ನವದೆಹಲಿ, ಜ. 24: ಮುಂದಿನ ತಿಂಗಳು ಆರಂಭವಾಗಲಿರುವ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಭಾರತ ಮಹಿಳಾ ತಂಡವನ್ನು ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ, ಫೆಬ್ರವರಿ 15 ರಿಂದ ಮಾರ್ಚ್ 9, 2026 ರವರೆಗೆ ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಪಂದ್ಯಗಳು, ಮೂರು ಟಿ20 ಪಂದ್ಯಗಳು ಮತ್ತು ಒಂದು ಟೆಸ್ಟ್ ಪಂದ್ಯವನ್ನು ಆಡಲಿದೆ.
ವಿಕೆಟ್ ಕೀಪರ್ ಜಿ. ಕಮಲಿನಿ ಅವರನ್ನು ಪ್ರವಾಸದಿಂದ ಹೊರಗಿಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಉಮಾ ಚೆಟ್ರಿ ಅವರ ಬದಲಿಗೆ ಭಾರತದ ಟಿ20ಐ ಮತ್ತು ಏಕದಿನ ತಂಡಗಳಿಗೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತೀಯ ತಂಡಕ್ಕೆ ವೈಷ್ಣವಿ ಶರ್ಮಾ, ಜಿ ಕಮಲಿನಿ ಮತ್ತು ಕಾಶ್ವಿ ಗೌತಮ್ ಎಂಬ ಮೂವರು ಹೊಸ ಆಟಗಾರ್ತಿಯರಿದ್ದು, ಉಮಾ ಚೆಟ್ರಿ, ಯಸ್ತಿಕಾ ಭಾಟಿಯಾ ಮತ್ತು ಪ್ರತೀಕಾ ರಾವಲ್ ತಂಡದಿಂದ ಹೊರಗುಳಿದಿದ್ದಾರೆ.
468 ದಿನಗಳ ಬಳಿಕ ಅರ್ಧಶತಕ ಬಾರಿಸಿ ವಿಶೇಷವಾಗಿ ಸಂಭ್ರಮಿಸಿದ ಸೂರ್ಯಕುಮಾರ್
ಟಿ20ಐ ತಂಡದಲ್ಲಿ ಕೇವಲ ಎರಡು ಬದಲಾವಣೆಗಳನ್ನು ಮಾಡಿದ್ದು, ಹರ್ಲೀನ್ ಡಿಯೋಲ್ ಬದಲಿಗೆ ಶ್ರೇಯಾಂಕ ಪಾಟೀಲ್ ಆಯ್ಕೆಯಾಗಿದ್ದಾರೆ. ಭಾರತಿ ಫುಲ್ಮಾಲಿ ಕೂಡ ಟಿ20ಐ ತಂಡಕ್ಕೆ ಮರಳಿದ್ದಾರೆ. ಅವರು 2019 ರಲ್ಲಿ ಕೊನೆಯ ಬಾರಿಗೆ ಟಿ20ಐ ಮಾದರಿಯಲ್ಲಿ ಆಡಿದ್ದರು.
ಭಾರತ ಮಹಿಳಾ ಟೆಸ್ಟ್ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ) , ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಅಮನ್‌ಜೋತ್ ಕೌರ್, ರಿಚಾ ಘೋಷ್ (ವಿ.ಕೀ.), ಉಮಾ ಚೆಟ್ರಿ (ವಿ.ಕೀ.), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರೇಣುಕಾ ಸಿಂಗ್ ಠಾಕೂರ್, ಸ್ನೇಹ ರಾಣಾ, ಕ್ರಾಂತಿ ಗೌಡ್, ವೈಷ್ಣವಿ ಶರ್ಮಾ, ಸಯಾಲಿ ಸತ್ಘರೆ.
ಟಿ20 ತಂಡ
ಹರ್ಮನ್‌ಪ್ರೀತ್ ಕೌರ್ (c), ಸ್ಮೃತಿ ಮಂಧಾನ (ವಿಸಿ), ಶಫಾಲಿ ವರ್ಮಾ, ರೇಣುಕಾ ಠಾಕೂರ್, ಶ್ರೀ ಚರಣಿ, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ಸ್ನೇಹ ರಾಣಾ, ದೀಪ್ತಿ ಶರ್ಮಾ, ರಿಚಾ ಘೋಷ್ (wk), ಅರುಂಧತಿ ರೆಡ್ಡಿ, ಅಮನ್ಜೋತ್ ಕೌರ್, ಜೆಮಿಮಾ ರಾಡ್ರಿಗಸ್, ಭಾರತಿ ಫುಲ್ಮಾಲಿ, ಶ್ರೇಯಾಂಕ ಪಾಟೀಲ್.
ಭಾರತದ ಆಸ್ಟ್ರೇಲಿಯಾ ಪ್ರವಾಸದ ಪೂರ್ಣ ವೇಳಾಪಟ್ಟಿ
ಮೊದಲ ಟಿ20ಐ, ಫೆಬ್ರವರಿ 15, ಸಿಡ್ನಿ
ಎರಡನೇ ಟಿ20ಐ, ಫೆಬ್ರವರಿ 19, ಕ್ಯಾನ್‌ಬೆರಾ
ಮೂರನೇ ಟಿ20ಐ, ಫೆಬ್ರವರಿ 21, ಅಡಿಲೇಡ್
ಮೊದಲ ಏಕದಿನ, ಫೆಬ್ರವರಿ 24, ಬ್ರಿಸ್ಬೇನ್
ಎರಡನೇ ಏಕದಿನ, ಫೆಬ್ರವರಿ 27, ಹೋಬಾರ್ಟ್
ಮೂರನೇ ಏಕದಿನ, ಮಾರ್ಚ್ 1, ಹೋಬಾರ್ಟ್
ಟೆಸ್ಟ್, ಮಾರ್ಚ್ 6-9, ಪರ್ತ್