ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇಂದು ಭಾರತ-ಕಿವೀಸ್ ಮೊದಲ ಏಕದಿನ ಕದನ: ಮ್ಯಾಚ್ ಆರಂಭ ಎಷ್ಟು ಗಂಟೆಗೆ?

India vs New Zealand Live: ನ್ಯೂಜಿಲ್ಯಾಂಡ್‌ ತಂಡ ಈವರೆಗೆ ಒಮ್ಮೆಯೂ ಭಾರತದಲ್ಲಿ ಏಕದಿನ ಸರಣಿ ಗೆದ್ದಿಲ್ಲ. 7 ಬಾರಿಯೂ ಭಾರತ ತಂಡವೇ ಗೆದ್ದಿದೆ. ಒಟ್ಟಾರೆ ಉಭಯ ತಂಡಗಳ ನಡುವೆ 17 ಬಾರಿ ಏಕದಿನ ಸರಣಿ ಆಯೋಜನೆಗೊಂಡಿವೆ. 9 ಬಾರಿ ಭಾರತ ಗೆದ್ದಿದ್ದರೆ, 2ರಲ್ಲಿ ಕಿವೀಸ್‌ ಜಯಗಳಿಸಿದೆ.

Team india

ವಡೋದರಾ, ಜ.11: ಭಾರತ ಹಾಗೂ ನ್ಯೂಜಿಲೆಂಡ್‌(India vs New Zealand Live) ನಡುವಿನ 3 ಪಂದ್ಯಗಳ ಏಕದಿನ ಸರಣಿ ಇಂದು(ಭಾನುವಾರ) ಆರಂಭಗೊಳ್ಳಲಿದ್ದು, ಅಭೂತಪೂರ್ವ ಲಯದಲ್ಲಿರುವ ದಿಗ್ಗಜ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ. ಪಂದ್ಯ ಆರಂಭ ಮತ್ತು ಪ್ರಸಾರದ ಮಾಹಿತಿ ಇಲ್ಲಿದೆ.

ಪಂದ್ಯ ಆರಂಭ: ಉಭಯ ತಂಡಗಳ ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭಗೊಳ್ಳಲಿದೆ. ಮಳೆ ವಡೋದರಾದಲ್ಲಿ ಹವಾಮಾನವು ಶುಭ್ರವಾಗಿದ್ದು, ಮಳೆ ಬರುವ ಸಾಧ್ಯತೆಯಿಲ್ಲ. ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ಹೀಗಾಗಿ ಪಂದ್ಯ ಯಾವುದೇ ಅಡಚಣೆ ಇಲ್ಲದೆ ಸಂಪೂರ್ಣವಾಗಿ ಸಾಗಲಿದೆ.

ನೇರಪ್ರಸಾರ: ಭಾರತ vs ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯವನ್ನು ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಭಾನುವಾರ ಮಧ್ಯಾಹ್ನ 1.30 ರಿಂದ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗುತ್ತದೆ.

ನ್ಯೂಜಿಲ್ಯಾಂಡ್‌ ತಂಡ ಈವರೆಗೆ ಒಮ್ಮೆಯೂ ಭಾರತದಲ್ಲಿ ಏಕದಿನ ಸರಣಿ ಗೆದ್ದಿಲ್ಲ. 7 ಬಾರಿಯೂ ಭಾರತ ತಂಡವೇ ಗೆದ್ದಿದೆ. ಒಟ್ಟಾರೆ ಉಭಯ ತಂಡಗಳ ನಡುವೆ 17 ಬಾರಿ ಏಕದಿನ ಸರಣಿ ಆಯೋಜನೆಗೊಂಡಿವೆ. 9 ಬಾರಿ ಭಾರತ ಗೆದ್ದಿದ್ದರೆ, 2ರಲ್ಲಿ ಕಿವೀಸ್‌ ಜಯಗಳಿಸಿದೆ. 2 ಸರಣಿಗಳು ಡ್ರಾಗೊಂಡಿವೆ. ತಂಡದಲ್ಲಿರುವ 15 ಮಂದಿ ಪೈಕಿ 8 ಆಟಗಾರರು ಇದೇ ಮೊದಲ ಬಾರಿ ಭಾರತದಲ್ಲಿ ಆಡಲು ಸಜ್ಜಾಗಿದ್ದಾರೆ. ಇಬ್ಬರು ಈವರೆಗೆ ಒಂದೂ ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಐವರು ಆಟಗಾರರು 10ಕ್ಕಿಂತ ಕಡಿಮೆ ಪಂದ್ಯಗಳಲ್ಲಿ ಆಡಿದ್ದಾರೆ.

IND vs NZ: ಮೊದಲ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಭಾರತಕ್ಕೆ ಆಘಾತ; ಸರಣಿಯಿಂದ ಹೊರಬಿದ್ದ ಪಂತ್‌

ಮುಖಾಮುಖಿ

ಆಡಿದ ಪಂದ್ಯಗಳು: 120

ಭಾರತ ಗೆಲುವು: 62

ದಕ್ಷಿಣ ಆಫ್ರಿಕಾ ಗೆಲುವು: 50

ಉಭಯ ತಂಡಗಳು

ಭಾರತ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿ.ಕೀ.), ಶ್ರೇಯಸ್ ಅಯ್ಯರ್ (ಉಪನಾಯಕ), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್.

ನ್ಯೂಜಿಲ್ಯಾಂಡ್‌: ಮೈಕೆಲ್ ಬ್ರೇಸ್‌ವೆಲ್ (ನಾಯಕ), ಆದಿ ಅಶೋಕ್, ಕ್ರಿಸ್ಟಿಯನ್ ಕ್ಲಾರ್ಕ್, ಜೋಶ್ ಕ್ಲಾರ್ಕ್ಸನ್, ಡೆವೊನ್ ಕಾನ್ವೇ (ವಿ. ಕೀ.), ಜ್ಯಾಕ್ ಫೌಲ್ಕ್ಸ್, ಮಿಚ್ ಹೇ (ವಿ.ಕೀ.), ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಜೇಡೆನ್ ಲೆನಾಕ್ಸ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರೇ, ವಿಲ್ ಯಂಗ್.