ಈ ಬಾರಿಯ ಐಪಿಎಲ್‌ನಲ್ಲಿ 7 ಪ್ರಮುಖ ಬ್ಯಾಟಿಂಗ್ ದಾಖಲೆ ಮೇಲೆ ಕೊಹ್ಲಿ ಕಣ್ಣು!
Virat Kohli: ವಿರಾಟ್, ಈ ವರೆಗೂ ಐಪಿಎಲ್‌ನಲ್ಲಿ 267 ಪಂದ್ಯಗಳಲ್ಲಿ 291 ಸಿಕ್ಸರ್ ಬಾರಿಸಿದ್ದಾರೆ. ಈ ವರ್ಷ ಅವರು 9 ಸಿಕ್ಸರ್ ಬಾರಿಸಿದರೆ, ಐಪಿಎಲ್‌ನಲ್ಲಿ ಒಂದು ತಂಡದ ಪರ 300 ಸಿಕ್ಸರ್ ದಾಖಲಿಸಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
virat kohli net practice -
ಬೆಂಗಳೂರು, ಮಾ.23: ಆರ್‌ಸಿಬಿ(RCB) ತಂಡದ ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ(Virat Kohli) 2026ರ ಐಪಿಎಲ್(IPL 2026)ನಲ್ಲಿ ಹಲವಾರು ಬ್ಯಾಟಿಂಗ್ ದಾಖಲೆಗಳ ಮೇಲೆ ಚಿತ್ತ ನೆಟ್ಟಿದ್ದಾರೆ. ರನ್ ಮಷಿನ್ ವಿರಾಟ್ ಕೊಹ್ಲಿಗೆ ಯಾವೆಲ್ಲಾ ದಾಖಲೆಗಳನ್ನು ಬರೆಯುವ ಅವಕಾಶವಿದೆ ಎನ್ನುವ ವಿವರ ಇಲ್ಲಿದೆ.
ಒಂದು ತಂಡದ ಪರ 10000 ರನ್
ಆರ್‌ಸಿಬಿ ಪರ 282 ಟಿ20 ಪಂದ್ಯಗಳಲ್ಲಿ 9085* ರನ್ ಗಳಿಸಿರುವ ಕೊಹ್ಲಿ, ಈ ಆವೃತ್ತಿಯಲ್ಲಿ ಕನಿಷ್ಠ 915 ರನ್ ಗಳಿಸಿದರೆ, ಯಾವುದೇ ಒಂದು ತಂಡದ ಪರ 10000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ದಾಖಲೆ ಬರೆಯಲಿದ್ದಾರೆ.
ಐಪಿಎಲ್‌ನಲ್ಲಿ 9000 ರನ್
ಐಪಿಎಲ್‌ನಲ್ಲಿ 9000 ರನ್ ಪೂರೈಸಿದ ಮೊದಲ ಆಟಗಾರ ಎನಿಸಲು ಕೊಹ್ಲಿಗೆ ಕೇವಲ 339 ರನ್ ಬೇಕಿದೆ. 267 ಪಂದ್ಯಗಳಲ್ಲಿ ಕೊಹ್ಲಿ 8661 ರನ್ ದಾಖಲಿಸಿ, ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಟಿ20ಯಲ್ಲಿ 14000 ರನ್
ದೆಹಲಿ, ಭಾರತ ಹಾಗೂ ಆರ್‌ಸಿಬಿ ಮೂರು ತಂಡಗಳ ಪರ ಒಟ್ಟು 414 ಟಿ20 ಪಂದ್ಯಗಳನ್ನು ಆಡಿರುವ ವಿರಾಟ್,13543 ರನ್ ಕಲೆಹಾಕಿದ್ದಾರೆ. ಈ ವರ್ಷ ಐಪಿಎಲ್‌ನಲ್ಲಿ 457 ರನ್ ಗಳಿಸಿದರೆ, ಟಿ20ಯಲ್ಲಿ 14000 ರನ್ ಗಳಿಸಿದ ಭಾರತದ ಮೊದಲ, ವಿಶ್ವದ 5ನೇ ಬ್ಯಾಟರ್ ಎನಿಸಲಿದ್ದಾರೆ. ಟಿ20ಯಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಗೇಲ್ (14562 ರನ್) ಹೆಸರಲ್ಲಿದೆ.
