ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಕೆಕೆಆರ್‌ ಪಂದ್ಯಕ್ಕೂ ಮುನ್ನ ಪಂಜಾಬ್‌ ಕಿಂಗ್ಸ್‌ ತಂಡ ಸೇರಿದ ಉಡುಪಿ ಮೂಲದ ತನುಷ್‌ ಕೋಟ್ಯಾನ್‌

Tanush Kotian: ತನುಷ್‌ ಕೋಟ್ಯಾನ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಂಬೈನ ಉದಯೋನ್ಮುಖ ತಾರೆಯಾಗಿದ್ದಾರೆ. ಕಳೆದ ಬಾರಿಯ ರಣಜಿ ಟೂರ್ನಿಯಲ್ಲಿ ಕೋಟ್ಯಾನ್ ಅವರು 10 ಪಂದ್ಯಗಳಲ್ಲಿ 41 ಕ್ಕಿಂತ ಹೆಚ್ಚು ಸರಾಸರಿಯೊಂದಿಗೆ 502 ರನ್ ಗಳಿಸಿದ್ದರು. ಒಟ್ಟಾರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 112, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 22, ಟಿ20ಯಲ್ಲಿ 33 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ.

ಪಂಜಾಬ್‌ ಕಿಂಗ್ಸ್‌ ತಂಡ ಸೇರಿದ ಉಡುಪಿ ಮೂಲದ ತನುಷ್‌ ಕೋಟ್ಯಾನ್‌

Profile Abhilash BC Apr 26, 2025 9:54 AM

ಬೆಂಗಳೂರು: ಪಂಜಾಬ್‌ ಕಿಂಗ್ಸ್‌ ತಂಡ ಉಡುಪಿ ಮೂಲದ ಮುಂಬೈ ಆಫ್‌ ಸ್ಪಿನ್ನರ್‌ ತನುಷ್‌ ಕೋಟ್ಯಾನ್‌(Tanush Kotian) ಅವರನ್ನು ತಂಡಕ್ಕೆ ನೆಟ್‌ ಬೌಲರ್‌ ಆಗಿ ಆಯ್ಕೆ ಮಾಡಿಕೊಂಡಿದೆ. ಇಂದು(ಶನಿವಾರ) ನಡೆಯುವ ಐಪಿಎಲ್‌(IPL 2025) ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್‌(PBKS vs KKR) ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯಕ್ಕೂ ಮುನ್ನ ತನುಷ್‌ ಕೋಟ್ಯಾನ್‌ ಅವರನ್ನು ನೆಟ್‌ ಬೌಲರ್‌ ಆಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಫ್ರಾಂಚೈಸಿ ತಿಳಿಸಿದೆ. ತನುಷ್‌ ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್‌ ತಂಡದ ಪರ ಒಂದು ಪಂದ್ಯವನ್ನಾಡಿದ್ದರು. ಆದರೆ ಈ ಆವೃತ್ತಿಯ ಮೆಗಾ ಹರಾಜಿನಲ್ಲಿ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿ ಮಾಡಿರಲಿಲ್ಲ.

ಶುಕ್ರವಾರ ತರಬೇತಿ ಅವಧಿಯಲ್ಲಿ ಕೋಟ್ಯಾನ್‌ ಅಬರು ಪಂಜಾಬ್‌ ಕಿಂಗ್ಸ್‌ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡುವುದನ್ನು ಗುರುತಿಸಿದ ಪಂಜಾಬ್‌ ತಂಡದ ಸ್ಪಿನ್-ಬೌಲಿಂಗ್ ತರಬೇತುದಾರ ಸುನಿಲ್ ಜೋಶಿ, ಅವರನ್ನು ನೆಟ್‌ ಬೌಲರ್‌ ಆಗಿ ತಂಡಕ್ಕೆ ಸೇರಿಸಿಕೊಂಡರು.

