ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಗೆಲುವಿನೊಂದಿಗೆ 2 ಪ್ರಮುಖ ದಾಖಲೆ ಬರೆದ ಗುಜರಾತ್‌ ಟೈಟಾನ್ಸ್‌

DC vs GT: ಡೆಲ್ಲಿ ತಂಡದ ವಿರುದ್ಧ ಬೃಹತ್‌ ಮೊತ್ತವನ್ನು ಬೆನ್ನಟ್ಟಿ ಗೆದ್ದ ಮೊದಲ ತಂಡ ಎಂಬ ದಾಖಲೆಯನ್ನು ಕೂಡ ಗುಜರಾತ್‌ ತನ್ನ ಹೆಸರಿಗೆ ಸೇರಿಸಿಕೊಂಡಿದೆ. ಇದಕ್ಕೂ ಮುನ್ನ ಈ ದಾಖಲೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಹೆಸರಿನಲ್ಲಿತ್ತು.

ಗೆಲುವಿನೊಂದಿಗೆ 2 ಪ್ರಮುಖ ದಾಖಲೆ ಬರೆದ ಗುಜರಾತ್‌ ಟೈಟಾನ್ಸ್‌

Profile Abhilash BC Apr 20, 2025 11:03 AM

ಅಹಮದಾಬಾದ್‌: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಬೃಹತ್‌ ಮೊತ್ತವನ್ನು ಬೆನ್ನಟ್ಟಿ 7 ವಿಕೆಟ್‌ ಅಂತರದ ಗೆಲುವು ಸಾಧಿಸಿದ ಗುಜರಾತ್‌ ಟೈಟಾನ್ಸ್‌ ತಂಡ ಈ ಗೆಲುವಿನೊಂದಿಗೆ ಎರಡು ಪ್ರಮುಖ ದಾಖಲೆ ನಿರ್ಮಿಸಿತು. ಐಪಿಎಲ್‌ನಲ್ಲಿ ಮೊದಲ ಬಾರಿಗೆ ಗುಜರಾತ್‌ ತಂಡ 200+ ಮೊತ್ತವನ್ನು ಬೆನ್ನಟ್ಟಿ ಗೆದ್ದ ಸಾಧನೆಗೈದಿತು. ಗುಜರಾತ್‌ ತಂಡ ಇದಕ್ಕೂ ಮುನ್ನ 2023ರಲ್ಲಿ ಆರ್‌ಸಿಬಿ ವಿರುದ್ಧ 198 ರನ್‌ಗಳನ್ನು ಬೆನ್ನಟ್ಟಿ ಗೆದ್ದದ್ದು ದಾಖಲೆಯಾಗಿತ್ತು.

ಗುಜರಾತ್‌ ತಂಡದ ಅತ್ಯಧಿಕ ಯಶಸ್ವಿ ರನ್ ಚೇಸಿಂಗ್‌

204 ರನ್‌- ಡೆಲ್ಲಿ ವಿರುದ್ಧ (2025)

198 ರನ್‌- ಆರ್‌ಸಿಬಿ ವಿರುದ್ಧ (2023)

197 vs ರಾಜಸ್ಥಾನ್‌ ವಿರುದ್ಧ (2024)

196 vs ಹೈದರಾಬಾದ್‌ ವಿರುದ್ಧ (2022)

190 vs ಪಂಜಾಬ್‌ ವಿರುದ್ಧ (2022)

ಇದನ್ನೂ ಓದಿ IPL 2025 Points Table: ಡಬಲ್‌ ಹೆಡರ್‌ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ

ಡೆಲ್ಲಿ ತಂಡದ ವಿರುದ್ಧ ಬೃಹತ್‌ ಮೊತ್ತವನ್ನು ಬೆನ್ನಟ್ಟಿ ಗೆದ್ದ ಮೊದಲ ತಂಡ ಎಂಬ ದಾಖಲೆಯನ್ನು ಕೂಡ ಗುಜರಾತ್‌ ತನ್ನ ಹೆಸರಿಗೆ ಸೇರಿಸಿಕೊಂಡಿದೆ. ಇದಕ್ಕೂ ಮುನ್ನ ಈ ದಾಖಲೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಹೆಸರಿನಲ್ಲಿತ್ತು. ಚೆನ್ನೈ 2008ರ ಚೊಚ್ಚಲ ಆವೃತ್ತಿಯಲ್ಲಿ ಡೆಲ್ಲಿ ವಿರುದ್ಧ 188 ರನ್‌ ಚೇಸ್‌ ಮಾಡಿ ಗೆದ್ದಿತ್ತು.

ಡೆಲ್ಲಿ ವಿರುದ್ಧ ಅತಿ ಹೆಚ್ಚು ಯಶಸ್ವಿ ರನ್-ಚೇಸ್

204 - ಗುಜರಾತ್‌ ಟೈಟಾನ್ಸ್‌(2025)

188 - ಸಿಎಸ್‌ಕೆ(2008)

188 - ಎಸ್‌ಆರ್‌ಹೆಚ್(2018)

186 - ಸಿಎಸ್‌ಕೆ(2010)

185 - ರಾಜಸ್ಥಾನ್‌(2015)

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್‌ 8 ವಿಕೆಟ್‌ಗೆ 203 ರನ್‌ ಕಲೆಹಾಕಿತು. ಬೃಹತ್‌ ಮೊತ್ತವನ್ನು ಬೆನ್ನಟ್ಟಿದ ಗುಜರಾತ್‌ ತಂಡ ಜಾಸ್‌ ಬಟ್ಲರ್‌ ಅವರ ಅಜೇಯ 97 ರನ್‌ ಸಾಹಸದಿಂದ 19.2 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ 204 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.