ಮುಂಬಯಿ: ಏಷ್ಯಾಕಪ್ ಫೈನಲ್ ಪಂದ್ಯ ರೋಚಕವಾಗಿ ಮುಕ್ತಾಯಗೊಂಡ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭ ಭಾರೀ ಹೈಡ್ರಾಮಾದೊಂದಿಗೆ ಕೂಡಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ, ಪಾಕ್‌ನ ಆಂತರಿಕ ವ್ಯವಹಾರಗಳ ಸಚಿವರೂ ಆಗಿರುವ ಏಷ್ಯಾ ಕ್ರಿಕೆಟ್ ಮಂಡಳಿ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತ ನಿರಾಕರಿಸಿತ್ತು. ಕೊನೆಗೆ ಭಾರತ ಟ್ರೋಫಿ ಇಲ್ಲದೆಯೇ ಟ್ರೋಫಿ ಎತ್ತಿ ಹಿಡಿದಂತೆ(India's Asia Cup celebration) ಸಂಭ್ರಮಾಚರಣೆ ನಡೆಸಿತ್ತು. ಈ ಸಂಭ್ರಮಾಚಣೆಯ ಉಪಾಯ ಯಾರದೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಏಷ್ಯಾಕಪ್ ಗೆದ್ದ ನಂತರ ಭಾರತ ಆಚರಿಸಿಕೊಂಡದ್ದು ವೇಗಿ ಅರ್ಷದೀಪ್ ಸಿಂಗ್(Arshdeep Singh) ಅವರ ಕನಸಿನ ಕೂಸು ಎಂದು ಸ್ಪಿನ್ನರ್ ವರುಣ್ ಚಕ್ರವರ್ತಿ(Varun Chakravarthy) ಬಹಿರಂಗಪಡಿಸಿದ್ದಾರೆ. ಸಿಯೆಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸ್ಟಾರ್ ಸ್ಪಿನ್ನರ್, ಭಾರತ ಪಾಕಿಸ್ತಾನವನ್ನು ಫೈನಲ್‌ನಲ್ಲಿ ಸೋಲಿಸಿದ ರಾತ್ರಿಯ ಘಟನೆಗಳು ಹೇಗೆ ನಡೆದವು ಎಂಬುದರ ಕುರಿತು ವಿವರಗಳನ್ನು ಹಂಚಿಕೊಂಡರು.
"ವಾಸ್ತವವಾಗಿ ಇದು ಅರ್ಷ್‌ದೀಪ್ ಅವರ ಐಡಿಯಾ ಆಗಿತ್ತು. ನಾವು ಟ್ರೋಫಿಗಾಗಿ ಕಾಯುತ್ತಿದ್ದೆವು, ಆದರೆ ಅದು ಹೇಗೆ ಆಯಿತು ಎಂದು ನಮಗೆಲ್ಲರಿಗೂ ತಿಳಿದಿದೆ" ಎಂದು ವರುಣ್ ಹೇಳಿದರು.
ಇದನ್ನೂ ಓದಿ CEAT Awards: ಸಂಜು, ರೋಹಿತ್, ಮಂಧಾನಗೆ ಪ್ರಶಸ್ತಿ
"ನಾನು ಕಪ್ ಬರುತ್ತದೆ ಎಂದು ಆಶಿಸುತ್ತಾ ನಿಂತಿದ್ದೆ. ನಾವೆಲ್ಲರೂ ಕಾಯುತ್ತಿದ್ದೆವು. ಆದರೆ ನನ್ನ ಪಕ್ಕದಲ್ಲಿದ್ದ ಒಂದೇ ಒಂದು ಕಪ್ ಕಾಫಿ ಕಪ್ ಆಗಿತ್ತು" ಎಂದು ಅವರು ನಗುತ್ತಾ ಹೇಳಿದರು. ಫೈನಲ್ ಪಂದ್ಯದ ಬಳಿಕ ಕಾಫಿ ಕಪ್ ಜತೆ ವರುಣ್ ಚಕ್ರವರ್ತಿ ಫೋಟೊವೊಂದನ್ನು ಕೂಡ ಹಂಚಿಕೊಂಡಿದ್ದರು.
ಸಿಯೆಟ್ ಕಂಪನಿ ನೀಡುವ ಈ ಸಾಲಿನ ಕ್ರಿಕೆಟ್ ಪ್ರಶಸ್ತಿಯಲ್ಲಿ ವರಣ್ ವರ್ಷದ ಟಿ20 ಅಂತರರಾಷ್ಟ್ರೀಯ ಬೌಲರ್ ಪ್ರಶಸ್ತಿಗೆ ಭಾಜನರಾದರು. ವರ್ಷದ ಟಿ20 ಬ್ಯಾಟರ್ ಆಫ್ ದಿ ಇಯರ್ ಪ್ರಶಸ್ತಿಯು ಟೀಮ್ ಇಂಡಿಯಾದ ಸಂಜು ಸ್ಯಾಮ್ಸನ್(Sanju Samson) ಅವರಿಗೆ ನೀಡಲಾಗಿದೆ. ಪುರುಷರ ವರ್ಷದ ಅಂತರರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಯನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಹಿರಿಯ ಆಟಗಾರ ಜೋ ರೂಟ್( Joe Root) ಪಡೆದುಕೊಂಡಿದ್ದಾರೆ