ಮುಂಬಯಿ, ಮೇ 23: ಮೇ 24ರ ಭಾನುವಾರದಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026)ನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI vs RR) ವಿರುದ್ಧ ಸೆಣಸಾಡಲು ರಾಜಸ್ಥಾನ್ ರಾಯಲ್ಸ್ (Rajasthan Royals) ಸಜ್ಜಾಗಿ ನಿಂತಿದೆ. ಈ ಪಂದ್ಯ ರಾಜಸ್ಥಾನ್ ರಾಯಲ್ಸ್‌ನ ಭವಿಷ್ಯ ನಿರ್ಧರಿಸಲಿದೆ. ಗೆದ್ದರೆ ನಾಲ್ಕನೇ ತಂಡವಾಗಿ ಪ್ಲೇ-ಆಫ್ ಸ್ಥಾನಕ್ಕೇರಲಿದೆ. ಎಲಿಮಿನೇಟರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಎದುರಿಸಲಿದ್ದಾರೆ. ಆಗ ಕೆಕೆಆರ್ ಮತ್ತು ಪಂಜಾಬ್ ತಂಡಗಳು ತಮ್ಮ ಕೊನೆಯ ಪಂದ್ಯವನ್ನು ಗೆದ್ದರೂ ಯಾವುದೇ ಪ್ರಯೋಜನಾಗುವುದಿಲ್ಲ.
ಮುಂಬೈ ತಂಡಕ್ಕೆ ಇದು ಲೆಕ್ಕ ಭರ್ತಿಯ ಪಂದ್ಯವಾದರೂ ತವರಿನ ಅಭಿಮಾನಿಗಳ ಮುಂದೆ ಗೆಲುವಿನೊಂದಿಗೆ ಟೂರ್ನಿ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಪ್ರತಿಷ್ಠೆಯ ಪಂದ್ಯವಾಗಿದೆ. ಐದು ಬಾರಿಯ ಚಾಂಪಿಯನ್‌ಗಳು ಈ ಋತುವಿನಲ್ಲಿ 13 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.
ರಾಜಸ್ಥಾನ್‌ಗೆ ಗೆಲ್ಲಲೇ ಬೇಕು
ಈ ಋತುವಿನ ಮೊದಲ ಮುಖಾಮುಖಿಯಲ್ಲಿ ಮುಂಬೈ ವಿರುದ್ಧ ರಾಜಸ್ಥಾನ್ ಭರ್ಜರಿ ಗೆಲುವು ಸಾಧಿಸಿತ್ತು. ಇದೇ ಲಯವನ್ನು ಎರಡನೇ ಮುಖಾಮುಖಿಯಲ್ಲಿಯೂ ಮುಂದುವರಿಸುವ ಇರಾದೆಯಲ್ಲಿದೆ. ಗಾಯದ ಕಾರಣದಿಂದ ಕಳೆದ ಪಂದ್ಯದಿಂದ ಹೊರಗುಳಿದಿದ್ದ ರಿಯಾನ್ ಪರಾಗ್ ಪಂದ್ಯದಲ್ಲಿ ಆಡುವ ಮೂಲಕ ಮತ್ತೆ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ. ಸದ್ಯ ರಾಜಸ್ಥಾನ್ ಬ್ಯಾಟಿಂಗ್ ಬಲಿಷ್ಠವಾಗಿದೆ. ಅದರಲ್ಲೂ ಆರಂಭಿಕರಾದ ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್ ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್ ನಡೆಸಬಲ್ಲರು. ಇವರನ್ನು ಕಟ್ಟಿಹಾಕುವ ಸವಾಲು ಮುಂಬೈ ಬೌಲರ್‌ಗಳ ಮುಂದಿದೆ.
