ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಕ್ಷರ್‌ ಪಟೇಲ್‌ ಸಾರಥಿ

Axar Patel: ಅಕ್ಷರ್‌ ಪಟೇಲ್‌ ಅವರನ್ನು ಕಳೆದ ಮೆಗಾ ಹರಾಜಿಗೆ ಮುನ್ನ 16.50 ಕೋಟಿ ರೂ.ಗೆ ಡೆಲ್ಲಿ ತಂಡದಲ್ಲಿ ರಿಟೇನ್​ ಮಾಡಿತ್ತು. ಅಕ್ಷರ್ ಟಿ20ಯಲ್ಲಿ ನಾಯಕತ್ವ ವಹಿಸುವುದು ಇದೇ ಮೊದಲೇನಲ್ಲ. 2018 ರಿಂದ 2024 ರವರೆಗೆ 16 ಟಿ20 ಪಂದ್ಯಗಳಲ್ಲಿ ಬರೋಡಾವನ್ನು ಮುನ್ನಡೆಸಿದ್ದರು. ಈ ಪೈಕಿ 10 ಪಂದ್ಯಗಳಲ್ಲಿ ಜಯ ಸಾಧಿಸಿದ್ದರು.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಕ್ಷರ್‌ ಪಟೇಲ್‌ ನೂತನ ನಾಯಕ

Profile Abhilash BC Mar 14, 2025 10:30 AM

ನವದೆಹಲಿ: ನಿರೀಕ್ಷೆಯಂತೆ 18ನೇ ಆವೃತ್ತಿಯ ಐಪಿಎಲ್‌(IPL 2025) ಟೂರ್ನಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ(Delhi Capitals) ಸ್ಪಿನ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌(Axar Patel) ಅವರನ್ನು ನೂತನ ನಾಯಕನನ್ನಾಗಿ ನೇಮಿಸಿದೆ. ಶುಕ್ರವಾರ ಬೆಳಗ್ಗೆ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ತಂಡದ ನಾಯಕನ ಹೆಸರನ್ನು ಪ್ರಕಟಿಸಿತು. ಒತ್ತಡ ರಹಿತವಾಗಿ ಬ್ಯಾಟಿಂಗ್‌ ನಡೆಸುವ ಸಲುವಾಗಿ ಕನ್ನಡಿಗ ಕೆ.ಎಲ್‌ ರಾಹುಲ್‌ ನಾಯಕತ್ವ ನಿರಾಕರಿಸಿದ ಹಿನ್ನೆಲೆ ನಾಯಕತ್ವ ಅಕ್ಷರ್‌ ಪಾಲಾಯಿತು. ಅಕ್ಷರ್‌ ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ ಮತ್ತು ಇದೇ ವರ್ಷ ನಡೆದ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ ತಂಡದ ಸದಸ್ಯನಾಗಿರುವ ಕಾರಣ ಅವರ ನಾಯಕತ್ವದಲ್ಲಿ ಡೆಲ್ಲಿ ಕೂಡ ಚೊಚ್ಚಲ ಕಪ್‌ ಗೆದ್ದೀತೇ ಎಂದು ಕಾದು ನೋಡಬೇಕಿದೆ.

ಅಕ್ಷರ್‌ ಪಟೇಲ್‌ ಅವರನ್ನು ಕಳೆದ ಮೆಗಾ ಹರಾಜಿಗೆ ಮುನ್ನ 16.50 ಕೋಟಿ ರೂ.ಗೆ ಡೆಲ್ಲಿ ತಂಡದಲ್ಲಿ ರಿಟೇನ್​ ಮಾಡಿತ್ತು. ಅಕ್ಷರ್ ಟಿ20ಯಲ್ಲಿ ನಾಯಕತ್ವ ವಹಿಸುವುದು ಇದೇ ಮೊದಲೇನಲ್ಲ. 2018 ರಿಂದ 2024 ರವರೆಗೆ 16 ಟಿ20 ಪಂದ್ಯಗಳಲ್ಲಿ ಬರೋಡಾವನ್ನು ಮುನ್ನಡೆಸಿದ್ದರು. ಈ ಪೈಕಿ 10 ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಕಳೆದ ವರ್ಷ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಒಮ್ಮೆ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಆದರೆ ಈ ಪಂದ್ಯದಲ್ಲಿ ಡೆಲ್ಲಿ 47 ರನ್‌ಗಳಿಂದ ಸೋಲು ಕಂಡಿತ್ತು. ಡೆಲ್ಲಿ ತಂಡ ಈ ಬಾರಿ ತನ್ನ ಮೊದಲ ಪಂದ್ಯವನ್ನು ಮಾರ್ಚ್‌ 24 ರಂದು ಲಕ್ನೋ ಸೂಪರ್‌ಜೈಂಟ್ಸ್‌ ವಿರುದ್ಧ ಆಡಲಿದೆ.



'ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಳ್ಳುವುದು ನನಗೆ ಅತ್ಯಂತ ಗೌರವ, ಮತ್ತು ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಮ್ಮ ಮಾಲೀಕರು ಮತ್ತು ಸಹಾಯಕ ಸಿಬ್ಬಂದಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಹಲವು ವರ್ಷಗಳಿಂದ ಕ್ಯಾಪಿಟಲ್ಸ್‌ ತಂಡದಲ್ಲಿ ನಾನು ಶ್ರೇಷ್ಠ ಕ್ರಿಕೆಟಿಗನಾಗಿ ಬೆಳೆದಿದ್ದೇನೆ. ಈ ತಂಡವನ್ನು ಮುಂದೆ ಮುನ್ನಡೆಸಲು ನಾನು ಸಿದ್ಧ ಮತ್ತು ಆತ್ಮವಿಶ್ವಾಸವನ್ನು ಹೊಂದಿದ್ದೇನೆ' ಎಂದು ಅಕ್ಷರ್ ಹೇಳಿದರು.

ಇದನ್ನೂ ಓದಿ IPL 2025: ಕಠಿಣ ಅಭ್ಯಾಸ ಆರಂಭಿಸಿದ ಆರ್‌ಸಿಬಿ ಆಟಗಾರರು

2020 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಪಂದ್ಯಾವಳಿ ನಡೆದಾಗ ಕ್ಯಾಪಿಟಲ್ಸ್ ರನ್ನರ್-ಅಪ್ ಆಗಿತ್ತು. ಆದರೆ 2022, 2023 ಮತ್ತು 2024 ರಲ್ಲಿ ಸತತ ಮೂರು ಋತುಗಳಲ್ಲಿ ಪ್ಲೇಆಫ್‌ಗೆ ಪ್ರವೇಶಿಸಲು ವಿಫಲವಾಯಿತು.



ಡೆಲ್ಲಿ ಕ್ಯಾಪಿಟಲ್ಸ್‌ ತಂಡ

ಕೆಎಲ್​ ರಾಹುಲ್,​ ಮಿಚೆಲ್​ ಸ್ಟಾರ್ಕ್​, ಟಿ. ನಟರಾಜನ್, ಜೇಕ್​ ಫ್ರೇಸರ್​ ಮೆಕ್​ಗುರ್ಕ್​, ​ಕರುಣ್​ ನಾಯರ್, ಸಮೀರ್​ ರಿಜ್ವಿ, ಆಶುತೋಷ್​ ಶರ್ಮ, ಮೋಹಿತ್​ ಶರ್ಮ, ಮುಕೇಶ್​ ಕುಮಾರ್​, ಫಾಫ್ ಡು ಪ್ಲೆಸಿಸ್, ದರ್ಶನ್​ ನಲ್ಕಂಡೆ, ವಿಪ್ರಜ್​ ನಿಗಮ್, ದುಶ್ಮಂತ ಚಮೀರ, ಡೊನೊವನ್​ ಫೆರೀರ , ಅಜಯ್​ ಮಂಡಲ್​, ಮನ್ವಂತ್​ ಕುಮಾರ್, ತ್ರಿಪುರಣ ವಿಜಯ್​, ಮಾಧವ್​ ತಿವಾರಿ.