ಒಂದು ಕ್ರೀಡಾಂಗಣದಲ್ಲಿ 4000 ರನ್
ವಿರಾಟ್ ಈ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 382 ರನ್ ಬಾರಿಸಿದರೆ 4000 ಟಿ20 ರನ್ ಪೂರೈಸಲಿದ್ದಾರೆ. ಈ ಮೈಲುಗಲ್ಲು ತಲುಪಿದರೆ, ಒಂದೇ ಕ್ರೀಡಾಂಗಣದಲ್ಲಿ 4000 ಟಿ20 ರನ್ ಗಳಿಸಿದ ವಿಶ್ವದ ಮೊದಲಿಗ ಎನ್ನುವ ದಾಖಲೆ ನಿರ್ಮಿಸಲಿದ್ದಾರೆ.
𝙍𝘾𝘽 𝙁𝙖𝙢, 𝙮𝙤𝙪'𝙧𝙚 𝙣𝙤𝙩 𝙧𝙚𝙖𝙙𝙮 𝙛𝙤𝙧 𝙩𝙝𝙞𝙨... 🥹⭐🏆
— Royal Challengers Bengaluru (@RCBTweets) March 22, 2026
Virat reflects on the night of the #IPL2025 Final and what it truly means to be an IPL champion. ❤️#PlayBold #ನಮ್ಮRCB #IPL2026 pic.twitter.com/ZD0v8JCesj
ಒಂದು ಕ್ರೀಡಾಂಗಣದಲ್ಲಿ ಗರಿಷ್ಠ ಟಿ20 ಶತಕ
ಕೊಹ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈವರೆಗೆ 109 ಟಿ20 ಪಂದ್ಯಗಳನ್ನು ಆಡಿದ್ದು, 4 ಶತಕ ಬಾರಿಸಿದ್ದಾರೆ. 2026ರ ಐಪಿಎಲ್‌ನಲ್ಲಿ ಅವರು 1 ಶತಕ ಗಳಿಸಿದರೆ, ಕ್ರಿಸ್ ಗೇಲ್‌ರ ದಾಖಲೆ ಸರಿಗಟ್ಟಲಿದ್ದಾರೆ. ಗೇಲ್ ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ 5 ಶತಕ ಗಳಿಸಿ ದಾಖಲೆ ಹೊಂದಿದ್ದಾರೆ. ಒಂದು ವೇಳೆ ಕೊಹ್ಲಿ 2 ಶತಕ ಬಾರಿಸಿದರೆ, ಒಂದು ಕ್ರೀಡಾಂಗಣದಲ್ಲಿ ಅತಿಹೆಚ್ಚು ಟಿ20 ಶತಕ ಸಿಡಿಸಿದ ವಿಶ್ವ ದಾಖಲೆಗೆ ಪಾತ್ರರಾಗಲಿದ್ದಾರೆ.
ಆಕಾಶ್‌ದೀಪ್ ಬದಲು ಕೆಕೆಆರ್ ಸೇರಿದ ಸೌರಭ್ ದುಬೆ
ಒಂದು ದೇಶದಲ್ಲಿ 10000 ಟಿ20 ರನ್
ಕೊಹ್ಲಿ ಭಾರತದಲ್ಲಿ 284 ಟಿ20 ಪಂದ್ಯಗಳನ್ನಾಡಿದ್ದು 9704 ರನ್ ಕಲೆಹಾಕಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ 296 ರನ್ ಗಳಿಸಿದರೆ, ಒಂದು ದೇಶದಲ್ಲಿ 10000 ಟಿ20 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎನ್ನುವ ಹಿರಿಮೆ ಗಳಿಸಲಿದ್ದಾರೆ.
300 ಸಿಕ್ಸರ್
ವಿರಾಟ್, ಈ ವರೆಗೂ ಐಪಿಎಲ್‌ನಲ್ಲಿ 267 ಪಂದ್ಯಗಳಲ್ಲಿ 291 ಸಿಕ್ಸರ್ ಬಾರಿಸಿದ್ದಾರೆ. ಈ ವರ್ಷ ಅವರು 9 ಸಿಕ್ಸರ್ ಬಾರಿಸಿದರೆ, ಐಪಿಎಲ್‌ನಲ್ಲಿ ಒಂದು ತಂಡದ ಪರ 300 ಸಿಕ್ಸರ್ ದಾಖಲಿಸಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.