ಬರ್ಮಿಂಗ್‌ಹ್ಯಾಮ್, ಜೂ.14: ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ(68) ಅವರ ಅರ್ಧಶತಕ ಹಾಗೂ ದೀಪ್ತಿ ಶರ್ಮಾ ಸ್ಪಿನ್(10ಕ್ಕೆ5) ದಾಳಿಯ ನೆರವಿನಿಂದ ಬದ್ಧ ವೈರಿ ಪಾಕಿಸ್ಥಾನ ವಿರುದ್ಧದ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ 64 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಭಾನುವಾರ ಇಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 170 ರನ್ ಬಾರಿಸಿತು. ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 17 ಓವರ್‌ಗಳಲ್ಲಿ 106 ರನ್‌ಗೆ ಸರ್ವಪತನ ಕಂಡಿತು.
ಪಾಕಿಸ್ತಾನ ತಂಡ ಉತ್ತಮ ಆರಂಭ ಪಡೆಯಿತು. ಮುನೀಬಾ ಅಲಿ ಮತ್ತು ಗುಲ್ ಫಿರೋಜಾ ಮೊದಲ ವಿಕೆಟ್‌ಗೆ 38 ರನ್ ಕಲೆಹಾಕಿದರು. ಗುಲ್ ಫಿರೋಜಾ 12 ರನ್ ಗಳಿಸಿದರೆ, ಮುನೀಬಾ ಅಲಿ 41 ರನ್ ಗಳಿಸಿದರು. ಉಭಯ ಆಟಗಾರ್ತಿಯರ ವಿಕೆಟ್ ಪತನದ ಬಳಿಕ ತಂಡ ನಾಟಕೀಯ ಕುಸಿತ ಕಂಡಿತು. ಸ್ಪಿನ್ನರ್‌ಗಳಾ ದೀಪ್ತಿ ಶರ್ಮ ಮತ್ತು ಶ್ರೀ ಚರಣಿ ಜಿದ್ದಿಗೆ ಬಿದ್ದವರಂತೆ ವಿಕೆಟ್ ಕಿತ್ತು ಪಾಕ್ ಬ್ಯಾಟರ್‌ಗಳಿಗೆ ಇನ್ನಿಲ್ಲದಂತೆ ಕಾಡಿದರು. ದೀಪ್ತಿ ಶರ್ಮ ಕೇವಲ 10 ರನ್‌ಗೆ 5 ವಿಕೆಟ್ ಕಿತ್ತರು. ಚರಣಿ 3 ವಿಕೆಟ್ ಪಡೆದರು. ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರೂ ಬೌಲಿಂಗ್‌ನಲ್ಲಿ ಮಿಂಚಿದ ಶಫಾಲಿ ಒಂದು ವಿಕೆಟ್ ಕಿತ್ತರು.
ಗಾಯದ ಸಮಸ್ಯೆಯ ಹೊರತಾಗಿಯೂ ಕಾಮನ್ವೆಲ್ತ್ ತಂಡದಲ್ಲಿ ಸ್ಥಾನ ಪಡೆದ ನೀರಜ್ ಚೋಪ್ರಾ
ಮಂಧಾನ ಆಸರೆ
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಆರಂಭಿಕ ಆಘಾತ ಎದುರಿಸಿತು. ಶಫಾಲಿ ವರ್ಮ ಇನಿಂಗ್ಸ್‌ನ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದರೂ 5ನೇ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ಜೆಮಿಮಾ ರಾಡ್ರಿಗಸ್(1) ಕೂಡ ಪೆವಿಲಿಯನ್ ಪರೇಡ್ ನಡೆಸಿದರು. 18 ರನ್‌ಗೆ ಮೂರು ವಿಕೆಟ್ ಕಳೆದುಕೊಂಡು ತಂಡ ಸಂಷ್ಟಕ್ಕೆ ಸಿಲುಕಿದಾಗ ಮಂಧಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಉತ್ತಮ ಜತೆಯಾಟ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು.
ಫಿಫಾ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಭಾರತೀಯ ಮೂಲದ ನಿಶಾನ್ ವೇಲುಪಿಳ್ಳೈ
ಜಾಗರೂಕತೆಯಿಂದ ಬ್ಯಾಟ್ ಬೀಸಿದ ಈ ಜೋಡಿ ಮೂರನೇ ವಿಕೆಟ್‌ಗೆ 91 ರನ್ ಒಟ್ಟುಗೂಡಿಸಿದರು. ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ನಿಧಾನಗತಿಯಿಂದ ಕೂಡಿತ್ತು.35 ಎಸೆತಗಳಿಂದ 36 ರನ್ ಗಳಿಸಿದರು. ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ರಿಚಾ ಘೋಷ್ 17 ಎಸೆತಗಳಿಂದ 34 ರನ್ ಬಾರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅರ್ಧಶತಕ ಸಿಡಿಸಿದ ಮಂಧನಾ 9 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ 68 ರನ್ ಗಳಿಸಿದರು. ಪಾಕಿಸ್ತಾನ ಪರ ನಾಯಕಿ ಫಾತಿಮಾ ಸನಾ ಮತ್ತು ಸಾದಿಯಾ ಇಕ್ಬಾಲ್ ತಲಾ 2 ವಿಕೆಟ್ ಕಿತ್ತರು.
ದಾಖಲೆಯ ಪ್ರೇಕ್ಷಕರು
ಈ ಪಂದ್ಯಕ್ಕೆ 18814 ಪ್ರೇಕ್ಷಕರು ಭಾಗಿಯಾದರು. ಇದು ಮಹಿಳಾ T20 ವಿಶ್ವಕಪ್‌ನಲ್ಲಿ ಯಾವುದೇ ಗುಂಪು ಹಂತದ ಪಂದ್ಯದಲ್ಲಿ ಇದುವರೆಗೆ ಅತ್ಯಧಿಕವಾಗಿದೆ. ಹಿಂದಿನ ಗರಿಷ್ಠ 15935 (ಭಾರತದ ವಿರುದ್ಧ ಪಾಕಿಸ್ತಾನ, ದುಬೈ, 6 ಅಕ್ಟೋಬರ್ 2024).