ಅಹಮದಾಬಾದ್, ಜೂ.1: ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡ ಐಪಿಎಲ್(IPL 2026 Final) ಟೂರ್ನಿಯಲ್ಲಿ ಸತತ ಎರಡು ಕಪ್ ಗೆದ್ದ ಸಾಧನೆ ಬೆನ್ನಲ್ಲೇ, ಸಾಂಪ್ರದಾಯಿಕ ಬದ್ಧ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರ್‌ಸಿಬಿ ಸಾಧನೆಯನ್ನು ಕೊಂಡಾಡಿ ಅಭಿನಂದನೆ ಸಲ್ಲಿಸಿದೆ. ತನ್ನ ಅಧಿಕೃತ ಟ್ವಿಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಎಸ್‌ಕೆ, "ಸತತ ಗೆಲುವು ಯಾವಾಗಲೂ ವಿಶೇಷ ಅನುಭವ ನೀಡತ್ತದೆ. ಅಭಿನಂದನೆಗಳು @RCBTweets ಮತ್ತು ಕ್ಲಬ್‌ಗೆ ಸ್ವಾಗತ" ಎಂದು ವಿಶೇಷ ಸಂದೇಶದೊಂದಿಗೆ(CSK congratulated RCB ) ಚಾಂಪಿಯನ್‌ಗಳನ್ನು ಅಭಿನಂದಿಸಿತು.
ಸಿಎಸ್‌ಕೆ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ತಕ್ಷಣ ವೈರಲ್ ಆಯಿತು. ಏಕೆಂದರೆ ಸಿಎಸ್‌ಕೆ ಆರ್‌ಸಿಬಿಯನ್ನು ಟೂರ್ನಮೆಂಟ್‌ನಲ್ಲಿ ಮೊದಲ ಬಾರಿಗೆ ಅತ್ಯಂತ ವಿಶೇಷವಾಗಿ ಸ್ವಾಗತಿಸಿತು. ಐಪಿಎಲ್‌ನ ಹೈವೋಲ್ಟೇಜ್ ಪಂದ್ಯ ಎಂದರೆ ಅದು ಆರ್‌ಸಿಬಿ ಮತ್ತು ಸಿಎಸ್‌ಕೆ. ಕೇವಲ ಆಟಗಾರರು ಮಾತ್ರವಲ್ಲದೆ ಅಭಿಮಾನಿಗಳಿಗೂ ಇದೊಂದು ಪ್ರತಿಷ್ಠೆಯ ಪಂದ್ಯವಾಗಿರುತ್ತದೆ. ಹೀಗೀರುವಾಗ ಆರ್‌ಸಿಬಿಗೆ ಸಿಎಸ್‌ಕೆ ಅಭಿನಂದಿಸಿದ್ದು ಅಚ್ಚರಿ ಮೂಡಿಸಿದೆ.
ಹೊಟ್ಟೆ ಉರಿದುಕೊಳ್ಳೋರಿಗೆ ಮೈದಾನದಲ್ಲೇ ಉತ್ತರ ಕೊಟ್ಟ ಆರ್‌ಸಿಬಿ!
ಸಿಎಸ್‌ಕೆ ತಂಡವು ಎಂಎಸ್ ಧೋನಿ ನೇತೃತ್ವದಲ್ಲಿ 2010 ಮತ್ತು 2011 ರಲ್ಲಿ ಸತತ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ಈ ಸಾಧನೆ ಮಾಡಿತ್ತು. ಇದೀಗ ಆರ್‌ಸಿಬಿಯ ರಜತ್ ಪಾಟೀದಾರ್ ಕೂಡ ಇದೇ ಸಾಧನೆ ಮಾಡಿ ಧೋನಿ ಜತೆ ಎಲೈಟ್ ಪಟ್ಟಿ ಸೇರಿದ್ದಾರೆ.
ಸಿಎಸ್‌ಕೆ ವಿರುದ್ಧ ಕೊಹ್ಲಿ ಒಟ್ಟು 1174 ರನ್ ಕಲೆಹಾಕಿದ್ದು, ಯಾವುದೇ ತಂಡದ ವಿರುದ್ಧ ಆಟಗಾರನೊಬ್ಬನ ಗರಿಷ್ಠ ರನ್. ಸಿಎಸ್‌ಕೆ ವಿರುದ್ಧ 36 ಪಂದ್ಯಗಳನ್ನಾಡಿದ್ದು, 37.87ರ ಸರಾಸರಿ, 128.3ರ ಸ್ಟ್ರೈಕ್‌ರೇಟ್‌ನಲ್ಲಿ 1174 ರನ್ ಸಿಡಿಸಿದ್ದಾರೆ. ಸಿಎಸ್‌ಕೆ ವಿರುದ್ಧ ಅವರ ಗರಿಷ್ಠ ಸ್ಕೋರ್ 90. ತಂಡವೊಂದರ ವಿರುದ್ಧ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ ರೋಹಿತ್ 2ನೇ ಸ್ಥಾನದಲ್ಲಿದ್ದಾರೆ. ಅವರು ಕೋಲ್ಕತಾ ವಿರುದ್ಧ 36 ಪಂದ್ಯಗಳಲ್ಲಿ 1161 ರನ್ ಕಲೆಹಾಕಿದ್ದಾರೆ.
ಟಾಟಾ ಸಫಾರಿ ಗೆದ್ದ ಸೂರ್ಯವಂಶಿ; ಕಾರು ಚಲಾಯಿಸಲು ಇನ್ನೂ ಮೂರು ವರ್ಷ ಕಾಯಬೇಕು
ಆರ್‌ಸಿಬಿ ತಂಡವು ಸತತ ಎರಡನೇ ವರ್ಷ ಐಪಿಎಲ್ ಚಾಂಪಿಯನ್ ಆಗಿ ಕೋಟ್ಯಾಂತರ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಕಳೆದ ವರ್ಷ ಆರ್‌ಸಿಬಿ ಟ್ರೋಫಿ ಗೆದ್ದಾಗ ಅದನ್ನು ಭಾವನಾತ್ಮಕವಾಗಿ ಕಾಣಲಾಗಿತ್ತು. ಆದರೆ ಈ ಸಲ ಆರ್‌ಸಿಬಿ ಗೆಲುವಿನ ಹಿಂದಿನ ಸೂತ್ರಗಳೇನು ಎನ್ನುವುದನ್ನು ಅವಲೋಕಿಸಿದಾಗ, ಹಲವು ಅಚ್ಚರಿಯ ವಿಚಾರಗಳು ತೆರೆದುಕೊಳ್ಳುತ್ತವೆ.
ಆರ್‌ಸಿಬಿ ಈ ಬಾರಿ ಟೂರ್ನಿಯುದ್ದಕ್ಕೂ ರಕ್ಷಣಾತ್ಮಕ ಆಟವಾಡದೆ, ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ನೀಡಿತು. ಹಲವು ಪಂದ್ಯಗಳಲ್ಲಿ ಒತ್ತಡಕ್ಕೆ ಒಳಗಾದರೂ, ತನ್ನ ಆಕ್ರಮಣಕಾರಿ ಆಟವನ್ನು ಬಿಡಲಿಲ್ಲ. ಮಾತ್ರವಲ್ಲದೆ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಸಮತೋಲನ ಕಾಯ್ದುಕೊಂಡಿತು.