India vs Pakistan: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಾಕಿಸ್ತಾನ
ICC Womens World Cup 2025: ಉಭಯ ತಂಡಗಳು ಒಟ್ಟು 27 ಪಂದ್ಯಗಳಲ್ಲಿ ಹಣಾಹಣಿ ನಡೆಸಿವೆ. ಅದರಲ್ಲಿ ಭಾರತ 24–3ರಿಂದ ಮುನ್ನಡೆಯಲ್ಲಿದೆ. ಟಿ20 ಮಾದರಿಯಲ್ಲಿ ಪಾಕ್ 3 ಪಂದ್ಯಗಳನ್ನು ಗೆದ್ದಿದೆ. ಆದರೆ ಏಕದಿನ ಪಂದ್ಯಗಳಲ್ಲಿ ಭಾರತದ್ದೇ ಪಾರಮ್ಯ. ಪಾಕ್ ಇದುವರೆಗೆ ಗೆಲುವಿನ ಖಾತೆ ತೆರೆದಿಲ್ಲ.

-

ಕೊಲಂಬೊ: ಮಹಿಳಾ ಏಕದಿನ ವಿಶ್ವಕಪ್‌ನ( ICC Womens World Cup 2025 ) ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ(India vs Pakistan) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಭಾರತ ತನ್ನ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡಿದೆ. ಅಮನ್‌ಜೋತ್ ಕೌರ್ ಬದಲು ರೇಣುಕಾ ಸಿಂಗ್ ಠಾಕೂರ್ ಅವಕಾಶ ಪಡೆದರು.
ಉಭಯ ತಂಡಗಳು ಒಟ್ಟು 27 ಪಂದ್ಯಗಳಲ್ಲಿ ಹಣಾಹಣಿ ನಡೆಸಿವೆ. ಅದರಲ್ಲಿ ಭಾರತ 24–3ರಿಂದ ಮುನ್ನಡೆಯಲ್ಲಿದೆ. ಟಿ20 ಮಾದರಿಯಲ್ಲಿ ಪಾಕ್ 3 ಪಂದ್ಯಗಳನ್ನು ಗೆದ್ದಿದೆ. ಆದರೆ ಏಕದಿನ ಪಂದ್ಯಗಳಲ್ಲಿ ಭಾರತದ್ದೇ ಪಾರಮ್ಯ. ಪಾಕ್ ಇದುವರೆಗೆ ಗೆಲುವಿನ ಖಾತೆ ತೆರೆದಿಲ್ಲ.
ಲಂಕಾ ಎದುರಿನ ಪಂದ್ಯದಲ್ಲಿ ಭಾರತದ ಸ್ಮೃತಿ ಮಂದಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿರಲಿಲ್ಲ. ಅದರಿಂದಾಗಿ ಉತ್ತಮ ಆರಂಭ ಒದಗಿರಲಿಲ್ಲ. ಹೀಗಾಗಿ ಇಂದಿನ ಪಾಕ್ ವಿರುದ್ಧದ ಪಂದ್ಯದಲ್ಲಿ ಇವರು ಉತ್ತಮ ಜತೆಯಾಟ ನಡೆಸಬೇಕು.
ಉಭಯ ಆಡುವ ಬಳಗ
ಭಾರತ: ಪ್ರತೀಕಾ ರಾವಲ್, ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್(ನಾಯಕ), ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್(ವಿ.ಕೀ.), ಸ್ನೇಹ ರಾಣಾ, ರೇಣುಕಾ ಸಿಂಗ್ ಠಾಕೂರ್, ಕ್ರಾಂತಿ ಗೌಡ್, ಶ್ರೀ ಚರಣಿ.
ಇದನ್ನೂ ಓದಿ IND vs AUS-ʻರೋಹಿತ್ ಶರ್ಮಾಗೆ ನಾಯಕತ್ವ ನೀಡದೇ ಇರುವುದು ಆಘಾತಕಾರಿʼ: ಹರ್ಭಜನ್ ಸಿಂಗ್!
ಪಾಕಿಸ್ತಾನ: ಮುನೀಬಾ ಅಲಿ, ಸದಾಫ್ ಶಮಾಸ್, ಸಿದ್ರಾ ಅಮೀನ್, ರಮೀನ್ ಶಮೀಮ್, ಅಲಿಯಾ ರಿಯಾಜ್, ಸಿದ್ರಾ ನವಾಜ್, ಫಾತಿಮಾ ಸನಾ(ನಾಯಕಿ), ನತಾಲಿಯಾ ಪರ್ವೈಜ್, ಡಯಾನಾ ಬೇಗ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್.