ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026 Auction: ಐಪಿಎಲ್ 2026ರ ಮಿನಿ ಹರಾಜು ದಿನಾಂಕ, ಸ್ಥಳ, ಸಮಯ ಬಹಿರಂಗ

ಹಿಂದಿನ ಹರಾಜುಗಳು ಭಾರತೀಯ ಕಾಲಮಾನ ಸಂಜೆ 4 ರಿಂದ ರಾತ್ರಿ 8-9 ರವರೆಗೆ ಪ್ರಾರಂಭವಾಗಿವೆ. ಆದರೆ ಬಾರಿ ಬೆಳಗಿನ ಜಾವದಿಂದಲೇ ಹರಾಜು ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಫ್ರಾಂಚೈಸಿಗಳು ಎಚ್ಚರಿಕೆಯಿಂದ ಸ್ಮಾರ್ಟ್ ಬಿಡ್ಡಿಂಗ್ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಅನುಕೂಲಕರವಾಗಲಿದೆ.

ಮುಂಬಯಿ: ಐಪಿಎಲ್ 2026 ರ ಹರಾಜಿನ(IPL 2026 Auction) ಘೋಷಣೆಗಾಗಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಡಿಸೆಂಬರ್ 13-15, 2025 ರ ನಡುವೆ ಹರಾಜು ನಡೆಯಲಿದೆ ಎಂದು ವರದಿಗಳು ಹೇಳಿದೆ. ನಿಖರವಾದ ದಿನಾಂಕಗಳನ್ನು ಬಿಸಿಸಿಐ(BCCI) ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಆದರೆ ಫ್ರಾಂಚೈಸಿಗಳ ಅಧಿಕಾರಿಗಳು ಈ ವಿವರಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಮಿನಿ ಹರಾಜು ಪ್ರಕ್ರಿಯೆ ಅನೇಕ ತಂಡಗಳ ಸಂಯೋಜನೆಯನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ತಂಡಗಳು ನವೆಂಬರ್ 15 ರ ಗಡುವಿನೊಳಗೆ ತಮ್ಮ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಬೇಕಾಗಿದೆ. ಮೂಲಗಳ ಪ್ರಕಾರ ಡಿಸೆಂಬರ್ ಮಧ್ಯಭಾಗದಲ್ಲಿ ಹರಾಜಿನ ದಿನಾಂಕ ನಿಗದಿಯಾಗಿದೆ ಎಂದು ವರದಿಯಾಗಿದೆ. ಡಿಸೆಂಬರ್ 13-15ರ ದಿನಾಂಕಗಳ ಬಗ್ಗೆ ಪ್ರಸ್ತುತ ಚರ್ಚೆ ನಡೆಯುತ್ತಿದೆ. ಕೆಲವು ಮೂಲಗಳು ನವೆಂಬರ್‌ ಅಂತ್ಯದ ವೇಳೆ ದಿನಾಂಕ ಘೋಷಿಸಲಾಗುವುದು ಎಂದು ಹೇಳಿದೆ.

ಹಿಂದಿನ ಹರಾಜುಗಳು ಭಾರತೀಯ ಕಾಲಮಾನ ಸಂಜೆ 4 ರಿಂದ ರಾತ್ರಿ 8-9 ರವರೆಗೆ ಪ್ರಾರಂಭವಾಗಿವೆ. ಆದರೆ ಬಾರಿ ಬೆಳಗಿನ ಜಾವದಿಂದಲೇ ಹರಾಜು ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಫ್ರಾಂಚೈಸಿಗಳು ಎಚ್ಚರಿಕೆಯಿಂದ ಸ್ಮಾರ್ಟ್ ಬಿಡ್ಡಿಂಗ್ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಅನುಕೂಲಕರವಾಗಲಿದೆ.

ಇದನ್ನೂ ಓದಿ IPL 2026: ಐಪಿಎಲ್ 2026 ಹರಾಜಿಗೂ ಮುನ್ನ ಧೋನಿಯನ್ನು ಬಿಡುಗಡೆ ಮಾಡಲು ಮುಂದಾದ ಸಿಎಸ್‌ಕೆ

ಮುಂಬೈನಲ್ಲಿ ಹರಾಜು?

ಈ ವರ್ಷದ ಹರಾಜಿನ ಸ್ಥಳ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಕೆಲವು ವರದಿಗಳು ಮುಂಬೈನಲ್ಲಿ ಹರಾಜನ್ನು ಆಯೋಜಿಸಬಹುದು ಎಂದು ಹೇಳಿದೆ. ಹಿಂದಿನ ಹರಾಜುಗಳು ಭಾರತದ ಹೊರಗಿನ ಅಂತರರಾಷ್ಟ್ರೀಯ ಸ್ಥಳಗಳಲ್ಲಿಯೂ ನಡೆದಿತ್ತು. ಈ ಮಿನಿ-ಹರಾಜು ಅನುಕೂಲಕ್ಕಾಗಿ ಭಾರತದೊಳಗೆ ಉಳಿಯಬಹುದು.

ಸ್ಥಳದ ಆಯ್ಕೆಯು ಬಿಸಿಸಿಐನ ಅಂತಿಮ ನಿರ್ಧಾರವನ್ನು ಮಾತ್ರ ಅವಲಂಬಿಸಿರುತ್ತದೆ. ಮುಂಬೈನಲ್ಲಿ ಇಂತಹ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲು ಉತ್ತಮ ಸೌಲಭ್ಯಗಳಿವೆ. ಉತ್ತಮ ತಂತ್ರಜ್ಞಾನ ಬೆಂಬಲ ಲಭ್ಯವಿರುವ ಆರಾಮದಾಯಕ ಸ್ಥಳವನ್ನು ತಂಡಗಳು ಬಯಸುತ್ತವೆ.

ಐಪಿಎಲ್ 2026 ಹರಾಜು ಹಲವಾರು ತಂಡಗಳ ಪಟ್ಟಿಯನ್ನು ನಾಟಕೀಯವಾಗಿ ಬದಲಾವಣೆ ತರಲಿದೆ. ಪ್ರತಿಯೊಂದು ಫ್ರಾಂಚೈಸಿ ತನ್ನ ಭವಿಷ್ಯದ ತಂಡದ ಸಂಯೋಜನೆಯ ಬಗ್ಗೆ ಪ್ರಮುಖ ನಿರ್ಧಾರಗಳನ್ನು ಎದುರಿಸಬೇಕಾಗುತ್ತದೆ. ಈ ಹರಾಜು ಮುಂದಿನ ಪ್ರಶಸ್ತಿಗಾಗಿ ಯಾವ ತಂಡಗಳು ಸ್ಪರ್ಧಿಸುತ್ತವೆ ಎಂಬುದನ್ನು ನಿರ್ಧರಿಸಬಹುದು.