IPL 2025: ಫಾರ್ಮ್ ಕಂಡುಕೊಳ್ಳಲು ರಿಷಭ್ ಪಂತ್‌ಗೆ ಮಹತ್ವದ ಸಲಹೆ ನೀಡಿದ ನವಜೋತ್ ಸಿಧು!
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಲಖನೌ ಸೂಪರ್ ಜಯಂಟ್ಸ್ ನಾಯಕ ರಿಷಭ್ ಪಂತ್‌ಗೆ ಭಾರತ ತಂಡದ ಮಾಜಿ ಆಟಗಾರ ನವಜೋತ್ ಸಿಧು ಮಹತ್ವದ ಸಲಹೆಯನ್ನು ನೀಡಿದ್ದಾರೆ. ಈ ಸೀಸನ್‌ನಲ್ಲಿ ಪಂತ್ ಬ್ಯಾಟಿಂಗ್‌ನಲ್ಲಿ ವಿಫಲರಾಗಲು ಕಾರಣವೇನೆಂದು ವಿವರಿಸಿದ್ದಾರೆ.

ರಿಷಭ್ ಪಂತ್ ವೈಫಲ್ಯಕ್ಕೆ ಕಾರಣ ತಿಳಿಸಿದ ನವಜೋತ್ ಸಿಧು.

ನವದೆಹಲಿ: ಪ್ರಸಕ್ತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಲಖನೌ ಸೂಪರ್ ಜಯಂಟ್ಸ್ ನಾಯಕ ರಿಷಭ್ ಪಂತ್‌ಗೆ (Rishabh Pant) ಭಾರತ ತಂಡದ ಮಾಜಿ ಆಟಗಾರ ನವಜೋತ್ ಸಿಧು (Navjot Sidhu) ಮಹತ್ವದ ಸಲೆಹಯನ್ನು ನೀಡಿದ್ದಾರೆ. ಅಲ್ಲದೆ, ಈ ಸೀಸನ್‌ನಲ್ಲಿ ಪಂತ್ ಬ್ಯಾಟಿಂಗ್ ವೈಫಲ್ಯ ಅನುಭವಿಸಲು ಪ್ರಮುಖ ಕಾರಣವೇನೆಂದು ಕೂಡ ವಿವರಿಸಿದ್ದಾರೆ. ಶಾಟ್ ಸೆಲೆಕ್ಷನ್ ಹಾಗೂ ಮಾನಸಿಕ ಅಂಶಗಳ ಕಾರಣ ಪಂತ್ ಟೂರ್ನಿಯಲ್ಲಿ ಭಾರಿ ಹಿನ್ನಡೆಯನ್ನು ಅನುಭವಿಸಿದ್ದಾರೆಂದು ಸಿಧು ಹೇಳಿದ್ದಾರೆ.
ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರನಾಗಿ ಹದಿನೆಂಟನೇ ಆವೃತ್ತಿಯಲ್ಲಿ ಕಣಕ್ಕೆ ಇಳಿದಿದ್ದ ರಿಷಭ್ ಪಂತ್ ಆಡಿದ 11 ಪಂದ್ಯಗಳಿಂದ ಗಳಿಸಿರುವುದು ಕೇವಲ 128 ರನ್‌ಗಳು ಮಾತ್ರ. ಮತ್ತೊಂದು ಕಡೆ ಟೂರ್ನಿಯ ಮೊದಲ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಎಲ್‌ಎಸ್‌ಜಿ, ಎರಡನೇ ಅವಧಿಯಲ್ಲಿ ಸತತವಾಗಿ ಪಂದ್ಯಗಳನ್ನು ಸೋತಿದೆ. ಆಡಿದ 11 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ 6ರಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಲಖನೌ ತಂಡದ ಪ್ಲೇಆಫ್ಸ್ ಹಾದಿ ಕಠಿಣವಾಗಿದೆ. ಇನ್ನುಳಿದ ಮೂರೂ ಪಂದ್ಯಗಳನ್ನು ಗೆದ್ದರೂ ಪಂತ್ ಬಳಗದ ಪ್ಲೇಆಫ್ಸ್ ಅವಕಾಶ ಕಷ್ಟವಿದೆ. ಏಕೆಂದರೆ ಲಖನೌ ತಂಡದ (-0.469) ರನ್ ರೇಟ್ ಕಡಿಮೆ ಇದೆ.
IPL 2025: ʻಒಂದು ವಾರದ ಬಳಿಕ ಐಪಿಎಲ್ ಪಂದ್ಯಗಳು ಪುನಾರಂಭʼ-ಬಿಸಿಸಿಐ ಸ್ಪಷ್ಟನೆ!
