ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026 Auction: ಡಿಸೆಂಬರ್ 15ರಂದು ಐಪಿಎಲ್ ಮಿನಿ ಹರಾಜು ಸಾಧ್ಯತೆ

ಫ್ರಾಂಚೈಸಿಗಳು ಹರಾಜಿಗೆ ಮುಂಚಿತವಾಗಿ ಬಿಡುಗಡೆ ಮಾಡಲು ಯೋಜಿಸಿರುವ ಆಟಗಾರರ ಹೆಸರುಗಳನ್ನು ನವೆಂಬರ್ 15ರ ಒಳಗೆ ಸಲ್ಲಿಸಬೇಕಾಗುತ್ತದೆ ಎನ್ನಲಾಗಿದೆ. ಕಳೆದ ಋತುವಿನಲ್ಲಿ ಕೊನೆಯ ಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಹೊರತುಪಡಿಸಿ, ಉಳಿದ ಫ್ರಾಂಚೈಸಿಗಳು ದೊಡ್ಡ ಪ್ರಮಾಣದ ಬದಲಾವಣೆಗೆ ಮುಂದಾಗದು ಎನ್ನಲಾಗಿದೆ.

ಆಟಗಾರರ ರಿಟೇನ್​ ಪಟ್ಟಿ ಅಂತಿಮಗೊಳಿಸಲು ನ.15 ಅಂತಿಮ ಗಡುವು

-

Abhilash BC Abhilash BC Oct 12, 2025 9:52 PM

ಮುಂಬಯಿ: 2026ರ ಐಪಿಎಲ್‌ಗಾಗಿ ಮಿನಿ ಹರಾಜು(IPL 2026 Auction) ಪ್ರಕ್ರಿಯೆಯು ಡಿಸೆಂಬರ್ ಎರಡನೇ ಅಥವಾ ಮೂರನೇ ವಾರದಲ್ಲಿ ನಡೆಯುವ ಸಾಧ್ಯತೆಯಿದೆ. ಆಟಗಾರರ ಪಟ್ಟಿಯನ್ನು ನವೆಂಬರ್‌ವರೆಗೆ ತಂಡಗಳು ಬಿಡುಗಡೆ ಮಾಡಲು ಅವಕಾಶವಿದೆ, ಆದರೆ ಬಿಸಿಸಿಐ(BCCI) ಇನ್ನೂ ಅಧಿಕೃತ ದಿನಾಂಕವನ್ನು ಪ್ರಕಟಿಸಿಲ್ಲ. ಆದ್ಯಾಗೂ ಡಿಸೆಂಬರ್ 13-15 ಸಂಭವನೀಯ ದಿನಾಂಕವಾಗಿದೆ.

ಕಳೆದ ಎರಡು ಆವೃತ್ತಿಗಳು ದುಬೈನಲ್ಲಿ (2023) ಮತ್ತು ನಂತರ ಸೌದಿ ಅರೇಬಿಯಾದ ಜೆಡ್ಡಾದಲ್ಲಿ (2024) ನಡೆದಂತೆ, ಈ ಬಾರಿ ಹರಾಜನ್ನು ವಿದೇಶದಲ್ಲಿ ನಡೆಸುವ ಯಾವುದೇ ಸೂಚನೆಯಿಲ್ಲ. ಬಿಸಿಸಿಐ ಭಾರತದಲ್ಲಿಯೇ ಮಿನಿ-ಹರಾಜನ್ನು ನಡೆಸಲು ನಿರ್ಧರಿಸಿದೆ ಎನ್ನಲಾಗಿದೆ.

ಫ್ರಾಂಚೈಸಿಗಳು ಹರಾಜಿಗೆ ಮುಂಚಿತವಾಗಿ ಬಿಡುಗಡೆ ಮಾಡಲು ಯೋಜಿಸಿರುವ ಆಟಗಾರರ ಹೆಸರುಗಳನ್ನು ನವೆಂಬರ್ 15ರ ಒಳಗೆ ಸಲ್ಲಿಸಬೇಕಾಗುತ್ತದೆ ಎನ್ನಲಾಗಿದೆ. ಕಳೆದ ಋತುವಿನಲ್ಲಿ ಕೊನೆಯ ಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಹೊರತುಪಡಿಸಿ, ಉಳಿದ ಫ್ರಾಂಚೈಸಿಗಳು ದೊಡ್ಡ ಪ್ರಮಾಣದ ಬದಲಾವಣೆಗೆ ಮುಂದಾಗದು ಎನ್ನಲಾಗಿದೆ.

ಬಿಡುಗಡೆ ಪಟ್ಟಿಯಲ್ಲಿರುವ ಆಟಗಾರರಲ್ಲಿ ದೀಪಕ್ ಹೂಡಾ, ವಿಜಯ್ ಶಂಕರ್, ರಾಹುಲ್ ತ್ರಿಪಾಠಿ, ಸ್ಯಾಮ್ ಕರನ್, ಡೆವೊನ್ ಕಾನ್ವೇ, ವೆಂಕಟೇಶ್‌ ಅಯ್ಯರ್‌ ದೊಡ್ಡ ಹೆಸರುಗಳಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಕೂಡ ಸೇರಿದ್ದಾರೆ ಎಂದು ವರದಿಯಾಗಿದೆ. ಆರ್ ಅಶ್ವಿನ್ ಐಪಿಎಲ್‌ನಿಂದ ನಿವೃತ್ತರಾದ ನಂತರ ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಈಗಾಗಲೇ 9.75 ಕೋಟಿ ರೂಪಾಯಿಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ.

ಇದನ್ನೂ ಓದಿ IPL 2026 Auction: ಚೆನ್ನೈ ಸೂಪರ್‌ ಕಿಂಗ್ಸ್‌ ರಿಲೀಸ್‌ ಮಾಡಲಿರುವ ಐವರು ಆಟಗಾರರು!

ರಾಜಸ್ಥಾನ್‌ ರಾಯಲ್ಸ್ ಶ್ರೀಲಂಕಾದ ಇಬ್ಬರು ಸ್ಪಿನ್ನರ್‌ಗಳಾದ ವನಿಂದು ಹಸರಂಗ ಮತ್ತು ಮಹೀಶ್ ತೀಕ್ಷಣ ಅವರನ್ನು ತಂಡದಿಂದ ಬಿಡುಗಡೆ ಮಾಡುಲು ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಕುಮಾರ್ ಸಂಗಕ್ಕಾರ ಮುಖ್ಯ ಕೋಚ್ ಆಗಿ ಮರಳಲು ಸಜ್ಜಾಗಿರುವುದರಿಂದ, ಆ ಚಿಂತನೆ ಬದಲಾದರೂ ಅಚ್ಚರಿಯಿಲ್ಲ.