ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಮತ್ತೆ ಕೆಕೆಆರ್‌ ತಂಡ ಸೇರಿದ ಉಮ್ರಾನ್‌ ಮಲಿಕ್‌

ಗಾಯಗೊಂಡು ಸಂಪೂರ್ಣ ಟೂರ್ನಿಯಿಂದ ಹೊರಬಿದ್ದಿದ್ದ ಉಮ್ರಾನ್‌ ಮಲಿಕ್‌ ಸ್ಥಾನಕ್ಕೆ ಕೆಕೆಆರ್‌ ಬದಲಿ ಆಟಗಾರನಾಗಿ ಚೇತನ್‌ ಸಕಾರಿಯ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಉಮ್ರಾನ್‌ ಮಲಿಕ್‌ ಈ ಹಿಂದೆ ಸನ್‌ ರೈಸರ್ಸ್‌ ಹೈದರಾಬಾದ್‌ ಪರ ಹಲವು ಬಾರಿ 150 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಬೌಲಿಂಗ್ ಮಾಡಿ ಗಮನಸೆಳೆದಿದ್ದರು.

ಕೋಲ್ಕತಾ: ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಉಮ್ರಾನ್ ಮಲಿಕ್(Umran Malik) ಮತ್ತೆ ಕೆಕೆಆರ್‌(KKR) ತಂಡವನ್ನು ಕೂಡಿಕೊಂಡಿದ್ದಾರೆ. ಐಪಿಎಲ್ 2025ರ(IPL 2025) ಆರಂಭಕ್ಕೂ ಮುನ್ನ ಗಾಯದಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದ ಮಲಿಕ್‌, ಚೇತರಿಕೆ ಮತ್ತು ಕ್ರಿಕೆಟ್‌ಗೆ ಮರಳುವ ಕಾರ್ಯಕ್ರಮದ ಭಾಗವಾಗಿ ಕೋಲ್ಕತಾ ತಂಡವನ್ನು ಸೇರಿಕೊಂಡಿದ್ದಾರೆ. ಮಲಿಕ್‌ ತಂಡಕ್ಕೆ ಅಧಿಕೃತ ಆಟಗಾರರಾಗಿ ಸೇರದಿದ್ದರೂ, ತಂಡ ಮತ್ತು ಸಿಬ್ಬಂದಿಯೊಂದಿಗೆ ಕೆಲಸ ಮಾಡಿ ತಮ್ಮ ಉತ್ತಮ ಫಾರ್ಮ್‌ಗೆ ಮರಳಲಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ.

ಗಾಯಗೊಂಡು ಸಂಪೂರ್ಣ ಟೂರ್ನಿಯಿಂದ ಹೊರಬಿದ್ದಿದ್ದ ಉಮ್ರಾನ್‌ ಮಲಿಕ್‌ ಸ್ಥಾನಕ್ಕೆ ಕೆಕೆಆರ್‌ ಬದಲಿ ಆಟಗಾರನಾಗಿ ಚೇತನ್‌ ಸಕಾರಿಯ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಉಮ್ರಾನ್‌ ಮಲಿಕ್‌ ಈ ಹಿಂದೆ ಸನ್‌ ರೈಸರ್ಸ್‌ ಹೈದರಾಬಾದ್‌ ಪರ ಹಲವು ಬಾರಿ 150 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಬೌಲಿಂಗ್ ಮಾಡಿ ಗಮನಸೆಳೆದಿದ್ದರು.

ಕೆಕೆಆರ್‌ ತಂಡ ಇಂದು(ಶನಿವಾರ) ಪಂಜಾಬ್‌ ಕಿಂಗ್ಸ್‌ ವಿರುದ್ಧ ತವರಿನ ಈಡನ್‌ ಗಾರ್ಡನ್ಸ್‌ನಲ್ಲಿ ಪಂದ್ಯವನ್ನಾಡಲಿದೆ. ಶುಕ್ರವಾರ ತಂಡದ ಬ್ಯಾಟಿಂಗ್‌ ಅಭ್ಯಾಸದ ವೇಳೆ ಉಮ್ರಾನ್ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ್ದರು. ಒಟ್ಟಾರೆಯಾಗಿ ಉಮ್ರಾನ್‌ ಮಲಿಕ್‌ 8 ಟಿ20ಐ ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಮತ್ತು 10 ಏಕದಿನ ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್‌ನಲ್ಲಿ 26 ಪಂದ್ಯಗಳಲ್ಲಿ 29 ವಿಕೆಟ್‌ಗಳನ್ನು 9.4ರ ಎಕಾನಮಿ ರೇಟ್‌ನೊಂದಿಗೆ ಕಿತ್ತಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಉಮ್ರಾನ್‌ಗೆ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಕೆಕೆಆರ್‌ ಫ್ರಾಂಚೈಸಿ ನೆರವಾಗಿದೆ.

ಪ್ಲೇ ಆಫ್‌ ಪ್ರವೇಶ ಜೀವಂತವಿರಿಸಬೇಕಿದ್ದರೆ ಕೆಕೆಆರ್‌ ಇಂದು ಪಂಜಾಬ್‌ ವಿರುದ್ಧ ಗೆಲ್ಲಲೇ ಬೇಕು. ಏಕೆಂದರೆ ಇಲ್ಲಿಯವರೆಗೆ ಆಡಿರುವ 8 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಜಯಿಸಿದೆ. ಉಳಿದ ಪಂದ್ಯಗಳಲ್ಲಿ ಸೋತಿದೆ. ಮುಂದಿನ ಪಂದ್ಯಗಳ ಪೈಕಿ ಒಂದರಲ್ಲಿ ಸೋತರೂ ಪ್ಲೇ ಆಫ್‌ ಪ್ರವೇಶದ ಬಾಗಿಲು ಮುಚ್ಚುವ ಸಾಧ್ಯತೆ ಇದೆ.

ಇದನ್ನೂ ಓದಿ IPL 2025: ಕೆಕೆಆರ್‌ ಪಂದ್ಯಕ್ಕೂ ಮುನ್ನ ಪಂಜಾಬ್‌ ಕಿಂಗ್ಸ್‌ ತಂಡ ಸೇರಿದ ಉಡುಪಿ ಮೂಲದ ತನುಷ್‌ ಕೋಟ್ಯಾನ್‌

ಕೆಕೆಆರ್‌ಗೆ ಅಗ್ರಕ್ರಮಾಂಕದ ಬ್ಯಾಟರ್‌ಗಳ ಅಸ್ಥಿರತೆ, ಮಧ್ಯಮಕ್ರಮಾಂಕದಲ್ಲಿರುವ ಆ್ಯಂಡ್ರೆ ರಸೆಲ್, ರಿಂಕು ಸಿಂಗ್, ವೆಂಕಟೇಶ್‌ ಅಯ್ಯರ್‌ ಮತ್ತು ರಮಣದೀಪ್ ಸಿಂಗ್ ಅವರ ಫಾರ್ಮ್‌ ಕೊರತೆ ದೊಡ್ಡ ಹಿನ್ನಡೆಯಾಗಿದೆ.