ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಸೋಲಿನ ಮಧ್ಯೆ 24 ಲಕ್ಷ ದಂಡಕ್ಕೆ ಗುರಿಯಾದ ಋತುರಾಜ್‌ ಗಾಯಕ್ವಾಡ್‌

Ruturaj Gaikwad: ಈ ಋತುವಿನಲ್ಲಿ ಸಿಎಸ್‌ಕೆ ಓವರ್-ರೇಟ್ ನಿಯಮಗಳನ್ನು ಉಲ್ಲಂಘಿಸಿದ್ದು ಇದು ಎರಡನೇ ಬಾರಿ. ಪರಿಣಾಮವಾಗಿ, ಗಾಯಕ್ವಾಡ್‌ಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು, ಆದರೆ ಇಂಪ್ಯಾಕ್ಟ್ ಪ್ಲೇಯರ್ ಕಾರ್ತಿಕ್ ಶರ್ಮಾ ಸೇರಿದಂತೆ ತಂಡದ ಉಳಿದವರಿಗೆ 6 ಲಕ್ಷ ರೂಪಾಯಿ ಅಥವಾ ಅವರ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಲಾಯಿತು.

ನಾಯಕ ಸೇರಿ ಸಿಎಸ್‌ಕೆ ತಂಡದ ಆಟಗಾರರಿಗೆ ದಂಡ ವಿಧಿಸಿದ ಬಿಸಿಸಿಐ

Ruturaj Gaikwad -

Abhilash BC
Abhilash BC May 22, 2026 9:17 AM

ಅಹಮದಾಬಾದ್‌, ಮೇ 22: ಹಾಲಿ ಆವೃತ್ತಿಯಲ್ಲಿ ಎರಡನೇ ಬಾರಿಗೆ ನಿಧಾನಗತಿಯ ಓವರ್ ಮಾಡಿದ ಕಾರಣ ಚೆನ್ನೈ ಸೂಪರ್‌ಕಿಂಗ್ಸ್‌(GT vs CSK) ತಂಡದ ನಾಯಕ ಋತುರಾಜ್‌ ಗಾಯಕ್ವಾಡ್‌(Ruturaj Gaikwad) ಅವರಿಗೆ ಬಿಸಿಸಿಐ 24 ಲಕ್ಷ ದಂಡ ವಿಧಿಸಿದೆ. ಗುರುವಾರ ನಡೆದಿದ್ದ ಗುಜರಾತ್‌ ಟೈಟಾನ್ಸ್‌ ವಿರುದ್ಧ ಪಂದ್ಯದಲ್ಲಿ ಸಿಎಸ್‌ಕೆ ತಂಡ ನಿಗದಿತ ಅವಧಿಯಲ್ಲಿ ಓವರುಗಳನ್ನು ಪೂರೈಸಲು ವಿಫಲವಾಗಿತ್ತು.

ಈ ಋತುವಿನಲ್ಲಿ ಸಿಎಸ್‌ಕೆ ಓವರ್-ರೇಟ್ ನಿಯಮಗಳನ್ನು ಉಲ್ಲಂಘಿಸಿದ್ದು ಇದು ಎರಡನೇ ಬಾರಿ. ಪರಿಣಾಮವಾಗಿ, ಗಾಯಕ್ವಾಡ್‌ಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು, ಆದರೆ ಇಂಪ್ಯಾಕ್ಟ್ ಪ್ಲೇಯರ್ ಕಾರ್ತಿಕ್ ಶರ್ಮಾ ಸೇರಿದಂತೆ ತಂಡದ ಉಳಿದವರಿಗೆ 6 ಲಕ್ಷ ರೂಪಾಯಿ ಅಥವಾ ಅವರ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಲಾಯಿತು.

ಗೆಲ್ಲಲೇಬೇಕಾದ ಪಂದ್ಯದಲ್ಲಿ, ಸಿಎಸ್‌ಕೆ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಗುಜರಾತ್‌ 4ಕ್ಕೆ 229 ರನ್‌ ಗಳಿಸಿತು. ಆರಂಭಿಕರಾದ ಸಾಯಿ ಸುದರ್ಶನ್ (84) ಮತ್ತು ಶುಭ್ಮನ್ ಗಿಲ್ (64) ಭರ್ಜರಿ ಅರ್ಧಶತಕ ಬಾರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 125 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಒಟ್ಟುಗೂಡಿಸಿತು.

