ಅಹಮದಾಬಾದ್, ಮೇ 22: ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ 89 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಗುಜರಾತ್ ಟೈಟಾನ್ಸ್ (ಜಿಟಿ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿತು. ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಕೆಲವು ಮಹತ್ವದ ಮೈಲುಗಲ್ಲು ನಿರ್ಮಿಸಿದರು.
ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಲ್ಪಟ್ಟ ಗುಜರಾತ್ ತಂಡ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 229 ರನ್ ಗಳಿಸಿತು. ಸಾಯಿ ಸುದರ್ಶನ್ ಮತ್ತೊಮ್ಮೆ 53 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ ಅದ್ಭುತ 84 ರನ್ ಗಳಿಸುವ ಮೂಲಕ ತಂಡದ ಅಗ್ರಸ್ಥಾನದಲ್ಲಿ ಮಿಂಚಿದರು.
ನಾಯಕ ಶುಭ್‌ಮನ್ ಗಿಲ್ ಕೇವಲ 37 ಎಸೆತಗಳಲ್ಲಿ 64 ರನ್ ಗಳಿಸಿ ಸ್ಫೋಟಕ ಆರಂಭ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್ 27 ಎಸೆತಗಳಲ್ಲಿ ಅಜೇಯ 57 ರನ್ ಗಳಿಸಿ ಇನ್ನಿಂಗ್ಸ್‌ಗೆ ಬಲವಾದ ಫಿನಿಶ್ ನೀಡಿದರು. ಗುರಿ ಬೆನ್ನಟ್ಟಿದ ಚೆನ್ನೈ ತಂಡವು ಟೈಟನ್ಸ್‌ನ ವೇಗಿಗಳಾದ ಮೊಹಮ್ಮದ್ ಸಿರಾಜ್ (26ಕ್ಕೆ 3), ಕಗಿಸೊ ರಬಾಡ (32ಕ್ಕೆ 3) ಮತ್ತು ಸ್ಪಿನ್ನರ್ ರಶೀದ್ ಖಾನ್ (18ಕ್ಕೆ 3) ಅವರ ಪರಿಣಾಮಕಾರಿ ದಾಳಿಗೆ ತತ್ತರಿಸಿತು. 13.4 ಓವರ್‌ಗಳಲ್ಲಿ 140 ರನ್‌ಗೆ ಸರ್ವಪತನ ಕಂಡಿತು.
IPL 2026: ಸೋಲಿನ ಮಧ್ಯೆ 24 ಲಕ್ಷ ದಂಡಕ್ಕೆ ಗುರಿಯಾದ ಋತುರಾಜ್ ಗಾಯಕ್ವಾಡ್
ಪಂದ್ಯದಲ್ಲಿ ನಿಮಾರ್ಣವಾದ ದಾಖಲೆ ಪಟ್ಟಿ
ಜೋಸ್ ಬಟ್ಲರ್: ಗುಜರಾತ್ ಪರ 1000+ ರನ್ ಗಳಿಸಿದ ಸಾಧನೆ ಮಾಡಿದರು.
ಜೇಸನ್ ಹೋಲ್ಡರ್: ತಮ್ಮ 350ನೇ ಟಿ20 ಪಂದ್ಯವನ್ನು ಆಡಿದರು.
ಶುಭಮನ್ ಗಿಲ್: ಟಿ20ಗಳಲ್ಲಿ 6000+ ರನ್ ಗಳಿಸಿದರು.
ಶುಭ್‌ಮನ್ ಗಿಲ್: ಟಿ20ಗಳಲ್ಲಿ 200 ಸಿಕ್ಸರ್‌ಗಳನ್ನು ಪೂರೈಸಿದರು.
ಅನ್ಶುಲ್ ಕಾಂಬೋಜ್: ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು ಬಿಟ್ಟು ಬೌಲರ್ ಎಂಬ ಅನಗತ್ಯ ದಾಖಲೆ ಬರೆದರು. 34 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟರು (ಐಪಿಎಲ್ 2026)
ಸಾಯಿ ಸುದರ್ಶನ್: ಐಪಿಎಲ್‌ನಲ್ಲಿ ಸತತ 50+ ರನ್ ಗಳಿಸಿದ ಸಾಧನೆ ಮಾಡಿದರು.
ಐಪಿಎಲ್‌ನಲ್ಲಿ ಸಿಎಸ್‌ಕೆಗೆ ಅತಿ ದೊಡ್ಡ ಸೋಲು (ರನ್‌ಗಳಿಂದ): ಜಿಟಿ ವಿರುದ್ಧ 89 ರನ್.
ಐಪಿಎಲ್‌ನಲ್ಲಿ ಗುಜರಾತ್ ಅತಿ ದೊಡ್ಡ ಗೆಲುವು (ರನ್‌ಗಳಿಂದ) ದಾಖಲಿಸಿತು. ಸಿಎಸ್‌ಕೆ ವಿರುದ್ಧ 89 ರನ್ ಅಂತರ.