ಲಖನೌ, ಮೇ 7: ಒಂದು ವಾರ ವಿಶ್ರಾಂತಿ ಬಳಿಕ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(LSG vs RCB) ತಂಡವು ಕಣಕ್ಕಿಳಿಯಲು ಸಜ್ಜಾಗಿದೆ. ಗುರುವಾರ ನಡೆಯುವ ಪಂದ್ಯದಲ್ಲಿ ಅಂಕಪಟ್ಟಿಯ ಕೊನೆಯ ಸ್ಥಾನಿ ಲಖನೌ ಸೂಪರ್ ಜೈಂಟ್ಸ್ ಸವಾಲು ಎದುರಿಸಲಿದೆ. ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರಿಗೂ ಹಲವು ದಾಖಲೆ ನಿರ್ಮಿಸುವ ಅವಕಾಶವಿದೆ. ಈ ದಾಖಲೆಗಳ ಪಟ್ಟಿ ಹೀಗಿದೆ.
ಒಂಬತ್ತು ಪಂದ್ಯಗಳಿಂದ ಕೇವಲ ಎರಡು ಗೆಲುವುಗಳನ್ನು ಗಳಿಸಿರುವ ಎಲ್‌ಎಸ್‌ಜಿ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಋತುವಿನ ಆರಂಭದಲ್ಲಿ ಆರ್‌ಸಿಬಿ ವಿರುದ್ಧ ಆಡಿದ್ದ ತಂಡ ಐದು ವಿಕೆಟ್‌ಗಳ ಸೋಲು ಅನುಭವಿಸಿತ್ತು. ಪ್ಲೇಆಫ್ ಆಸೆಗೆ ಕಡಿವಾಣ ಬಿದ್ದಿರುವುದರಿಂದ, ಅವರು ಬಲವಾದ ಪ್ರದರ್ಶನ ನೀಡಲು ಮತ್ತು ಋತುವಿನ ಮೂರನೇ ಗೆಲುವು ದಾಖಲಿಸಲು ಉತ್ಸುಕರಾಗಿದ್ದಾರೆ.
ಏತನ್ಮಧ್ಯೆ, ಆರ್‌ಸಿಬಿ ಒಂಬತ್ತು ಪಂದ್ಯಗಳಲ್ಲಿ ಆರು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ನಾಲ್ಕು ವಿಕೆಟ್ ಸೋಲು ಕಂಡಿತ್ತು. ಮತ್ತೆ ಪುಟಿದೇಳುವ ದೃಢನಿಶ್ಚಯದಿಂದ, ಆರ್‌ಸಿಬಿ ತನ್ನ ಏಳನೇ ಗೆಲುವು ಸಾಧಿಸುವ ಮತ್ತು ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ.
ಲಖನೌ ತಂಡದ ಆಟಗಾರರ ಮುಂದಿರುವ ದಾಖಲೆಗಳು
ಮಿಚೆಲ್ ಮಾರ್ಷ್: ಟಿ20ಯಲ್ಲಿ 500 ಬೌಂಡರಿಗಳನ್ನು ತಲುಪಲು 2 ಬೌಂಡರಿಗಳು ಬೇಕಾಗಿದೆ.
ಐಡೆನ್ ಮಾರ್ಕ್ರಾಮ್: ಟಿ20ಯಲ್ಲಿ 6000 ರನ್‌ಗಳನ್ನು ತಲುಪಲು 18 ರನ್‌ಗಳು ಬೇಕಾಗಿದೆ.
ನಿಕೋಲಸ್ ಪೂರನ್: ಟಿ20ಯಲ್ಲಿ 700 ಬೌಂಡರಿಗಳನ್ನು ತಲುಪಲು 3 ಬೌಂಡರಿಗಳು ಬೇಕಾಗಿದೆ.
ನಿಕೋಲಸ್ ಪೂರನ್: ತಮ್ಮ 100 ನೇ ಐಪಿಎಲ್ ಪಂದ್ಯವನ್ನು ಆಡಲಿದ್ದಾರೆ.
ನಿಕೋಲಸ್ ಪೂರನ್: ಐಪಿಎಲ್‌ನಲ್ಲಿ 2500 ರನ್‌ಗಳನ್ನು ತಲುಪಲು 62 ರನ್‌ಗಳು ಬೇಕಾಗಿದೆ.
ಹಿಮ್ಮತ್ ಸಿಂಗ್: ಟಿ20ಯಲ್ಲಿ 50 ಸಿಕ್ಸರ್‌ಗಳನ್ನು ತಲುಪಲು 4 ಸಿಕ್ಸರ್‌ಗಳು ಬೇಕಾಗಿದೆ.
ಕಳಪೆ ಫೀಲ್ಡಿಂಗ್ ಕಂಡು ಲೈವ್ ಸಂದರ್ಶನದಲ್ಲೇ ಮೈಕ್ ಎಸೆಯಲು ಮುಂದಾಗ ಪಂಜಾಬ್ ಕೋಚ್ ರಿಕಿ ಪಾಂಟಿಂಗ್
ಆರ್‌ಸಿಬಿ ತಂಡದ ಆಟಗಾರರು ನಿರ್ಮಿಸಬಹುದಾದ ದಾಖಲೆಗಳು
ವಿರಾಟ್ ಕೊಹ್ಲಿ: ಟಿ20ಗಳಲ್ಲಿ 14000 ರನ್ ಗಳಿಸಲು 78 ರನ್ ಗಳಿಸಬೇಕಾಗಿದೆ.
ಜಾಕೋಬ್ ಬೆಥೆಲ್: ಟಿ20ಗಳಲ್ಲಿ 150 ಬೌಂಡರಿಗಳನ್ನು ತಲುಪಲು 1 ಬೌಂಡರಿ ಅಗತ್ಯವಿದೆ.
ಜಾಕೋಬ್ ಬೆಥೆಲ್: ಟಿ20ಗಳಲ್ಲಿ 100 ಸಿಕ್ಸರ್‌ಗಳನ್ನು ತಲುಪಲು 1 ಸಿಕ್ಸರ್ ಅಗತ್ಯವಿದೆ.
ರಜತ್ ಪಾಟಿದಾರ್: ಐಪಿಎಲ್‌ನಲ್ಲಿ 100 ಬೌಂಡರಿಗಳನ್ನು ತಲುಪಲು 10 ಬೌಂಡರಿಗಳು ಅಗತ್ಯವಿದೆ.
ರಜತ್ ಪಾಟಿದಾರ್: ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳನ್ನು ತಲುಪಲು 8 ಸಿಕ್ಸರ್‌ಗಳು ಅಗತ್ಯವಿದೆ.
ಜಿತೇಶ್ ಶರ್ಮಾ: ಟಿ20ಗಳಲ್ಲಿ 300 ಬೌಂಡರಿಗಳನ್ನು ತಲುಪಲು 6 ಬೌಂಡರಿಗಳು ಅಗತ್ಯವಿದೆ.
ರೊಮಾರಿಯೊ ಶೆಫರ್ಡ್: ಟಿ20ಗಳಲ್ಲಿ 200 ಸಿಕ್ಸರ್‌ಗಳನ್ನು ತಲುಪಲು 6 ಸಿಕ್ಸರ್‌ಗಳು ಅಗತ್ಯವಿದೆ
ಭುವನೇಶ್ವರ ಕುಮಾರ್: ತಮ್ಮ 200 ನೇ ಐಪಿಎಲ್ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ.