ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಿಳಾ ವಿಶ್ವಕಪ್‌ನಲ್ಲೂ ಮುಂದುವರಿದ ನೋ ಶೇಕ್‌ಹ್ಯಾಂಡ್‌ ವಾರ್‌; ಪಾಕ್‌ ನಾಯಕಿ ಕೈಕುಲುಕದ ಭಾರತೀಯ ನಾಯಕಿ

ಪಹಲ್ಗಾಂ ಉಗ್ರ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು ಆಪರೇಷನ್‌ ಸಿಂದೂರ ಕಾರ್ಯಾಚರಣೆ ನಡೆಸಿ, ಪಾಕ್‌ಗೆ ತಕ್ಕ ಉತ್ತರ ನೀಡಿತ್ತು. ಆದರೆ ಕಾರ್ಯಾಚರಣೆ ವೇಳೆ ಭಾರತ ವಿರುದ್ಧ 6-0 ಗೆಲುವು ಸಾಧಿಸಿದ್ದೇವೆ ಎಂದು ಪಾಕ್‌ ಸೇನೆ ಸುಳ್ಳು ಹೇಳಿತ್ತು. ಇದೇ ಸುಳ್ಳನ್ನು ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸಿದ್ರಾ ಅಮೀನ್‌, ನಾಯಕಿ ಫಾತಿಮಾ ಸನಾ 6-0 ಎಂದು ಕೈಸನ್ನೆ ಮಾಡಿ, ಕೂಗಾಡಿದ್ದರು.

ಕೊಲಂಬೊ: ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ 2025(Womens World Cup 2025 ) ಗುಂಪು ಹಂತದ ಪಂದ್ಯಕ್ಕೂ ಮುನ್ನ ನಡೆದ ಟಾಸ್ ಸಮಾರಂಭದಲ್ಲಿ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್(Harmanpreet Kaur), ತಂಡದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ(INDW vs PAKW) ವಿರುದ್ಧ ಹ್ಯಾಂಡ್‌ಶೇಕ್-ಇಲ್ಲದ ನೀತಿಯನ್ನು ಮುಂದುವರೆಸಿದರು. ಪಾಕಿಸ್ತಾನ ನಾಯಕಿ ಫಾತಿಮಾ ಸನಾ(Fatima Sana) ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ನಿರೀಕ್ಷೆಯಂತೆ ಭಾರತೀಯ ನಾಯಕಿ ಕೌರ್‌ ಹ್ಯಾಂಡ್‌ಶೇಕ್ ಮಾಡದೆ ತಮ್ಮ ಪಾಡಿಗೆ ತಾವು ಎಂಬಂತೆ ನಿಂತುಕೊಂಡರು.

ಪುರುಷರ ಏಷ್ಯಾಕಪ್‌ನಲ್ಲಿ ಭಾರತೀಯ ಆಟಗಾರರು ಪಾಕ್‌ ಆಟಗಾರರ ಕೈಕುಲುಕದೆ, ಪಹಲ್ಗಾಂ ಉಗ್ರ ದಾಳಿಗೆ ತಮ್ಮದೇ ರೀತಿಯಲ್ಲಿ ಪ್ರತಿರೋಧ ತೋರಿದ್ದರು. ಹೀಗಾಗಿ ಈ ಪಂದ್ಯಕ್ಕೂ ಮುನ್ನವೇ ಹ್ಯಾಂಡ್‌ಶೇಕ್ ವಿಚಾರದ ಬಗ್ಗೆ ಭಾರೀ ಕುತೂಹಲ ಉಂಟಾಗಿತ್ತು. ಇದೀಗ ಕುತೂಹಲಕ್ಕೆ ತೆರೆ ಬಿದ್ದಿದೆ. ಮಹಿಳಾ ಆಟಗಾರ್ತಿಯರೂ ಕೂಡ ಪಾಕ್‌ ಆಟಗಾರರ ಕೈಕುಲುಕದೆ, ತಮ್ಮದೇ ರೀತಿಯಲ್ಲಿ ಪ್ರತಿರೋಧ ತೋರಿದರು.

ಇದನ್ನೂ ಓದಿ India vs Pakistan: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಪಾಕಿಸ್ತಾನ

ಪಹಲ್ಗಾಂ ಉಗ್ರ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು ಆಪರೇಷನ್‌ ಸಿಂದೂರ ಕಾರ್ಯಾಚರಣೆ ನಡೆಸಿ, ಪಾಕ್‌ಗೆ ತಕ್ಕ ಉತ್ತರ ನೀಡಿತ್ತು. ಆದರೆ ಕಾರ್ಯಾಚರಣೆ ವೇಳೆ ಭಾರತ ವಿರುದ್ಧ 6-0 ಗೆಲುವು ಸಾಧಿಸಿದ್ದೇವೆ ಎಂದು ಪಾಕ್‌ ಸೇನೆ ಸುಳ್ಳು ಹೇಳಿತ್ತು. ಇದೇ ಸುಳ್ಳನ್ನು ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸಿದ್ರಾ ಅಮೀನ್‌, ನಾಯಕಿ ಫಾತಿಮಾ ಸನಾ 6-0 ಎಂದು ಕೈಸನ್ನೆ ಮಾಡಿ, ಕೂಗಾಡಿದ್ದರು.

ಉಭಯ ಆಡುವ ಬಳಗ

ಭಾರತ: ಪ್ರತೀಕಾ ರಾವಲ್, ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್(ನಾಯಕ), ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್(ವಿ.ಕೀ.), ಸ್ನೇಹ ರಾಣಾ, ರೇಣುಕಾ ಸಿಂಗ್ ಠಾಕೂರ್, ಕ್ರಾಂತಿ ಗೌಡ್, ಶ್ರೀ ಚರಣಿ.

ಪಾಕಿಸ್ತಾನ: ಮುನೀಬಾ ಅಲಿ, ಸದಾಫ್ ಶಮಾಸ್, ಸಿದ್ರಾ ಅಮೀನ್, ರಮೀನ್ ಶಮೀಮ್, ಅಲಿಯಾ ರಿಯಾಜ್, ಸಿದ್ರಾ ನವಾಜ್, ಫಾತಿಮಾ ಸನಾ(ನಾಯಕಿ), ನತಾಲಿಯಾ ಪರ್ವೈಜ್, ಡಯಾನಾ ಬೇಗ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್.