ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಕೊನೆಯ ಓವರ್‌ ಥ್ರಿಲ್ಲರ್‌ ಗೆದ್ದ ಸನ್‌ರೈಸರ್ಸ್‌ ಹೈದರಾಬಾದ್‌!

CSK vs SRH Match Highlights: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಅಧಿಕಾರಯುತ ಆಟವನ್ನು ಪ್ರದರ್ಶಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 10 ರನ್‌ಗಳಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು.

ಸಿಎಸ್‌ಕೆ ಎದುರು ಕೊನೆಯ ಓವರ್‌ ಥ್ರಿಲ್ಲರ್‌ ಗೆದ್ದ ಎಸ್‌ಆರ್‌ಎಚ್‌!

ಸಿಎಸ್‌ಕೆ ಎದುರು ಎಸ್‌ಆರ್‌ಎಚ್‌ಗೆ ಜಯ. -

Profile
Ramesh Kote Apr 18, 2026 11:42 PM

ಹೈದರಾಬಾದ್‌: ಅಭಿಷೇಕ್‌ ಶರ್ಮಾ (Abhishek Sharma) ಸ್ಪೋಟಕ ಅರ್ಧಶತಕ ಹಾಗೂ ಇಶಾನ್‌ ಮಾಲಿಂಗ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 27ನೇ ಪಂದ್ಯದಲ್ಲಿ (CSK vs SRH) ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು 10 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯಲ್ಲಿ ಮೂರನೇ ಗೆಲುವು ಪಡೆದು, ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಪ್ರವೇಶ ಮಾಡಿತು. ಇನ್ನು ಕಳೆದ ಎರಡು ಪಂದ್ಯಗಳಲ್ಲಿ ಗೆಲುವಿನ ಲಯಕ್ಕೆ ಮರಳಿದ್ದ ಋತುರಾಜ್‌ ಗಾಯಕ್ವಾಡ್‌ ಅವರ ನಾಯಕತ್ವದ ಸಿಎಸ್‌ಕೆ ಇದೀಗ ನಾಲ್ಕನೇ ಸೋಲು ಅನುಭವಿಸಿತು.

ಇಲ್ಲಿನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಎಸ್‌ಆರ್‌ಎಚ್‌ ನೀಡಿದ್ದ 195 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸಿಎಸ್‌ಕೆ ತಂಡ, ಸಂಜು ಸ್ಯಾಮ್ಸನ್‌ ಅವರ ವಿಕೆಟ್‌ ಅನ್ನು ಬಹುಬೇಗ ಕಳೆದುಕೊಂಡಿದ್ದರೂ ಆಯುಷ್‌ ಮ್ಹಾತ್ರೆ (13 ಎಸೆತಗಳಲ್ಲಿ 30 ರನ್‌) ಅವರ ಸ್ಪೋಟಕ ಬ್ಯಾಟಿಂಗ್‌ ಮೂಲಕ ಭರ್ಜರಿ ಆರಂಭವನ್ನು ಪಡೆದಿತ್ತು. ಆ ಮೂಲಕ ಪವರ್‌ಪ್ಲೇನಲ್ಲಿ ಸಿಎಎಸ್‌ಕೆ 76 ರನ್‌ ಕಲೆ ಹಾಕಿತ್ತು. ನಂತರ ಬಂದ ಮ್ಯಾಥ್ಯೂ ಶಾರ್ಟ್‌ (34) ಹಾಗೂ ಸರ್ಫರಾಝ್‌ ಖಾನ್‌ (25) ಅವರು ತಂಡಕ್ಕೆ ಭರವಸೆ ಮೂಡಿಸಿದ್ದರೂ ಈ ಇಬ್ಬರನ್ನೂ ಇಶಾನ್‌ ಮಾಲಿಂಗ್‌ ಔಟ್‌ ಮಾಡಿದರು.

IPL 2026: 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಟ್ರಾವಿಸ್‌ ಹೆಡ್‌ ದಾಖಲೆ ಮುರಿದ ಅಭಿಷೇಕ್‌ ಶರ್ಮಾ!

ಶಿವಂ ದುಬೆ (21 ರನ್‌) ಹಾಗೂ ಜೇಮಿ ಓವರ್ಟನ್‌ (16) ಅವರು ಕೂಡ ಕೊನೆಯವರೆಗೂ ನಿಲ್ಲಲಿಲ್ಲ. ಅಂತಿಮವಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 184 ರನ್‌ಗಳಿಗೆ ಸೀಮಿತವಾಯಿತು. ಅಂತಿಮವಾಗಿ ಸಿಎಸ್‌ಕೆ ಕೇವಲ 10 ರನ್‌ಗಳಿಂದ ಸೋಲು ಅನುಭವಿಸಿತು. ಎಸ್‌ಆರ್‌ಎಚ್‌ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಇಶಾನ್‌ ಮಾಲಿಂಗ 3 ವಿಕೆಟ್‌ ಕಿತ್ತರೆ, ನಿತೀಶ್‌ ಕುಮಾರ್‌ ರೆಡ್ಡಿ ಎರಡು ವಿಕೆಟ್‌ ಪಡೆದರು. ಆ ಮೂಲಕ ಎಸ್‌ಆರ್‌ಎಚ್‌ ಗೆಲುವಿಗೆ ನೆರವು ನೀಡಿದರು.