ಕರಾವಳಿ ಮೂಲದ ಕ್ರಿಕೆಟಿಗ

26 ವರ್ಷದ ತನುಷ್‌ ಕೋಟ್ಯಾನ್‌ ಉಡುಪಿ ಜಿಲ್ಲೆಯ ಪಾಂಗಾಳ ಮೂಲದವರು. ದೇಶೀಯ ಕ್ರಿಕೆಟ್‌ ಟೂರ್ನಿಯಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್‌ನಲ್ಲಿ ಅಮೋಘ ಆಲ್​ರೌಂಡರ್​ ಪ್ರದರ್ಶನ ತೋರಿದ್ದರು. ಕಳೆದ ಬಾರಿ ರಣಜಿ ಟ್ರೋಫಿಯಲ್ಲಿ ವಿದರ್ಭ ಎದುರಿನ ಫೈನಲ್​ ಪಂದ್ಯದಲ್ಲಿ ಘಾತಕ ಬೌಲಿಂಗ್​ ದಾಳಿ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಮುಂಬೈ ತಂಡದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ತನುಷ್‌ ಕೋಟ್ಯಾನ್‌ ಪಾಂಗಾಳ ವಿಜಯಾ ಬ್ಯಾಂಕ್‌ ಬಳಿಯ ತುಳ್ಳಿಮಾರ್‌ ಹೌಸ್‌ನ ಕರುಣಾಕರ್‌ ಕೋಟ್ಯಾನ್‌ ಮತ್ತು ಹೆಜಮಾಡಿ ಕೋಡಿ ನಡಿಕುದ್ರು ಮಲ್ಲಿಕಾ ಕೋಟ್ಯಾನ್‌ ದಂಪತಿಯ ಪತ್ರನಾಗಿದ್ದಾರೆ. ಕಳೆದ 4 ವರ್ಷಗಳಿಂದ ಮುಂಬೈ ತಂಡದ ಪರ ಆಡುತ್ತಿದ್ದಾರೆ.

ಇದನ್ನೂ ಓದಿ IPL 2025: 14ರ ಪೋರ ವೈಭವ್‌ ಸೂರ್ಯವಂಶಿ ಭಯಮುಕ್ತ ಬ್ಯಾಟಿಂಗ್‌ಗೆ ಸುರೇಶ್‌ ರೈನಾ ಫಿದಾ!

ಕೋಟ್ಯಾನ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಂಬೈನ ಉದಯೋನ್ಮುಖ ತಾರೆಯಾಗಿದ್ದಾರೆ. ಕಳೆದ ಬಾರಿಯ ರಣಜಿ ಟೂರ್ನಿಯಲ್ಲಿ ಕೋಟ್ಯಾನ್ ಅವರು 10 ಪಂದ್ಯಗಳಲ್ಲಿ 41 ಕ್ಕಿಂತ ಹೆಚ್ಚು ಸರಾಸರಿಯೊಂದಿಗೆ 502 ರನ್ ಗಳಿಸಿದ್ದರು. ಒಟ್ಟಾರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 112, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 22, ಟಿ20ಯಲ್ಲಿ 33 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ.

ತಂದೆಗೂ ಅಪಾರ ಕ್ರಿಕೆಟ್ ಕ್ರೇಜ್​

ತನುಷ್‌ ಕೋಟ್ಯಾನ್‌ ಕ್ರಿಕೆಟ್​ ಕ್ಷೇತ್ರಕ್ಕೆ ಕಾಲಿಡಲು ಅವರ ತಂದೆ ಕರುಣಾಕರ್‌ ಕೋಟ್ಯಾನ್‌ ಕೂಡ ಪ್ರಮುಖ ಕಾರಣ. ಕರುಣಾಕರ್‌ ಅವರಿಗೆ ಬಾಲ್ಯದಿಂದಲೂ ಕ್ರಿಕೆಟ್‌ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಮುಂಬಯಿ ಟಾಟಾ ನ್ಪೋರ್ಟ್ಸ್​ನಲ್ಲಿ ಆಡುವ ಅವಕಾಶವನ್ನೂ ಕೂಡ ಪಡೆದಿದ್ದರು. ಆದರೆ ಹೆಚ್ಚಿನ ಪಂದ್ಯಗಳನ್ನು ಆಡುವ ಅವಕಾಶ ಸಿಗದೇ ಇದ್ದಾಗ ಅವರು ಕೋಚಿಂಗ್​ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ರಣಜಿಯಲ್ಲಿ ಅಂಪೈರ್​ ಆಗಿ ತನ್ನ ಕ್ರಿಕೆಟ್‌ ಆಸಕ್ತಿಯನ್ನು ಮುಂದುವರಿದರು.