ಮುಖಾಮುಖಿ
ಆಡಿದ ಪಂದ್ಯಗಳು- 32
ರಾಜಸ್ಥಾನ್ ಗೆಲುವು- 15 ಜಯ
ಮುಂಬೈ ಗೆಲುವು- 16 ಜಯ
ಟೈ-1
ಪಿಚ್ ರಿಪೋರ್ಟ್
ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾದ ಪಿಚ್ ಎಂದು ಹೆಸರುವಾಸಿಯಾಗಿರುವ ವಾಂಖೆಡೆ ಕ್ರೀಡಾಂಗಣವು, ಮೊದಲು ಬೌಲಿಂಗ್ ಮಾಡುತ್ತಿರಲಿ ಅಥವಾ ಬ್ಯಾಟಿಂಗ್ ಮಾಡುತ್ತಿರಲಿ, ಎರಡೂ ತಂಡಗಳಿಗೂ ರನ್‌ಗಳನ್ನು ನೀಡುತ್ತದೆ. ಆದಾಗ್ಯೂ, ಎರಡನೇ ಬಾರಿಗೆ ಬ್ಯಾಟಿಂಗ್ ಮಾಡುವ ತಂಡವು 200 ಕ್ಕಿಂತ ಹೆಚ್ಚಿನ ಮೊತ್ತವನ್ನು ಬೆನ್ನಟ್ಟುವ ನಿರೀಕ್ಷೆಯಿದೆ.
ಕ್ರಿಕೆಟ್ ಲೋಕದ ಟಾಪ್ 5 'ನೋ ಹ್ಯಾಂಡ್ ಶೇಕ್' ವಿವಾದಗಳು
ಬೌಂಡರಿಗಳು ದೊಡ್ಡದಾಗಿಲ್ಲದಿದ್ದಾಗಲೂ ಇದು ಸಹಾಯ ಮಾಡುತ್ತದೆ, ಚೆಂಡು ಬಹಳ ದೂರ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಮತ್ತೊಂದೆಡೆ, ಬೌಲರ್‌ಗಳು ಹೊಸ ಚೆಂಡಿನೊಂದಿಗೆ ಇನ್ನಿಂಗ್ಸ್‌ನ ಆರಂಭಿಕ ಭಾಗದಲ್ಲಿ ಸ್ವಲ್ಪ ಸಹಾಯ ಪಡೆಯಬಹುದು.
ಸಂಭಾವ್ಯ ತಂಡಗಳು
ಮುಂಬೈ ಇಂಡಿಯನ್ಸ್ (MI): ರಿಯಾನ್ ರಿಕೆಲ್ಟನ್ (ವಿ.ಕೀ.), ರೋಹಿತ್ ಶರ್ಮಾ, ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ವಿಲ್ ಜಾಕ್ಸ್, ಕಾರ್ಬಿನ್ ಬಾಷ್, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ, ರಘು ಶರ್ಮಾ.
ಇಂಪ್ಯಾಕ್ಟ್ ಪ್ಲೇಯರ್: ಎಎಮ್ ಗಜನ್ಫರ್
ರಾಜಸ್ಥಾನ್ ರಾಯಲ್ಸ್ (RR): ಯಶಸ್ವಿ ಜೈಸ್ವಾಲ್ (ನಾಯಕ), ಲುವಾನ್-ಡ್ರೆ ಪ್ರಿಟೋರಿಯಸ್, ಧ್ರುವ್ ಜುರೆಲ್ (ಡಬ್ಲ್ಯುಕೆ), ಡೊನೊವನ್ ಫೆರೇರಾ, ಶುಭಂ ದುಬೆ, ರವೀಂದ್ರ ಜಡೇಜಾ, ದಸುನ್ ಶನಕ, ಜೋಫ್ರಾ ಆರ್ಚರ್, ಸಂದೀಪ್ ಶರ್ಮಾ, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪುಂಜಾ.
ಇಂಪ್ಯಾಕ್ಟ್ ಆಟಗಾರ: ವೈಭವ್ ಸೂರ್ಯವಂಶಿ