#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಫೆ.13ಕ್ಕೆ ಆರ್‌ಸಿಬಿ ನಾಯಕನ ಹೆಸರು ಘೋಷಣೆ; 3 ವರ್ಷಕ್ಕೆ ಇವರೇ ನಾಯಕ!

IPL 2025: ಕೆಲ ದಿನಗಳ ಹಿಂದೆ ಆರ್‌ಸಿಬಿ ಮುಖ್ಯ ಕೋಚ್​​​ ಆ್ಯಂಡಿ ಫ್ಲವರ್ ಕೂಡ ಪಾಟೀದಾರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. 'ಪಾಟೀದಾರ್​​ ಹೊಡಿಬಡಿ ಆಟಗಾರ. ಇವರು ಸ್ಪಿನ್ನರ್​​ಗಳ ವಿರುದ್ಧ ಮುನ್ನುಗ್ಗಿ​ ಬ್ಯಾಟ್​ ಬೀಸುತ್ತಾರೆ. ಜತೆಗೆ ಪಾಟಿದಾರ್​ ಒಳ್ಳೆಯ ಲೀಡರ್​​. ದೇಶೀಯ ಟೂರ್ನಿಯಲ್ಲಿ ಅವರ ನಾಯಕತ್ವ ನೋಡಿದ್ದೇನೆ. ದೂರದೃಷ್ಟಿಯಿಂದ ರಜತ್​ ಪಾಟಿದಾರ್​ ಅವರಲ್ಲಿ ಲೀಡರ್​ಶೀಪ್​ ಕ್ವಾಲಿಟಿ ಬೆಳೆಸೋದು ಮುಖ್ಯ' ಎಂದಿದ್ದರು.

IPL 2025: ಫೆ.13ಕ್ಕೆ ಆರ್‌ಸಿಬಿ ನಾಯಕನ ಹೆಸರು ಘೋಷಣೆ!

Profile Abhilash BC Feb 11, 2025 2:13 PM

ಬೆಂಗಳೂರು: ಬಹುನಿರೀಕ್ಷಿತ 18ನೇ ಆವೃತ್ತಿಯ ಐಪಿಎಲ್‌(IPL 2025)ಗೆ ದಿನಗಣನೆ ಶುರುವಾಗಿದ್ದು, ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್‌ ಚಾಲೆಂಜರ್ ಬೆಂಗಳೂರು(RCB) ತಂಡದ ನಾಯಕ ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಫೆ.13 ರಂದು ಫ್ರಾಂಚೈಸಿ ಸುದ್ದಿಗೋಷ್ಠಿ ನಡೆಸಲಿದ್ದು ಈ ವೇಳೆ ತಂಡದ ನೂತನ ನಾಯಕ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸದ್ಯದ ಮಾಹಿತಿ ಪ್ರಕಾರ ಯುವ ಬ್ಯಾಟರ್‌ ರಜತ್‌ ಪಾಟೀದಾರ್‌(Rajat patidar) ಅವರನ್ನು ಮುಂದಿನ ಮೂರು ವರ್ಷಗಳ ಮಟ್ಟಿಗೆ ತಂಡದ ನಾಯಕನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಆರ್‌ಸಿಬಿ ಮುಖ್ಯ ಕೋಚ್​​​ ಆ್ಯಂಡಿ ಫ್ಲವರ್ ಕೂಡ ಪಾಟೀದಾರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. 'ಪಾಟೀದಾರ್​​ ಹೊಡಿಬಡಿ ಆಟಗಾರ. ಇವರು ಸ್ಪಿನ್ನರ್​​ಗಳ ವಿರುದ್ಧ ಮುನ್ನುಗ್ಗಿ​ ಬ್ಯಾಟ್​ ಬೀಸುತ್ತಾರೆ. ಜತೆಗೆ ಪಾಟಿದಾರ್​ ಒಳ್ಳೆಯ ಲೀಡರ್​​. ದೇಶೀಯ ಟೂರ್ನಿಯಲ್ಲಿ ಅವರ ನಾಯಕತ್ವ ನೋಡಿದ್ದೇನೆ. ದೂರದೃಷ್ಟಿಯಿಂದ ರಜತ್​ ಪಾಟಿದಾರ್​ ಅವರಲ್ಲಿ ಲೀಡರ್​ಶೀಪ್​ ಕ್ವಾಲಿಟಿ ಬೆಳೆಸೋದು ಮುಖ್ಯ' ಎಂದಿದ್ದರು.



