ಹೈದರಾಬಾದ್, ಎ.19: ಶನಿವಾರ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್(SRH vs CSK) ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಸ್ಟಾರ್ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ(Abhishek Sharma) ಐಪಿಎಲ್(IPL 2026)ನಲ್ಲಿ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಬೃಹತ್ ದಾಖಲೆಯನ್ನು ಮುರಿದಿದ್ದಾರೆ.
ಪಂದ್ಯದಲ್ಲಿ ಅಭಿಷೇಕ್ 22 ಎಸೆತಗಳಲ್ಲಿ 59 ರನ್ ಗಳಿಸುವ ಮೂಲಕ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಅದ್ಭುತ ಬ್ಯಾಟಿಂಗ್ ಇನಿಂಗ್ಸ್ ವೇಳೆ ನಾಲ್ಕು ಸಿಕ್ಸರ್‌ಗಳು ಮತ್ತು ಆರು ಬೌಂಡರಿಗಳನ್ನು ಬಾರಿಸಿದರು. ಅರ್ಧಶತಕದೊಂದಿಗೆ ಅಭಿಷೇಕ್ ಐಪಿಎಲ್‌ನಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿದರು. ಈ ಮೈಲಿಗಲ್ಲನ್ನು 1194 ಎಸೆತಗಳಲ್ಲಿ ತಲುಪುವ ಮೂಲಕ ವೀರೇಂದ್ರ ಸೆಹ್ವಾಗ್ ಅವರ ಅತ್ಯಂತ ವೇಗದ ಭಾರತೀಯ ಎಂಬ ದಾಖಲೆಯನ್ನು ಮುರಿದರು. ಈ ಮೈಲಿಗಲ್ಲನ್ನು ತಲುಪಲು ಸೆಹ್ವಾಗ್‌ಗೆ 1211 ಎಸೆತಗಳು ಬೇಕಾಗಿದ್ದವು.
ಅತಿ ಕಡಿಮೆ ಎಸೆತಗಳಲ್ಲಿ 2000 ಐಪಿಎಲ್ ರನ್ ಗಳಿಸಿದವರು
1120 - ಆಂಡ್ರೆ ರಸೆಲ್
1193 - ಅಭಿಷೇಕ್ ಶರ್ಮಾ
1198 - ನಿಕೋಲಸ್ ಪೂರನ್
1211 - ವೀರೇಂದ್ರ ಸೆಹ್ವಾಗ್
1251 - ಕ್ರಿಸ್ ಗೇಲ್
ಪಂದ್ಯ ಗೆದ್ದ ಹೈದರಾಬಾದ್
ಸನ್‌ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 10 ರನ್‌ಗಳ ರೋಚಕ ಜಯ ಸಾಧಿಸಿತು. ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಭಿಷೇಕ್ (59) ಮತ್ತು ಕ್ಲಾಸೆನ್ (59) ಅವರ ಬ್ಯಾಟಿಂಗ್ ಬಲದಿಂದ ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 194 ರನ್ ಗಳಿಸಿತು.
IPL 2026: ಚೆನ್ನೈ ಸೂಪರ್ ಕಿಂಗ್ಸ್ ಎದುರು ಕೊನೆಯ ಓವರ್ ಥ್ರಿಲ್ಲರ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್!
ಗುರಿ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಇಶಾನ್ (29ಕ್ಕೆ 3) ಮತ್ತು ನಿತೀಶ್ ಕುಮಾರ್ ರೆಡ್ಡಿ (31ಕ್ಕೆ 2) ಕಡಿವಾಣ ಹಾಕಿದರು. ಅಂತಿಮವಾಗಿ ಚೆನ್ನೈ ತಂಡ 8 ವಿಕೆಟ್‌ಗೆ 184 ರನ್ ಗಳಿಸಿ ಹೋರಾಟ ಮುಗಿಸಿತು. ಚೆನ್ನೈ ತಂಡದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (7) ನಿರಾಸೆ ಮೂಡಿಸಿದರು. ಅವರು ಎರಡನೇ ಓವರ್‌ನಲ್ಲೇ ಪೆವಿಲಿಯನ್ ಸೇರಿಕೊಂಡರು. ನಾಯಕ ಋತುರಾಜ್ ಗಾಯಕವಾಡ್ (19) ಮತ್ತು ಆಯುಷ್ ಮ್ಹಾತ್ರೆ (30) ರನ್ ಗಳಿಸಿದರು.
ರಾಜಸ್ಥಾನ ರಾಯಲ್ಸ್ ವಿರುದ್ಧದ ಮಿಂಚಿದ್ದ ಮಧ್ಯಮ ವೇಗಿ ಪ್ರಫುಲ್ ಹಿಂಗೆ (60ಕ್ಕೆ 1) ಈ ಪಂದ್ಯದಲ್ಲಿ ದುಬಾರಿಯಾದರು. ಆದರೆ, ಕೊನೆಯ ಓವರ್‌ನಲ್ಲಿ ಚೆನ್ನೈ ತಂಡ ಗೆಲುವಿಗೆ 18 ರನ್ ಬೇಕಿದ್ದಾಗ ಉತ್ತಮವಾಗಿ ಬೌಲಿಂಗ್ ಸಂಘಟಿಸಿ, ಕೇವಲ 7 ರನ್ ಬಿಟ್ಟುಕೊಟ್ಟರು.