IPL 2025: ಐಪಿಎಲ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ದಾಂಡಿಗರು
Fastest Сentury in IPL History: ಐಪಿಎಲ್‌ನಲ್ಲಿ ಈ ಮುನ್ನ ಟೂರ್ನಿ ಆರಂಭಗೊಂಡ ನಂತರ ಪ್ರತಿ ತಂಡ ಆರಂಭಿಕ 7 ಲೀಗ್ ಪಂದ್ಯಗಳನ್ನು ಆಡುವವರೆಗೆ ಮಾತ್ರ ಬದಲಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶವಿತ್ತು. ಅದನ್ನು ಈ ಬಾರಿ 12ನೇ ಲೀಗ್ ಪಂದ್ಯದವರೆಗೂ ವಿಸ್ತರಿಸಲಾಗಿದೆ.


ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಕಾತರದಿಂದ ಕಾದು ಕುಳಿತಿರುವ ಐಪಿಎಲ್ ಟೂರ್ನಿ(IPL 2025) ಆರಂಭಕ್ಕೆ ಇನ್ನು ಕೇವಲ 4 ದಿನಗಳು ಬಾಕಿ ಉಳಿದಿವೆ. ಇದುವರೆಗಿನ 17 ಆವೃತ್ತಿಯ ಐಪಿಎಲ್(Indian Premier League Records)ನಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದೆ. ಈ ಪೈಕಿ ಅತಿ ವೇಗದ ಶತಕ ಬಾರಿಸಿದ ಟಾಪ್ 5 ಆಟಗಾರರು(Fastest Сentury in IPL History) ಯಾರೆಂಬ ಮಾಹಿತಿಯನ್ನು ಕ್ರಿಕೆಟ್ ಅಭಿಮಾನಿಗಳಿಗಾಗಿ ವಿಶ್ವವಾಣಿ ಈ ವರದಿಯಲ್ಲಿ ತೆರೆದಿಟ್ಟಿದೆ.
ಕ್ರಿಸ್ ಗೇಲ್
'ಯುನಿವರ್ಸ್ ಬಾಸ್' ಕ್ರಿಸ್ ಗೇಲ್ ಅವರು ಐಪಿಎಲ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. 2013ರಲ್ಲಿ ಆರ್‌ಸಿಬಿ ತಂಡದ ಪರ ಆಡುತ್ತಿದ್ದ ಗೇಲ್ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ನಡೆಸಿ ಕೇವಲ 30 ಎಸೆತಗಳಿಂದ ಶತಕ ದಾಖಲಿಸಿದ್ದರು.
ಯೂಸುಫ್ ಪಠಾಣ್
ಮೊದಲ ಬಾರಿಗೆ ಐಪಿಎಲ್‌ನಲ್ಲಿ ಅತಿ ಕಡಿಮೆ ಎಸೆತಗಳಿಂದ ಶತಕ ಬಾರಿಸಿದ ದಾಖಲೆ ನಿರ್ಮಿಸಿದ್ದು ಮಾಜಿ ಆಲ್‌ರೌಂಡರ್ ಯೂಸುಫ್ ಪಠಾಣ್. ಆದರೆ ಈ ದಾಖಲೆಯನ್ನು ಬಳಿಕ ಗೇಲ್ ಮುರಿದರು. ಯೂಸುಫ್ ಪಠಾಣ್ 2010 ರ ಆವೃತ್ತಿಯಲ್ಲಿ ರಾಜಸ್ಥಾನ್ ತಂಡದ ಪರ ಆಡುವ ವೇಳೆ ಮುಂಬೈ ಇಂಡಿಯನ್ಸ್ ವಿರುದ್ಧ 37 ಎಸೆತಗಳಿಂದ ಶತಕ ಸಿಡಿಸಿದ್ದರು. ಭಾರತೀಯ ದಾಖಲೆ ಈಗಲೂ ಇವರ ಹೆಸರಿಲ್ಲಿದೆ.
ಡೇವಿಡ್ ಮಿಲ್ಲರ್
ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟರ್ ಡೇವಿಡ್ ಮಿಲ್ಲರ್ ಅವರು ಈ ಯಾದಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 2013ರಲ್ಲಿ ಆರ್‌ಸಿಬಿ ವಿರುದ್ಧ ಅವರು 38 ಎಸೆತಗಳಿಂದ ಶತಕ ಬಾರಿಸಿದ್ದರು. ಮೊಹಾಲಿಯಲ್ಲಿ ನಡೆದ ಪಂದ್ಯ ಇದಾಗಿತ್ತು.
ಇದನ್ನೂ ಓದಿ IPL 2025: ಐಪಿಎಲ್ ಪಂದ್ಯಾವಳಿ ಆರಂಭಕ್ಕೂ ಮುನ್ನ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು
ಟ್ರಾವಿಸ್ ಹೆಡ್
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ತಂಡದ ಆಸೀಸ್ ಆಟಗಾರ ಟ್ರಾವಿಸ್ ಹೆಡ್ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 39 ಎಸೆತಗಳಿಂದ ಶತಕ ಪೂರೈಸಿದ್ದರು. ಈ ಮೂಲಕ ಅತಿ ವೇಗದ ಶತಕ ಬಾರಿಸಿದ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದರು. ಈ ಬಾರಿಯೂ ಹೈದರಾಬಾದ್ ತಂಡದ ಪರ ಆಡುತ್ತಿರುವ ಇವರು ತಮ್ಮ ದಾಖಲೆಯನ್ನು ತಿದ್ದಿ ಬರೆಯುವ ಅವಕಾಶವಿದೆ.
When they take guard, you cannot blink 🙅
— IndianPremierLeague (@IPL) March 14, 2025
If you do, you'll miss the entertainment 😉
Will we see a new entrant to this fiery list of legends in #TATAIPL 2025? 🤔🔥 pic.twitter.com/YXzdozy4la
ವಿಲ್ ಜಾಕ್ಸ್
ಆರ್‌ಸಿಬಿ ತಂಡದ ಮಾಜಿ ಆಟಗಾರ ವಿಲ್ ಜಾಕ್ಸ್ ಐಪಿಎಲ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಅವರು ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 41 ಎಸೆತಗಳಿಂದ ಶತಕ ಬಾರಿಸಿದ್ದರು. ಈ ಬಾರಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲಿದ್ದಾರೆ.