ಬ್ಯಾಟಿಂಗ್‌ನಲ್ಲಿಯೂ ಪಾಟೀದಾರ್ ಪ್ರಚಂಡ ಬ್ಯಾಟಿಂಗ್‌ ಫಾರ್ಮ್‌ನಲ್ಲಿದ್ದಾರೆ. ಡೆಲ್ಲಿ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಪಾಟೀದಾರ್​ 29 ಎಸೆತದಲ್ಲಿ ಅಜೇಯ 66*ರನ್​ ಬಾರಿಸಿದ್ದರು. ಈ ವೇಳೆ 4 ಬೌಂಡರಿ 6 ಸಿಕ್ಸರ್​ ಸಿಡಿಸಿದ್ದರು. ಪಾಟಿದಾರ್ 2024ರ ಐಪಿಎಲ್‌ನಲ್ಲಿ ಆರ್​​ಸಿಬಿ ತಂಡದ ಬ್ಯಾಟಿಂಗ್‌ ಬಲವಾಗಿದ್ದರು. ಆರಂಭದ ಕೆಲವು ಪಂದ್ಯಗಳಲ್ಲಿ ರನ್ ಗಳಿಸುವಲ್ಲಿ ವಿಫಲವಾದರೂ ಆ ಬಳಿಕ ಬಳಿಕ ಭರ್ಜರಿ ಕಮ್​ಬ್ಯಾಕ್​ ಮಾಡಿ ಅಬ್ಬರಿಸಿದ್ದರು. ಇದುವರೆಗೂ 27 ಐಪಿಎಲ್ ಪಂದ್ಯಗಳನ್ನು ಆಡಿರುವ ಪಟಿದಾರ್, 37.74 ಸರಾಸರಿ, 158.85 ಸ್ಟ್ರೈಕ್‌ರೇಟ್‌ನಲ್ಲಿ 799 ರನ್ ಗಳಿಸಿದ್ದಾರೆ. 112 ರನ್ ಅವರ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ.

ಇದನ್ನೂ ಓದಿ IPL 2025: ಆರ್‌ಸಿಬಿ ವೇಗಿ ಭುವನೇಶ್ವರ್‌ ಕುಮಾರ್‌ ಮುರಿಯಬಲ್ಲ 3 ಪ್ರಮುಖ ದಾಖಲೆಗಳು!

ಆರ್‌ಸಿಬಿ ತಂಡ

ವಿರಾಟ್‌ ಕೊಹ್ಲಿ,ರಜತ್‌ ಪಾಟೀದಾರ್‌, ಯಶ್‌ ದಯಾಳ್‌,ಜೋಶ್​ ಹ್ಯಾಸಲ್​ವುಡ್,​ ಫಿಲ್​ ಸಾಲ್ಟ್​, ಜಿತೇಶ್​ ಶರ್ಮ, ಲಿಯಾಮ್​ ಲಿವಿಂಗ್​ಸ್ಟೋನ್​, ರಸಿಕ್​ ಸಲಾಂ, ಸುಯಶ್​ ಶರ್ಮ, ಭುವನೇಶ್ವರ್​ ಕುಮಾರ್,ಕೃನಾಲ್​ ಪಾಂಡ್ಯ, ಟಿಮ್​ ಡೇವಿಡ್, ಜೇಕಬ್​ ಬೆಥೆಲ್, ದೇವದತ್​ ಪಡಿಕ್ಕಲ್​, ನುವಾನ್​ ತುಷಾರ, ರೊಮಾರಿಯೊ ಶೆರ್ಡ್​, ಸ್ವಪ್ನಿಲ್​ ಸಿಂಗ್​, ಮನೋಜ್​ ಭಾಂಡಗೆ, ಸ್ವಸ್ತಿಕ್​ ಚಿಕರ, ಮೋಹಿತ್​ ರಾಥೀ, ಅಭಿನಂದನ್​ ಸಿಂಗ್​, ಲುಂಗಿ ಎನ್​ಗಿಡಿ.