600ನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ
ಶುಭಮನ್ ಗಿಲ್ 80 ನೇ ಸ್ವಾತಂತ್ರ್ಯ ದಿನದಂದು ಭಾರತವನ್ನು ತಮ್ಮ ಐತಿಹಾಸಿಕ 600 ನೇ ಟೆಸ್ಟ್ ಪಂದ್ಯದಲ್ಲಿ ಮುನ್ನಡೆಸಿದ ಗೌರವವನ್ನು ಪಡೆದರು. ಅತಿ ಹೆಚ್ಚು ಟೆಸ್ಟ್ ಪಂದ್ಯವನ್ನಾಡಿದ ದಾಖಲೆ. ಇಂಗ್ಲೆಂಡ್ ತಂಡದ ಹೆಸರಿನಲ್ಲಿದೆ. 1,097* ಟೆಸ್ಟ್ ಪಂದ್ಯವನ್ನಾಡಿದೆ. ಎರಡನೇ ಸ್ಥಾನಿ ಆಸ್ಟ್ರೇಲಿಯಾ 883* ಪಂದ್ಯ ಆಡಿದೆ.
India vs Sri Lanka live score -
ಗಾಲೆ, ಆ.15: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭಮನ್ ಗಿಲ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಟಾಸ್‌ಗೂ ಮುನ್ನ ಕೋಚ್ ಗೌತಮ್ ಗಂಭೀರ್ ಜತೆ ಶುಭಮನ್ ಗಿಲ್ ಧ್ವಜಾರೋಹಣ ನಡೆಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು. ರಾಹುಲ್, ಪಡಿಕ್ಕಲ್ ಮತ್ತು ಪ್ರಸಿದ್ಧ್ ಕೃಷ್ಣ ಮೂವರು ಕನ್ನಡಿಗರು ಆಡುವ ಬಳಗದಲ್ಲಿ ಕಾಣಿಸಿಕೊಂಡರು.
ಶುಭಮನ್ ಗಿಲ್ 80 ನೇ ಸ್ವಾತಂತ್ರ್ಯ ದಿನದಂದು ಭಾರತವನ್ನು ತಮ್ಮ ಐತಿಹಾಸಿಕ 600 ನೇ ಟೆಸ್ಟ್ ಪಂದ್ಯದಲ್ಲಿ ಮುನ್ನಡೆಸಿದ ಗೌರವವನ್ನು ಪಡೆದರು. ಅತಿ ಹೆಚ್ಚು ಟೆಸ್ಟ್ ಪಂದ್ಯವನ್ನಾಡಿದ ದಾಖಲೆ. ಇಂಗ್ಲೆಂಡ್ ತಂಡದ ಹೆಸರಿನಲ್ಲಿದೆ. 1,097* ಟೆಸ್ಟ್ ಪಂದ್ಯವನ್ನಾಡಿದೆ. ಎರಡನೇ ಸ್ಥಾನಿ ಆಸ್ಟ್ರೇಲಿಯಾ 883* ಪಂದ್ಯ ಆಡಿದೆ.
Captain Shubman Gill wins the toss and elects to bat first at Galle.
— BCCI (@BCCI) August 15, 2026
A look at our Playing XI for the game.
Live - https://t.co/bg2q0J2x1f #SLvIND pic.twitter.com/ll2Xa9sTm3
ಶ್ರೀಲಂಕಾ ಪರ ಆಫ್ ಸ್ಪಿನ್ನರ್ ಕೇಶರ ನುವಂತಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 25 ವರ್ಷದ ಕೇಶರ ನುವಂತಾ ಅಭ್ಯಾಸ ಪಂದ್ಯದಲ್ಲಿ ಕೆ.ಎಲ್ ರಾಹುಲ್, ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಅವರನ್ನು ಔಟ್ ಮಾಡಿದ್ದರು.
ಶ್ರೀಲಂಕಾ ವಿರುದ್ಧ ಭಾರತದ ಟೆಸ್ಟ್ ದಾಖಲೆ
ಭಾರತ ಶ್ರೀಲಂಕಾ ವಿರುದ್ಧ 46 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 22 ರಲ್ಲಿ ಗೆದ್ದು ಕೇವಲ ಏಳು ಪಂದ್ಯಗಳಲ್ಲಿ ಮಾತ್ರ ಸೋತಿದೆ. ಎರಡೂ ತಂಡಗಳು ಕೊನೆಯ ಬಾರಿಗೆ 2022 ರ ಆರಂಭದಲ್ಲಿ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾದವು, ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಎರಡೂ ಪಂದ್ಯಗಳನ್ನು ಗೆದ್ದಿತು. ಶ್ರೀಲಂಕಾದಲ್ಲಿ ಉಭಯ ತಂಡಗಳ ನಡುವಿನ ಕೊನೆಯ ಟೆಸ್ಟ್ ಸರಣಿ 2017 ರಲ್ಲಿ ನಡೆದಿತ್ತು, ಆಗ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ 3-0 ವೈಟ್‌ವಾಶ್ ಪೂರ್ಣಗೊಳಿಸಿತ್ತು.
ಉಭಯ ಆಡುವ ಬಳಗ
ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭಮನ್ ಗಿಲ್(ನಾಯಕ), ದೇವದತ್ ಪಡಿಕ್ಕಲ್, ರಿಷಬ್ ಪಂತ್(ವಿ.ಕೀ.), ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಕುಲದೀಪ್ ಯಾದವ್,ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಶ್ರೀಲಂಕಾ: ಲಹಿರು ಉದಾರ, ನಿಶಾನ್ ಮದುಷ್ಕ, ದಿನೇಶ್ ಚಂಡಿಮಲ್, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ(ನಾಯಕ), ಸೋನಾಲ್ ದಿನುಶಾ, ನಿರೋಶನ್ ಡಿಕ್ವೆಲ್ಲಾ(ವಿ.ಕೀ.), ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೋ.