ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಈಡನ್ ಗಾರ್ಡನ್ಸ್ ತಂತ್ರ ವಿಫಲ; ಗುವಾಹಟಿ ಟೆಸ್ಟ್‌ಗೆ ಸ್ಪಿನ್ ಪಿಚ್‌ ಇಲ್ಲ!

India vs South Africa 2nd test: ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ದಕ್ಷಿಣ ಆಫ್ರಿಕಾ ದ್ವಿತೀಯ ಪಂದ್ಯವನ್ನು ಗೆದ್ದು 25 ವರ್ಷಗಳ ಬಳಿಕ ಭಾರತದಲ್ಲಿ ಮೊದಲ ಬಾರಿಗೆ ಸರಣಿ ಗೆಲುವು ಸಾಧಿಸುವ ಇರಾದೆಯಲ್ಲಿದೆ. ಗೆಲುವು ಸಾಧ್ಯವಾಗದಿದ್ದರೆ ಕನಿಷ್ಠ ಡ್ರಾ ಮಾಡಿಕೊಂಡರೂ ಸರಣಿ ಹರಿಣಗಳ ಪಾಲಾಗಲಿದೆ.

ಗುವಾಹಟಿ ಟೆಸ್ಟ್‌ಗೆ ಸಂಪೂರ್ಣ ವೇಗದ ಬೌನ್ಸಿ ಪಿಚ್‌

ಗುವಾಹಟಿ ಟೆಸ್ಟ್‌ಗೆ ಸಂಪೂರ್ಣ ವೇಗದ ಬೌನ್ಸಿ ಪಿಚ್‌ -

Abhilash BC
Abhilash BC Nov 19, 2025 8:51 AM

ಗುವಾಹಟಿ: ಕೋಲ್ಕತ್ತಾ ಟೆಸ್ಟ್ ಸೋಲಿನ ನಂತರ, ಗೌತಮ್ ಗಂಭೀರ್ ನೇತೃತ್ವದ ಭಾರತೀಯ(IND vs SA) ತಂಡದ ಆಡಳಿತ ಮಂಡಳಿಯು ಗುವಾಹಟಿ(Guwahati)ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ಗೆ(India vs South Africa 2nd test) ಯಾವ ರೀತಿಯ ಪಿಚ್ ಬೇಕು ಎಂಬುದರ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದೆ. ಶನಿವಾರ (ನವೆಂಬರ್ 22) ಪ್ರಾರಂಭವಾಗಲಿರುವ ಪಂದ್ಯದಲ್ಲಿ ಕೆಂಪು ಮಣ್ಣಿನ ಪಿಚ್ ಅನ್ನು ಸಿದ್ಧಪಡಿಸಲು ಸಜ್ಜಾಗಿದೆ.

ವರದಿಯ ಪ್ರಕಾರ, ಸರಣಿಯ ಆರಂಭಿಕ ಪಂದ್ಯಕ್ಕಾಗಿ ಈಡನ್ ಗಾರ್ಡನ್ಸ್‌ನಲ್ಲಿ ಮಾಡಲಾಗಿದ್ದ ಪಿಚ್‌ಗಿಂತ ಸಂಪೂರ್ಣವಾಗಿ ಈ ಪಿಚ್‌ ಭಿನ್ನವಾಗಿರಲಿದ್ದು ವೇಗಿಗಳಿಗೆ ನೆರವಾಗುವ ಉತ್ತಮ ಬೌನ್ಸ್ ಮತ್ತು ಕ್ಯಾರಿ ನಿರೀಕ್ಷಿಸಲಾಗಿದೆ. ಪಿಚ್‌ ತಿರುವು ಪಡೆಯುವ ನಿರೀಕ್ಷೆಯಿಲ್ಲ.

"ಇಲ್ಲಿನ ಪಿಚ್ ಕೆಂಪು ಮಣ್ಣಿನಿಂದ ಮಾಡಲ್ಪಟ್ಟಿದೆ, ಇದು ಹೆಚ್ಚು ವೇಗ ಮತ್ತು ಬೌನ್ಸ್ ನೀಡುವ ಪ್ರವೃತ್ತಿಯನ್ನು ಹೊಂದಿದೆ. ತವರು ಋತುವಿಗೆ ಮುಂಚಿತವಾಗಿಯೇ ಭಾರತ ತಂಡವು ತಮ್ಮ ಬೇಡಿಕೆಗಳನ್ನು ಸ್ಪಷ್ಟಪಡಿಸಿತ್ತು. ಗಣನೀಯವಾಗಿ ಬದಲಾಗುವ ಬೌನ್ಸ್ ಆಗದಂತೆ ಖಚಿತಪಡಿಸಿಕೊಳ್ಳಲು ಕ್ಯುರೇಟರ್‌ಗಳು ಪ್ರಯತ್ನಿಸುತ್ತಿದ್ದಾರೆ" ಎಂದು ಬಿಸಿಸಿಐ ಮೂಲವೊಂದು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದೆ.

ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ದಕ್ಷಿಣ ಆಫ್ರಿಕಾ ದ್ವಿತೀಯ ಪಂದ್ಯವನ್ನು ಗೆದ್ದು 25 ವರ್ಷಗಳ ಬಳಿಕ ಭಾರತದಲ್ಲಿ ಮೊದಲ ಬಾರಿಗೆ ಸರಣಿ ಗೆಲುವು ಸಾಧಿಸುವ ಇರಾದೆಯಲ್ಲಿದೆ. ಗೆಲುವು ಸಾಧ್ಯವಾಗದಿದ್ದರೆ ಕನಿಷ್ಠ ಡ್ರಾ ಮಾಡಿಕೊಂಡರೂ ಸರಣಿ ಹರಿಣಗಳ ಪಾಲಾಗಲಿದೆ.

ಇದನ್ನೂ ಓದಿ IND vs SA: ಗಾಯಳು ಶುಭಮನ್ ಗಿಲ್ ಬದಲಿಗೆ ಮತ್ತೆ ತಂಡ ಸೇರಿದ ನಿತೀಶ್ ರೆಡ್ಡಿ

ದಕ್ಷಿಣ ಆಫ್ರಿಕಾ ತಂಡವು ಭಾರತದಲ್ಲಿ ಕೊನೆಯ ಬಾರಿಗೆ ಟೆಸ್ಟ್ ಸರಣಿಯನ್ನು ಗೆದ್ದಿದ್ದು 2000 ರಲ್ಲಿ. ಹ್ಯಾನ್ಸಿ ಕ್ರೋನಿಯೆ ನೇತೃತ್ವದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ತಂಡದ ವಿರುದ್ಧ 2-0 ಅಂತರದ ಐತಿಹಾಸಿಕ ಸರಣಿಯನ್ನು ಗೆದ್ದಿತ್ತು. ಮೊದಲ ಟೆಸ್ಟ್ ಅನ್ನು ನಾಲ್ಕು ವಿಕೆಟ್‌ಗಳಿಂದ ಮತ್ತು ಎರಡನೇ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಮತ್ತು 71 ರನ್‌ಗಳಿಂದ ಗೆದ್ದುಕೊಂಡಿತ್ತು.

ಗಿಲ್‌ ಅನುಮಾನ

ಭಾರತ ತಂಡದ ಆಟಗಾರರು ಇಂದು(ಬುಧವಾರ) ಗುವಾಹಟಿಗೆ ತೆರಳಲಿದ್ದಾರೆ. ಕತ್ತಿಗೆ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಶುಭಮನ್‌ ಗಿಲ್‌ ಕೂಡ ತಂಡದೊಂದಿಗೆ ಪ್ರಯಾಣ ಬೆಳೆಸಲಿದ್ದಾರೆ. ಆದರೆ ಅವರು ಆಡುವ ಬಗ್ಗೆ ಅನುಮಾನವಿದೆ. ಇದೇ ಕಾರಣಕ್ಕೆ ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅತ್ತ ದಕ್ಷಿಣ ಆಫ್ರಿಕಾ ಕೂಡ ವೇಗಿ ಲುಂಗಿ ಎನ್‌ಗಿಡಿಯನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಇದನ್ನೂ ಓದಿ IND vs SA: 2ನೇ ಟೆಸ್ಟ್‌ಗೂ ಮುನ್ನ ದಕ್ಷಿಣ ಆಫ್ರಿಕಾಗೆ ಗಾಯದ ಭೀತಿ; ಇಬ್ಬರು ಪ್ರಧಾನ ಬೌಲರ್‌ಗಳಿಗೆ ಗಾಯ

ಪರಿಷ್ಕೃತ ತಂಡಗಳು

ಭಾರತ ತಂಡ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿ.ಕೀ.), ರವೀಂದ್ರ ಜಡೇಜಾ, ಧ್ರುವ್ ಜುರೆಲ್,ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಆಕಾಶ್ ದೀಪ್, ನಿತೀಶ್‌ ಕುಮಾರ್‌ ರೆಡ್ಡಿ.

ದಕ್ಷಿಣ ಆಫ್ರಿಕಾ ತಂಡ: ಐಡೆನ್ ಮಾರ್ಕ್ರಮ್, ರಿಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೆಂಬಾ ಬವುಮಾ (ನಾಯಕ), ಟೋನಿ ಡಿ ಜೋರ್ಜಿ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್ನೆ (ವಿ.ಕೀ.), ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್, ಸೈಮನ್ ಹಾರ್ಮರ್, ಕೇಶವ ಮಹಾರಾಜ್, ಡೆವಾಲ್ಡ್ ಬ್ರೆವಿಸ್, ಕಗಿಸೊ ರಬಾಡ, ಸೆನುರಾನ್ ಮುತ್ತುಸಾಮಿ, ಜುಬೇರ್ ಹಮ್ಜಾ, ಲುಂಗಿ ಎನ್‌ಗಿಡಿ.