GT vs CSK: ಐಪಿಎಲ್‌ ಇತಿಹಾಸದಲ್ಲೇ ಅನಗತ್ಯ ದಾಖಲೆ ಬರೆದ ಅನ್ಶುಲ್ ಕಾಂಬೋಜ್‌

ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಕೂಡ ಬಿರುಸಿನ ಬ್ಯಾಟಿಂಗ್‌ ನಡೆಸಿ 27 ಎಸೆತಗಳಲ್ಲಿ ಅಜೇಯ 57 ರನ್ ಗಳಿಸಿ ತಂಡವನ್ನು ಬೃಹತ್ ಮೊತ್ತಕ್ಕೆ ಮುನ್ನಡೆಸಿದರು. ಸಿಎಸ್‌ಕೆ ಆರು ಬೌಲರ್‌ಗಳನ್ನು ಬಳಸಿತು. ಆದರೆ ಗುರ್ಜಪ್ನೀತ್ ಸಿಂಗ್ ಹೊರತುಪಡಿಸಿ ಉಳಿದವರೆಲ್ಲ ದುಬಾರಿಯಾದರು. ಅನ್ಶುಲ್ ಕಾಂಬೋಜ್ ತಮ್ಮ ನಾಲ್ಕು ಓವರ್‌ಗಳಲ್ಲಿ 56 ರನ್‌ಗಳನ್ನು ಬಿಟ್ಟುಕೊಟ್ಟರು.

ಗುರಿ ಬೆನ್ನಟ್ಟಿದ ಚೆನ್ನೈ ತಂಡವು ಟೈಟನ್ಸ್‌ನ ವೇಗಿಗಳಾದ ಮೊಹಮ್ಮದ್‌ ಸಿರಾಜ್‌ (26ಕ್ಕೆ 3), ಕಗಿಸೊ ರಬಾಡ (32ಕ್ಕೆ 3) ಮತ್ತು ಸ್ಪಿನ್ನರ್‌ ರಶೀದ್‌ ಖಾನ್‌ (18ಕ್ಕೆ 3) ಅವರ ಪರಿಣಾಮಕಾರಿ ದಾಳಿಗೆ ತತ್ತರಿಸಿತು. 13.4 ಓವರ್‌ಗಳಲ್ಲಿ 140 ರನ್‌ಗೆ ಸರ್ವಪತನ ಕಂಡಿತು.

ಸಂಕ್ಷಿಪ್ತ ಸ್ಕೋರ್‌

ಗುಜರಾತ್ ಟೈಟನ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 229 (ಸಾಯಿ ಸುದರ್ಶನ್ 84, ಶುಭಮನ್ ಗಿಲ್ 64, ಜೋಸ್ ಬಟ್ಲರ್ ಔಟಾಗದೇ 57, ಮುಕೇಶ್ ಚೌಧರಿ 36ಕ್ಕೆ1, ಸ್ಪೆನ್ಸರ್ ಜಾನ್ಸನ್ 47ಕ್ಕೆ1, ಅನ್ಷುಲ್ ಕಂಬೋಜ್ 56ಕ್ಕೆ1). ಚೆನ್ನೈ ಸೂಪರ್ ಕಿಂಗ್ಸ್: 13.4 ಓವರ್‌ಗಳಲ್ಲಿ 140 (ಮ್ಯಾರ್ಥ್ಯೂ ಶಾರ್ಟ್‌ 24, ಶಿವಂ ದುಬೆ 47; ಮೊಹಮ್ಮದ್‌ ಸಿರಾಜ್‌ 26ಕ್ಕೆ 3, ಕಗಿಸೊ ರಬಾಡ 32ಕ್ಕೆ 3, ರಶೀದ್‌ ಖಾನ್‌ 18ಕ್ಕೆ 3). ಪಂದ್ಯ ಶ್ರೇಷ್ಠ: ಮೊಹಮ್ಮದ್‌ ಸಿರಾಜ್‌.