IPL 2025: ಭಾರತ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಐಪಿಎಲ್ಗೆ ಎಂಟ್ರಿ ಕೊಟ್ಟ ಅಭಿಷೇಕ್ ನಾಯರ್
ಹಾಲಿ ಆವೃತ್ತಿಯಲ್ಲಿ ಕೆಕೆಆರ್ ತಂಡ ಆಡಿದ 7 ಪಂದ್ಯಗಳಿಂದ ಕೇವಲ 3 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇದೀಗ ಅಭಿಷೇಕ್ ನಾಯರ್ ಕೋಚಿಂಗ್ ವಿಭಾಗದ ಸೇರಿದ ಬಳಿಕ ತಂಡ ಗೆಲುವಿನ ಹಳಿ ಏರಿತೇ ಎಂದು ಕಾದು ನೋಡಬೇಕಿದೆ.


ಕೋಲ್ಕತ: ಕೆಲ ದಿನಗಳ ಹಿಂದಷ್ಟೇ ಭಾರತ ತಂಡದ ಸಹಾಯಕ ಕೋಚ್ ಹುದ್ದೆಯಿಂದ ವಜಾಗೊಂಡಿದ್ದ ಅಭಿಷೇಕ್ ನಾಯರ್(Abhishek Nayar), ಐಪಿಎಲ್ 18ನೇ(IPL 2025) ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಕೋಲ್ಕತ ನೈಟ್ರೈಡರ್ಸ್(Kolkata Knight Riders) ತಂಡದ ತರಬೇತಿ ಬಳಗವನ್ನು ಕೂಡಿಕೊಂಡಿದ್ದಾರೆ. ಟೀಮ್ ಇಂಡಿಯಾದ ಸಹಾಯಕ ಕೋಚ್ ಆಗುವ ಮುನ್ನ ಅವರು ಕೆಕೆಆರ್ ತಂಡದ ಸಹಾಯಕ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಅಭಿಷೇಕ್ ನಾಯರ್ ಕೆಕೆಆರ್ ತಂಡ ಕೂಡಿಕೊಂಡಿರುವುದನ್ನು ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ 'ವೆಲ್ಕಂ ಬ್ಯಾಕ್ ಹೋಮ್'(ತವರಿಗೆ ಮತ್ತೆ ಸ್ವಾಗತ) ಎಂದು ಪ್ರಕಟಿಸಿದೆ. ಕಳೆದ ವರ್ಷ ಕೆಕೆಆರ್ ತಂಡ ಪ್ರಶಸ್ತಿ ಗೆಲುವಿನಲ್ಲಿ ನಾಯರ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದರು.
Welcome back home, @abhisheknayar1 💜 pic.twitter.com/IwJQTnAWxa
— KolkataKnightRiders (@KKRiders) April 19, 2025
ಹಾಲಿ ಆವೃತ್ತಿಯಲ್ಲಿ ಕೆಕೆಆರ್ ತಂಡ ಆಡಿದ 7 ಪಂದ್ಯಗಳಿಂದ ಕೇವಲ 3 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇದೀಗ ಅಭಿಷೇಕ್ ನಾಯರ್ ಕೋಚಿಂಗ್ ವಿಭಾಗದ ಸೇರಿದ ಬಳಿಕ ತಂಡ ಗೆಲುವಿನ ಹಳಿ ಏರಿತೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IPL 2025 Points Table: ಡಬಲ್ ಹೆಡರ್ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಕಳಪೆ ಪ್ರದರ್ಶನ ತೋರಿತ್ತು. ಇದೇ ಕಾರಂದಿಂದ ಅಭಿಷೇಕ್ ನಾಯರ್ ಮಾತ್ರವಲ್ಲದೆ ತರಬೇತುದಾರ ಸೋಹಮ್ ದೇಸಾಯಿ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರನ್ನು ಕೂಡಾ ವಜಾ ಮಾಡಲಾಗಿದೆ.