ಅಡಿಲೇಡ್: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡ(IND vs AUS 2nd ODI) ಅಡಿಲೇಡ್‌ಗೆ ಆಗಮಿಸಿತು. ಸರಣಿಯ ಎರಡನೇ ಏಕದಿನ ಅಂತಾರಾಷ್ಟ್ರೀಯ (ODI) ಪಂದ್ಯಕ್ಕೂ ಮುನ್ನ. ಅವರ ಆಗಮನಕ್ಕೆ ಅಭಿಮಾನಿಗಳಿಂದ ಉತ್ಸಾಹಭರಿತ ಬೆಂಬಲ ದೊರೆಯಿತು. ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಶೇಷವಾಗಿ ಸ್ವಾಗತಿಸಿ ಟೀಮ್ ಇಂಡಿಯಾಕ್ಕೆ ದೀಪಾವಳಿ ಹಬ್ಬದ ಶುಭಾಶಯ ಕೋರಿತು.
ಅಕ್ಟೋಬರ್ 19 ರಂದು ಪರ್ತ್ ಕ್ರೀಡಾಂಗಣದಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಸಂಪೂರ್ಣ ಸೋಲಿನ ನಂತರ ಈ ಸರಣಿಗೆ ನಾಯಕ ಶುಭಮನ್ ಗಿಲ್ ನೇತೃತ್ವದ ತಂಡವು ಮತ್ತೆ ಗೆಲುವಿನ ಲಯಕ್ಕೆ ಮರಳುವ ಒತ್ತಡದಲ್ಲಿದೆ. ಮೊದಲ ಏಕದಿನ ಪಂದ್ಯದಲ್ಲಿ ಅಂತರರಾಷ್ಟ್ರೀಯ ಪಂದ್ಯಕ್ಕೆ ಮರಳಿದ್ದ ರೋಹಿತ್ ಮತ್ತು ಕೊಹ್ಲಿ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದರು.
ಅಭಿಮಾನಿಗಳ ಸ್ವಾಗತ ವಿಡಿಯೊ ಇಲ್ಲಿದೆ
ಅಭಿಮಾನಿಗಳು ಮುಂಬೈ ಚಾ ರಾಜ (ಮುಂಬೈನ ರಾಜ)' ಎಂದು ಕೂಗುವ ಮೂಲಕ ಸ್ವಾಗತಿಸಿದರು. ಎರಡನೇ ಏಕದಿನ ಪಂದ್ಯ ಅಕ್ಟೋಬರ್ 23 ರಂದು ನಡೆಯಲಿದೆ. ದ್ವಿತೀಯ ಪಂದ್ಯದಲ್ಲಿ ಕುಲ್‌ದೀಪ್ ಆಡುವ ಸಾಧ್ಯತೆ ಇದೆ. ಆದರೆ ಅವರಿಗಾಗಿ ಜಾಗ ಬೀಡುವವರು ಯಾರು ಎಂಬುದು ಸದ್ಯದ ಕುತೂಹಲ. ಸದ್ಯದ ಮಟ್ಟಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಕೈಬಿಡುವ ಸಾಧ್ಯತೆ ಎದ್ದು ಕಾಣುತ್ತಿದೆ. ಆದ್ಯಾಗೂ, ನಿತೀಶ್ ಕುಮಾರ್ ರೆಡ್ಡಿ ಅವರನ್ನು ಕೈಬಿಟ್ಟರೂ ಅಚ್ಚರಿಯಿಲ್ಲ.
ಇದನ್ನೂ ಓದಿ AUS vs IND 2nd ODI: ಆಸೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯ ಯಾವಾಗ?; ಮಳೆ ಭೀತಿ ಇದೆಯೇ?
ವೇಗಿ ಹರ್ಷಿತ್ ರಾಣಾ ಅವರನ್ನು ಈ ಪಂದ್ಯಕ್ಕೆ ಬೆಂಚ್ ಕಾಯಿಸುವ ಸಾಧ್ಯತೆ ಇದೆ. ದೆಹಲಿ ಮೂಲದ ವೇಗಿ ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಸಂಪೂರ್ಣ ವಿಫಲರಾದ ನಂತರ ಅಭಿಮಾನಿಗಳು ಮತ್ತು ತಜ್ಞರಿಂದ ತೀವ್ರ ಟೀಕೆಗೆ ಗುರಿಯಾದರು. ಅಲ್ಲದೆ ಕೋಚ್ ಗಂಭೀರ್ ಮತ್ತು ನಾಯಕ ಗಿಲ್ ಕೂಡ ರಾಣ ಬೌಲಿಂಗ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಅವರ ಬದಲು ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನು ತಂಡಕ್ಕೆ ಸೇರಿಸುವ ಸಾಧ್ಯತೆಯೂ ಇದೆ.