27ನೇ ಸಾಲಿನ(Cricket Australia 2026/27 Schedule) ವೇಳಾಪಟ್ಟಿಯನ್ನು ‘ಕ್ರಿಕೆಟ್‌ ಆಸ್ಟ್ರೇಲಿಯಾ’ ಬಿಡುಗಡೆ ಮಾಡಿದ್ದು, ಮುಂದಿನ ಜನವರಿಯಲ್ಲಿ ಬಾರ್ಡರ್‌–ಗಾವಸ್ಕರ್‌(Border-Gavaskar Trophy) ಟ್ರೋಫಿ ಸರಣಿ ಆರಂಭವಾಗಲಿದೆ. ಆಸ್ಟ್ರೇಲಿಯಾ ತಂಡ(Australia Cricket Team)ವು ಭಾರತ ಪ್ರವಾಸದಲ್ಲಿ ಐದು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಜನವರಿಯಿಂದ ಮಾರ್ಚ್‌ವರೆಗೆ ಈ ಸರಣಿಯ ಆಯೋಜನೆಗೊಳ್ಳಲಿದೆ.

ಆಸೀಸ್‌ ತಂಡವು 2026ರ ಡಿಸೆಂಬರ್‌ನಿಂದ 2027ರ ಮಾರ್ಚ್‌ವರೆಗೆ 14 ವಾರಗಳಲ್ಲಿ 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಆಗಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್ ಪಂದ್ಯಗಳೊಂದಿಗೆ ತವರಿನ ಋತು ಪ್ರಾರಂಭವಾಗಲಿದೆ.

ಆಸ್ಟ್ರೇಲಿಯಾ ತಂಡದ ದಕ್ಷಿಣ ಆಫ್ರಿಕಾ ಪ್ರವಾಸವು ಸೆಪ್ಟೆಂಬರ್ ಕೊನೆಯ ವಾರದಿಂದ ಅಕ್ಟೋಬರ್ ಅಂತ್ಯದವರೆಗೆ ನಡೆಯಲಿದೆ. ಈ ಪ್ರವಾಸದಲ್ಲಿ ಮೂರು ಏಕದಿನ ಮತ್ತು ಮೂರು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ನವೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್‌ಗಳ (ಮೂರು ಏಕದಿನ ಮತ್ತು ಐದು ಟಿ20 ಪಂದ್ಯ) ಸರಣಿ ನಡೆಯಲಿದೆ. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧದ ತವರು ಸರಣಿ ನಡೆಯಲಿದೆ. ನಾಲ್ಕು ವಾರಗಳ ಸರಣಿಯಲ್ಲಿ ನಾಲ್ಕು ಟೆಸ್ಟ್‌ ಆಡಲಿದೆ. ಇತ್ತಂಡಗಳ ನಾಲ್ಕು ಪಂದ್ಯಗಳ ರಣಿ ನಡೆಯುತ್ತಿರುವುದು ಇದೇ ಮೊದಲು.

ಪ್ಯಾಟ್‌ ಕಮಿನ್ಸ್‌, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್ ಮತ್ತು ನೇಥನ್ ಲಯನ್‌ ಮುಂತಾದ ಅನುಭವಿ ಆಟಗಾರರಿಗೆ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯು ಕೊನೆಯ ಪ್ರವಾಸವಾಗುವ ಸಾಧ್ಯತೆಯಿದೆ. ಈ ಆಟಗಾರರಿಗೆ ಭಾರತ ನೆಲದಲ್ಲಿ ಒಮ್ಮೆಯೂ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ, ಈ ಬಾರಿಯ ಸರಣಿಯು ಮಹತ್ವ ಪಡೆದುಕೊಳ್ಳಲಿದೆ.

ಈ ಬಾರಿಯ ಐಪಿಎಲ್‌ನಲ್ಲಿ 7 ಪ್ರಮುಖ ಬ್ಯಾಟಿಂಗ್‌ ದಾಖಲೆ ಮೇಲೆ ಕೊಹ್ಲಿ ಕಣ್ಣು!

ಮೊದಲ ಟೆಸ್ಟ್ ಪಂದ್ಯದ 150 ನೇ ವಾರ್ಷಿಕೋತ್ಸವವನ್ನು ಗುರುತಿಸಲು ಆಸ್ಟ್ರೇಲಿಯಾ ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅದ್ಭುತವಾದ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಲಿದೆ. ಏಕೈಕ ಟೆಸ್ಟ್ ಮಾರ್ಚ್ 11 ರಿಂದ 15 ರವರೆಗೆ ಪ್ರತಿಷ್ಠಿತ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ವೆಸ್ಟ್ ಇಂಡೀಸ್ ವಿರುದ್ಧ 3-0 ಸರಣಿ ಗೆಲುವಿನೊಂದಿಗೆ 2025-27ರ ಸರಣಿಯನ್ನು ಆರಂಭಿಸಿದ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸಮಗ್ರ ಪ್ರದರ್ಶನ ನೀಡುವ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ 87.50 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಆಸ್ಟ್ರೇಲಿಯಾ ಟೆಸ್ಟ್ ವೇಳಾಪಟ್ಟಿ

ಆಗಸ್ಟ್: ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್‌ಗಳು (ತವರಿನಲ್ಲಿ) ಅಕ್ಟೋಬರ್: ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟೆಸ್ಟ್‌ಗಳು (ವಿದೇಶದಲ್ಲಿ) ಡಿಸೆಂಬರ್-ಜನವರಿ: ನ್ಯೂಜಿಲೆಂಡ್ ವಿರುದ್ಧ ನಾಲ್ಕು ಟೆಸ್ಟ್‌ಗಳು (ತವರಿನಲ್ಲಿ) ಜನವರಿ-ಮಾರ್ಚ್: ಭಾರತ ವಿರುದ್ಧ ಐದು ಟೆಸ್ಟ್‌ಗಳು (ವಿದೇಶದಲ್ಲಿ) ಮಾರ್ಚ್ 11-15: ಇಂಗ್ಲೆಂಡ್ ವಿರುದ್ಧ 150 ನೇ ವಾರ್ಷಿಕೋತ್ಸವ ಟೆಸ್ಟ್ (ತವರಿನಲ್ಲಿ) ಜೂನ್: ಡಬ್ಲ್ಯೂಟಿಸಿ ಫೈನಲ್ (ಅರ್ಹತೆ ಪಡೆದರೆ, ಇಂಗ್ಲೆಂಡ್) ಜೂನ್-ಆಗಸ್ಟ್: ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್‌ಗಳು (ವಿದೇಶದಲ್ಲಿ).