ರಿಷಭ್ ಪಂತ್ ವೈಫಲ್ಯಕ್ಕೆ ಕಾರಣ ತಿಳಿಸಿದ ಸಿಧು
ಜಿಯೊ ಸ್ಟಾರ್‌ನ ಪ್ಯಾನೆಲ್ ಜೊತೆ ಮಾತನಾಡಿದ, ನವಜೋತ್ ಸಿಧು, "ರಿಷಭ್ ಪಂತ್ ಅವರಲ್ಲಿ ಸಮಸ್ಯೆ ಏನೆಂದರೆ, ಅವರ ಶಾಟ್ ಸೆಲೆಕ್ಷನ್. ಪ್ರತಿಯೊಂದು ಬಾರಿಯೂ ನಿಮ್ಮ ಹಾದಿಯಲ್ಲಿ ನೀವು ಶಾಟ್ಸ್ ಆಡಬಾರದು. ತಮ್ಮದೇ ಆದ ಖ್ಯಾತಿಯಿಂದ ಪಂತ್‌ಗೆ ಜಾಸ್ತಿ ಒತ್ತಡ ಉಂಟಾಗುತ್ತಿದೆ ಹಾಗೂ ಅವರು ಮುಕ್ತವಾಗಿ ಬ್ಯಾಟ್ ಮಾಡಲು ಸಾಧ್ಯವಾಗುತ್ತಿಲ್ಲ. ಮೈದಾನದಲ್ಲಿ ಅವರ ಹತಾಶೆ ಎದ್ದು ಕಾಣುತ್ತಿದೆ. ನಾಯಕನಾಗಿ ಅವರು ಒಮ್ಮೊಮ್ಮೆ ತಾಳ್ಮೆ ಕಳೆದುಕೊಂಡಿದ್ದು, ಇದು ಎದುರಾಳಿ ತಂಡಕ್ಕೆ ಲಾಭವಾಗಿದೆ," ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಂಎಸ್ ಧೋನಿ ಅವರೊಂದಿಗೆ ಹೋಲಿಕೆಯನ್ನು ನಾವು ಮಾಡಿದಾಗ, ಒತ್ತಡದ ಸನ್ನಿವೇಶದಲ್ಲಿ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ ಎಂದು ಸಿಧು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IPL 2025: ರಾಜಸ್ಥಾನ್ ರಾಯಲ್ಸ್ ವೈಫಲ್ಯಕ್ಕೆ ನೈಜ ಕಾರಣ ತಿಳಿಸಿದ ಆಡಂ ಗಿಲ್‌ಕ್ರಿಸ್ಟ್!
"ಎಂಎಸ್ ಧೋನಿಯ ಶಾಂತ, ಸಂಯಮ ಹಾಗೂ ಯಾವುದನ್ನೂ ಕೂಡ ಬಿಟ್ಟುಕೊಡುವುದಿಲ್ಲ. ಪಂತ್ ಅವರು ತಮ್ಮ ಮನಸ್ಥಿತಿಯನ್ನು ಬದಲಿಸಬೇಕಾಗಿದೆ, ಅದರಲ್ಲಿಯೂ ವಿಶೇಷವಾಗಿ ಶಾಟ್ ಸೆಲೆಕ್ಷನ್ ವಿಷಯದಲ್ಲಿ. ಅವರು ಮೂಲ ಅಂಶಗಳಿಗೆ ಪುನಃ ಮರಳಬೇಕಾದ ಅಗತ್ಯವಿದೆ," ಎಂದು ಅವರು ತಿಳಿಸಿದ್ದಾರೆ.
ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ
ಮೆಗಾ ಹರಾಜಿನಲ್ಲಿ 27 ಕೋಟಿ ರೂ. ಗಳಿಗೆ ರಿಷಭ್ ಪಂತ್ ಅವರನ್ನು ಖರೀದಿಸಲಾಗಿತ್ತು. ಆದರೆ, ಅವರು ತಮಗೆ ಸಿಕ್ಕ ಬೆಲೆಗೆ ಮೌಲ್ಯವನ್ನು ತಂದುಕೊಡುವಲ್ಲಿ ವಿಫಲರಾಗಿದ್ದಾರೆ. ಅವರು ಲಖನೌ ತಂಡದಲ್ಲಿ ಓಪನಿಂಗ್, 4,6, 7ನೇ ಕ್ರಮಾಂಕಗಳಲ್ಲಿ ಬ್ಯಾಟ್ ಮಾಡಿದರೂ ಯಶಸ್ವಿಯಾಗಲಿಲ್ಲ. ಅವರು ಈ ಟೂರ್ನಿಯಲ್ಲಿ ಒಮ್ಮೆ ಅರ್ಧಶತಕ ಸಿಡಿಸಿದರಾದರೂ ಒಟ್ಟು ಕಲೆ ಹಾಕಿರುವುದು ಕೇವಲ 128 ರನ್‌ಗಳು ಮಾತ್ರ.
IPL 2025: ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಕಡಿಮೆ ಎಂದವರಿಗೆ ಎಬಿಡಿ ತಿರುಗೇಟು!
ಎಲ್‌ಎಸ್‌ಜಿಯ ಪ್ಲೇಆಫ್ಸ್ ಹಾದಿ ಕಠಿಣ
ಇಲ್ಲಿಯತನಕ ಕೇವಲ 5 ಪಂದ್ಯಗಳನ್ನು ಗೆದ್ದಿರುವ ಲಖನೌ ಸೂಪರ್ ಜಯಂಟ್ಸ್ ತಂಡದ ಪ್ಲೇಆಫ್ಸ್ ಹಾದಿ ಕಠಿಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಧು, "ಲಖನೌ ಸೂಪರ್ ಜಯಂಟ್ಸ್ ತಂಡ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೂ, ಕಳಪೆ ಫಾರ್ಮ್‌ನಿಂದಾಗಿ ಅವರ ಅವಕಾಶಗಳು ಬಂದ್ ಆಗಬಹುದು," ಎಂದು ತಿಳಿಸಿದ್ದಾರೆ.