ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 5th Test: ಪಂದ್ಯ ಆರಂಭಗೊಂಡ ಅರ್ಧ ಗಂಟೆಯಲ್ಲೇ ಭಾರತ ಆಲೌಟ್‌

ಮೊದಲ ದಿನದಾಟದಲ್ಲಿ ಪದೇ ಪದೇ ಮಳೆ ಅಡಚಣೆ ಉಂಟು ಮಾಡಿದ ಪರಿಣಾಮ ಪೂರ್ಣ ಪ್ರಮಾಣದ ಆಟ ನಡೆಯಲಿಲ್ಲ. ಕೇವಲ 60 ಓವರ್‌ಗಳ ಆಟ ಮಾತ್ರ ಸಾಗಿತ್ತು. ಹೀಗಾಗಿ ನಷ್ಟವಾದ ಆಟವನ್ನು ಸರಿದೂಗಿಸಲು ದ್ವಿತೀಯ ದಿನ ಹೆಚ್ಚುವರಿ 30 ನಿಮಿಷದ ಆಟ ನಿಗದಿಪಡಿಸಲಾಗಿದೆ.

ಪಂದ್ಯ ಆರಂಭಗೊಂಡ ಅರ್ಧ ಗಂಟೆಯಲ್ಲೇ ಭಾರತ ಆಲೌಟ್‌

Abhilash BC Abhilash BC Aug 1, 2025 4:27 PM

ಲಂಡನ್‌: ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ 5ನೇ ಟೆಸ್ಟ್‌ನ(IND vs ENG 5th Test) ಮೊದಲ ಇನಿಂಗ್ಸ್‌ನಲ್ಲಿ ಭಾರತ 224 ರನ್‌ಗೆ ಆಲೌಟ್‌ ಆಗಿದೆ. ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ಗೆ 204 ರನ್‌ ಗಳಿಸಿದ್ದ ಭಾರತ ಶುಕ್ರವಾರ ದ್ವಿತೀಯ ದಿನದಾಟದಲ್ಲಿ ಕೇವಲ 20 ರನ್‌ ಮಾತ್ರಗಳಿಸಿತು. ಪಂದ್ಯ ಆರಂಭಗೊಂಡು ಅರ್ಧ ಗಂಟೆ ಕಳೆಯುವ ಮುನ್ನವೇ ಸರ್ವಪತನ ಕಂಡಿತು.

52 ರನ್ ಸಿಡಿಸಿದ್ದ ಕರುಣ್‌ ನಾಯರ್‌ ಒಂದು ಬೌಂಡರಿ ಬಾರಿಸಿ 57 ರನ್‌ಗೆ ವಿಕೆಟ್‌ ಕಳೆದುಕೊಂಡರು. ವಾಷಿಂಗ್ಟನ್‌ ಸುಂದರ್‌ 26 ರನ್‌ ಗಳಿಸಿದರು. ಉಭಯ ಆಟಗಾರರ ವಿಕೆಟ್‌ ಬಿದ್ದೊಡನೆ ಭಾರತ ನಾಟಕೀಯ ಕುಸಿತ ಕಂಡಿತು. ಗಸ್ ಅಟ್ಕಿನ್ಸನ್ ಮಾರಕ ದಾಳಿಗೆ ಸಿರಾಜ್‌ ಮತ್ತು ಪ್ರಸಿದ್ಧ್‌ ಶೂನ್ಯ ಸುತ್ತಿದರು. ಅಟ್ಕಿನ್ಸನ್ 33 ರನ್‌ಗೆ 5 ವಿಕೆಟ್‌ ಕಿತ್ತು ಮಿಂಚಿದರು. ಜೋಶ್ ಟಂಗ್ 3 ವಿಕೆಟ್‌ ಕಿತ್ತರು. ಗಾಯಗೊಂಡು ಕ್ರಿಸ್‌ ವೋಕ್ಸ್‌ ಹೊರಬಿದ್ದರೂ ಕೂಡ ಅಟ್ಕಿನ್ಸನ್ ಮತ್ತು ಟಂಗ್ ಸೇರಿಕೊಂಡು ತಂಡಕ್ಕೆ ಯಾವುದೇ ಕೊರತೆ ಬಾರದಂತೆ ನೋಡಿಕೊಂಡರು.

30 ನಿಮಿಷ ಹೆಚ್ಚುವರಿ

ಮೊದಲ ದಿನದಾಟದಲ್ಲಿ ಪದೇ ಪದೇ ಮಳೆ ಅಡಚಣೆ ಉಂಟು ಮಾಡಿದ ಪರಿಣಾಮ ಪೂರ್ಣ ಪ್ರಮಾಣದ ಆಟ ನಡೆಯಲಿಲ್ಲ. ಕೇವಲ 60 ಓವರ್‌ಗಳ ಆಟ ಮಾತ್ರ ಸಾಗಿತ್ತು. ಹೀಗಾಗಿ ನಷ್ಟವಾದ ಆಟವನ್ನು ಸರಿದೂಗಿಸಲು ದ್ವಿತೀಯ ದಿನ ಹೆಚ್ಚುವರಿ 30 ನಿಮಿಷದ ಆಟ ನಿಗದಿಪಡಿಸಲಾಗಿದೆ. ಅಂದರೆ 98 ಓವರ್‌ಗಳ ಆಟ ಆಡಬೇಕಿದೆ.

ಇದನ್ನೂ ಓದಿ IND vs ENG 5th Test: ಓವಲ್‌ ಟೆಸ್ಟ್‌ನಿಂದ ಹೊರಬಿದ್ದ ಕ್ರಿಸ್‌ ವೋಕ್ಸ್‌