ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2025ರ ಐಪಿಎಲ್‌ ಟೂರ್ನಿಯು ಒಂದು ವಾರ ಸ್ಥಗಿತಗೊಂಡಿರುವ ಬಗ್ಗೆ ಸೌರವ್‌ ಗಂಗೂಲಿ ಪ್ರತಿಕ್ರಿಯೆ!

Sourav Ganguly on IPL 2025: ಭಾರತ ಹಾಗೂ ಪಾಕಿಸ್ತಾನ ನಡುವಣ ಅಂತಾರಾಷ್ಟ್ರೀಯ ಗಡಿ ಭಾಗಗಳಲ್ಲಿ ಉದ್ವಿಗ್ನತೆ ಉಂಟಾಗಿರುವ ಕಾರಣ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಇನ್ನುಳಿದ ಭಾಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.

2025ರ ಐಪಿಎಲ್‌ ಸ್ಥಗಿತಗೊಂಡಿರುವ  ಬಗ್ಗೆ ಸೌರವ್‌ ಗಂಗೂಲಿ ಪ್ರತಿಕ್ರಿಯೆ!

2025ರ ಐಪಿಎಲ್‌ ಟೂರ್ನಿಯ ಬಗ್ಗೆ ಸೌರವ್‌ ಗಂಗೂಲಿ ಪ್ರತಿಕ್ರಿಯೆ.

Profile Ramesh Kote May 10, 2025 7:02 PM

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ (IND vs PAK War) ನಡುವಣ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿಯ ಕಾರಣ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಇನ್ನುಳಿದ ಭಾಗವನ್ನು ಒಂದು ವಾರದ ಕಾಲ ಸ್ಥಗಿತಗೊಳಿಸಲಾಗಿದೆ. ಒಂದು ವಾರದ ಬೆಳವಣಿಗೆಗಳನ್ನು ನೋಡಿಕೊಂಡು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಮಾಜಿ ಅಧ್ಯಕ್ಷ ಹಾಗೂ ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ. ಹದಿನೆಂಟನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಬಿಸಿಸಿಐ ಸಂಪೂರ್ಣವಾಗಿ ಮುಗಿಸಲಿದೆ ಎಂದು ಸೌರವ್‌ ಗಂಗೂಲಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇಂಡಿಯಾ ಟುಡೇ ಜೊತೆ ಮಾತನಾಡಿದ ಸೌರವ್‌ ಗಂಗೂಲಿ,"ಐಪಿಎಲ್‌ ಟೂರ್ನಿಯನ್ನು ಏಳು ದಿನಗಳ ಕಾಲ ತಾತ್ಕಾಲಿಕವಾಗಿ ನಿಲ್ಲಿಸಿರುವ ಬಗ್ಗೆ ನನಗೆ ಇಂದು ತಿಳಿದಿದೆ. ಬಿಸಿಸಿಐ ದಕ್ಷವಾಗಿದೆ. ಕೋವಿಡ್‌ ಅವಧಿಯ ನಮಗೆ ಮತ್ತೊಂದು ತುರ್ತು ಪರಿಸ್ಥಿತಿ ಎದುರಾಗಿತ್ತು. ಅಂದ ಹಾಗೆ ಐಪಿಎಲ್‌ ಟೂರ್ನಿಯನ್ನು ಬಿಸಿಸಿಐ ಮುಗಿಸಲಿದೆ ಎಂಬ ಬಗ್ಗೆ ನನಗೆ ಖಚಿತತೆ ಇದೆ. ಕೋವಿಡ್‌ ಸನ್ನಿವೇಶ ತುಂಬಾ ವಿಭಿನ್ನವಾಗಿದೆ. ಭಾರತೀಯ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಬಿಸಿಸಿಐ ಕೆಲಸ ಮಾಡಲಿದೆ. ಭಾರತೀಯ ಸೇನೆ ನಮಗೆ ಹೆಮ್ಮೆಯ ವಿಷಯ ಏಕೆಂದರೆ, ನಾವು ನೆಮ್ಮಿದಿಯಾಗಿ ಇರಲು ಅವರೇ ಕಾರಣ," ಎಂದು ಅವರು ತಿಳಿಸಿದ್ದಾರೆ.

IPL 2025: ʻಇನ್ನುಳಿದ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ಆಡಿಸಿʼ-ಬಿಸಿಸಿಐಗೆ ಮೈಕಲ್‌ ವಾನ್‌ ಸಲಹೆ!

ಸೌರವ್‌ ಗಂಗೂಲಿ ಅವರು ಮೂರು ವರ್ಷಗಳ ಕಾಲ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಆದರೆ, ಇವರ ಅವಧಿಯಲ್ಲಿ ಒಂದೇ ಒಂದು ಬಾರಿ ಮಾತ್ರ ಐಪಿಎಲ್‌ ಟೂರ್ನಿಯನ್ನು ಭಾರತದ ಆತಿಥ್ಯದಲ್ಲಿ ನಡೆಸಲಾಗಿತ್ತು. 2020ರ ಐಪಿಎಲ್‌ ಟೂರ್ನಿಯನ್ನು ಕೋವಿಡ್‌ ಲಾಕ್‌ಡೌನ್‌ ಇದ್ದ ಕಾರಣ ಸಂಪೂರ್ಣವಾಗಿ ಯುಎಇ ಆತಿಥ್ಯದಲ್ಲಿ ನೆಡಸಲಾಗಿತ್ತು.

2021ರ ಐಪಿಎಲ್‌ ಟೂರ್ನಿಯ ಮೊದಲ ಅವಧಿಯನ್ನು ಭಾರತದಲ್ಲಿ ನಡೆಸಲಾಗಿತ್ತು. ಆದರೆ, ಕೋವಿಡ್‌-19 ಸನ್ನಿವೇಶ ಕಠಿಣವಾಗಿದ್ದರಿಂದ ಟೂರ್ನಿಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿತ್ತು. ನಂತರ ಟೂರ್ನಿಯ ಎರಡನೇ ಅವಧಿಯನ್ನು ಯುಎಇಯಲ್ಲಿ ನಡೆಸಲಾಗಿತ್ತು. ಅಲ್ಲದೆ ಭಾರತದ ಆತಿಥ್ಯದಲ್ಲಿ ನಡೆಯಬೇಕಿದ್ದ 2022ರ ಟಿ20 ವಿಶ್ವಕಪ್‌ ಟೂರ್ನಿಯನ್ನು ಕೂಡ ಯುಎಇಯಲ್ಲಿ ಆಯೋಜಿಸಲಾಗಿತ್ತು.

IPL 2025: ಫಾರ್ಮ್‌ ಕಂಡುಕೊಳ್ಳಲು ರಿಷಭ್‌ ಪಂತ್‌ಗೆ ಮಹತ್ವದ ಸಲಹೆ ನೀಡಿದ ನವಜೋತ್‌ ಸಿಧು!

ನಂತರ 2022ರ ಐಪಿಎಲ್‌ ಟೂರ್ನಿಯನ್ನು ಸಂಪೂರ್ಣವಾಗಿ ಭಾರತದ ವಿವಿಧ ಸ್ಥಳಗಳಲ್ಲಿ ಆಡಿಸಲಾಗಿತ್ತು. ಬಿಸಿಸಿಐ ಅಧ್ಯಕ್ಷ ಸೇವಾವಧಿ ಮುಗಿದ ಬಳಿಕ ಸೌರವ್‌ ಗಂಗೂಲಿ ಅವರು 2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚಿಂಗ್‌ ವಿಭಾಗಕ್ಕೆ ಸೇರ್ಪಡೆಯಾಗಿದ್ದರು. ಜೂನ್‌ 20ರಿಂದ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವೆ ಐದು ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ 2025ರ ಐಪಿಎಲ್‌ ಟೂರ್ನಿಯನ್ನು ಬಹುಬೇಗ ಮುಗಿಸಬೇಕಾಗುತ್ತದೆ.