194 ರನ್‌ಗಳನ್ನು ಕಲೆ ಹಾಕಿದ ಎಸ್‌ಆರ್‌ಎಚ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಸ್ಪೋಟಕ ಆರಂಭ ಪಡೆದಿತ್ತು. ನಿರೀಕ್ಷೆಯಂತೆ ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಡ್‌ ಸ್ಪೋಟಕ ಬ್ಯಾಟಿಂಗ್‌ ನಡೆಸಿ ಪವರ್‌ಪ್ಲೇನಲ್ಲಿ 75 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಎಸ್‌ಆರ್‌ಎಚ್‌ ಈ ಪಂದ್ಯದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಬಹುದೆಂದು ಭಾವಿಸಲಾಗಿತ್ತು. ಆದರೆ, ಸಿಎಸ್‌ಕೆ ಬೌಲರ್‌ಗಳು ಮಧ್ಯಮ ಹಾಗೂ ಡೆತ್‌ ಓವರ್‌ಗಳಲ್ಲಿ ಕಮ್‌ಬ್ಯಾಕ್‌ ಮಾಡಿದರು. ಅಭಿಷೇಕ್‌ ಶರ್ಮಾ ಹಾಗೂ ಹೆನ್ರಿಕ್‌ ಕ್ಲಾಸೆನ್‌ ಅರ್ಧಶತಕಗಳನ್ನು ಗಳಿಸಿದರೂ ಎಸ್‌ಆರ್‌ಎಚ್‌ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 194 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ 200ಕ್ಕೂ ಅಧಿಕ ರನ್‌ ಗಳಿಸುವಲ್ಲಿ ವಿಫಲವಾಯಿತು.



ಅಭಿಷೇಕ್‌ ಶರ್ಮಾ ವೇಗದ ಅರ್ಧಶತಕ

ಎಂದಿಂತೆ ಇನಿಂಗ್ಸ್‌ ಆರಂಭಿಸಿದ ಅಭಿಷೇಕ್‌ ಶರ್ಮಾ ಸ್ಪೋಟಕ ಬ್ಯಾಟ್‌ ಮಾಡಿದರು. ಅವರು ಆಡಿದ ಕೇವಲ 15 ಎಸೆತಗಳಲ್ಲಿಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಹೈದರಾಬಾದ್‌ ಪರ ವೇಗದ ಐಪಿಎಲ್‌ ಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಟ್ರಾವಿಸ್‌ ಹೆಡ್‌ ದಾಖಲೆಯನ್ನು ಮುರಿದರು. ಅವರು ತಮ್ಮ ಇನಿಂಗ್ಸ್‌ನಲ್ಲಿ ಆಡಿದ 22 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 59 ರನ್‌ಗಳನ್ನು ಚಚ್ಚಿದರು. ಆ ಮೂಲಕ ತಮ್ಮ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಮತ್ತೊಬ್ಬ ಆರಂಭಿಕ ಟ್ರಾವಿಸ್‌ ಇದಕ್ಕೂ ಮುನ್ನ 23 ರನ್‌ ಗಳಿಸಿ ಔಟ್‌ ಆಗಿದ್ದರು.



ಹೆನ್ರಿಕ್‌ ಕ್ಲಾಸೆನ್‌ ಫಿಫ್ಟಿ

ಅಭಿಷೇಕ್‌ ವಿಕೆಟ್‌ ಒಪ್ಪಿಸಿದ ಬಳಿಕ ನಾಯಕ ಇಶಾನ್‌ ಕಿಶನ್‌, ಅನಿಕೇತ್‌ ವರ್ಮಾ, ನಿತೀಶ್‌ ಕುಮಾರ್‌ ರೆಡ್ಡಿ ಬೇಗ ಔಟ್‌ ಆದರು. ಆದರೆ, ಒಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್‌ ಮಾಡಿದ್ದ ಹೆನ್ರಿಕ್‌ ಕ್ಲಾಸೆನ್‌ 39 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 59 ರನ್‌ಗಳನ್ನು ಗಳಿಸಿದರು. ಇವರು 18ನೇ ಓವರ್‌ನಲ್ಲಿಯೇ ಔಟ್‌ ಆದರು. ನಂತರ ಕೊನೆಯಲ್ಲಿ ಎಸ್‌ಆರ್‌ಎಚ್‌ ತಂಡಕ್ಕೆ ಹೆಚ್ಚಿನ ರನ್‌ಗಳು ಬರಲಿಲ್ಲ.



ಸಿಎಸ್‌ಕೆ ಪರ ಅನ್ಷುಲ್‌ ಕಾಂಬೋಜ್‌ ಹಾಗೂ ಜೇಮಿ ಓವರ್ಟನ್‌ ತಲಾ ಮೂರು ವಿಕೆಟ್‌ ಪಡೆದರೆ, ಮುಖೇಶ ಚೌಧರಿ ಎರಡು ವಿಕೆಟ್‌ ಪಡೆದರು.