IND vs SA: 2ನೇ ಟೆಸ್ಟ್‌ಗೂ ಮುನ್ನ ದಕ್ಷಿಣ ಆಫ್ರಿಕಾಗೆ ಗಾಯದ ಭೀತಿ; ಇಬ್ಬರು ಪ್ರಧಾನ ಬೌಲರ್‌ಗಳಿಗೆ ಗಾಯ
ಗಿಲ್ ಅವರ ಗಾಯಕ್ಕೆ ಚಿಕಿತ್ಸೆ ನೀಡಿದ ಅದೇ ಕೇಂದ್ರದಲ್ಲಿ ಉಭಯ ಆಟಗಾರರಗೂ ತಪಾಸಣೆ ಮಾಡಲಾಗಿತ್ತು. ಎಂಬ ವರದಿಗಳು ಲಭಿಸಿದೆ. ರಬಾಡ ಗಾಯದ ಕಾರಣದಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಒಂದೊಮ್ಮೆ ಸೈಮನ್ ಹಾರ್ಮರ್ ಮತ್ತು ಜಾನ್ಸೆನ್ ದ್ವಿತೀಯ ಪಂದ್ಯದಿಂದ ಹೊರಗುಳಿದರೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಬಹುದು.
2ನೇ ಟೆಸ್ಟ್‌ಗೂ ಮುನ್ನ ದಕ್ಷಿಣ ಆಫ್ರಿಕಾಗೆ ಗಾಯದ ಭೀತಿ -
ಗುವಾಹಟಿ: ಕೋಲ್ಕತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ(IND vs SA) ಬರ್ಸಪರ ಕ್ರೀಡಾಂಗಣದಲ್ಲಿ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಗುವಾಹಟಿಗೆ ಪ್ರಯಾಣಿಸುವ ಮುನ್ನವೇ ತಂಡಕ್ಕೆ ಗಾಯದ ಭೀತಿ ಎದುರಾಗಿದೆ. ಮೊದಲ ಪಂದ್ಯದ ಗೆಲುವಿನ ಹೀರೋ ಎನಿಸಿದ್ದ ಆಫ್ ಸ್ಪಿನ್ನರ್ ಸೈಮನ್ ಹಾರ್ಮರ್(Harmer) ಭುಜದ ಗಾಯದಿಂದ ಬಳಲುತ್ತಿದ್ದು, ಎಡಗೈ ಸೀಮರ್ ಮಾರ್ಕೊ ಜಾನ್ಸೆನ್(Jansen) ಕೂಡ ಗಾಯಗೊಂಡಿದ್ದಾರೆ ವರದಿಯಾಗಿದೆ.
ಶುಭಮನ್ ಗಿಲ್ ಅವರ ಗಾಯಕ್ಕೆ ಚಿಕಿತ್ಸೆ ನೀಡಿದ ಅದೇ ಕೇಂದ್ರದಲ್ಲಿ ಉಭಯ ಆಟಗಾರರಗೂ ತಪಾಸಣೆ ಮಾಡಲಾಗಿತ್ತು. ಎಂಬ ವರದಿಗಳು ಲಭಿಸಿದೆ. ರಬಾಡ ಗಾಯದ ಕಾರಣದಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಒಂದೊಮ್ಮೆ ಸೈಮನ್ ಹಾರ್ಮರ್ ಮತ್ತು ಜಾನ್ಸೆನ್ ದ್ವಿತೀಯ ಪಂದ್ಯದಿಂದ ಹೊರಗುಳಿದರೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಬಹುದು.
ಈಡನ್ ಗಾರ್ಡನ್ಸ್‌ನಲ್ಲಿ ಭಾರತ ವಿರುದ್ಧದ ಐತಿಹಾಸಿಕ 30 ರನ್‌ಗಳ ಗೆಲುವಿನಲ್ಲಿ ಹಾರ್ಮರ್ ಮತ್ತು ಜಾನ್ಸೆನ್ ಇಬ್ಬರೂ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹಾರ್ಮರ್ ಮೊದಲ ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ ತಲಾ 4 ವಿಕೆಟ್ ಕೆಡವಿದ್ದರು. ಜಾನ್ಸೆನ್ 5 ವಿಕೆಟ್ ಕಿತ್ತಿದ್ದರು. ಇನ್ನೊಂದೆಡೆ ತಂಡದ ಆಡಳಿತ ಮಂಡಳಿಯು ರಬಾಡ ಸ್ಥಾನಕ್ಕೆ ಬ್ಯಾಕ್ ಅಪ್ ಬೌಲರ್ ಆಗಿ ಎನ್‌ಗಿಡಿ ಅವರನ್ನು ತಂಡಕ್ಕೆ ಕರೆತಂದಿದೆ. ರಬಾಡ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳಲು ವಿಫಲವಾದರೆ ಅಥವಾ ಎರಡನೇ ಟೆಸ್ಟ್‌ಗೆ ಮೊದಲು ಯಾವುದೇ ಅನಿರೀಕ್ಷಿತ ಸಮಸ್ಯೆಗಳು ಎದುರಾದರೆ ದಕ್ಷಿಣ ಆಫ್ರಿಕಾಕ್ಕೆ ವಿಶ್ವಾಸಾರ್ಹ ವೇಗದ ಆಯ್ಕೆ ಸುಲಭವಾಗಿ ಲಭ್ಯವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ IND vs SA: ಗಿಲ್‌ಗೆ ವಿಶ್ರಾಂತಿ ಸಾಧ್ಯತೆ; ಏಕದಿನ ಸರಣಿಗೆ ರಾಹುಲ್ ನಾಯಕ?
ಕುತ್ತಿಗೆ ನೋವಿನಿಂದ ಬಳಲುತ್ತಿರುವ ಭಾರತದ ನಾಯಕ ಶುಭಮನ್ ಗಿಲ್, ಅವರು ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಗುವಾಹಟಿಗೆ ತಂಡದೊಂದಿಗೆ ಬುಧವಾರ ಪ್ರಯಾಣಿದ್ದಾರೆ ಎನ್ನಲಾಗಿದೆ. ಆದರೆ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಅವರ ಲಭ್ಯತೆ ಇನ್ನೂ ಅನಿಶ್ಚಿತವಾಗಿದೆ. ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಮೊದಲ ಇನ್ನಿಂಗ್ಸ್‌ನಲ್ಲಿ ಕವರ್ ಡ್ರೈವ್ ನಂತರ ಗಿಲ್ ಕುತ್ತಿಗೆ ಸೆಳೆತಕ್ಕೆ ಒಳಗಾದರು ಮತ್ತು ಆಸ್ಪತ್ರೆಗೆ ದಾಖಲಾಗುವ ಮೊದಲು ರಿಟೈರ್ಡ್ ಹರ್ಟ್ ಆಗಿದ್ದರು.