ಬೆಂಗಳೂರು, ಮೇ 14: ಹಾಲಿ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನಲ್ಲಿ ಇನ್ನೂ 13 ಪಂದ್ಯಗಳು ಬಾಕಿ ಉಳಿದಿವೆ. ಲಖನೌ ಮತ್ತು ಮುಂಬೈ ತಂಡಗಳು ಈಗಾಗಲೇ ಪ್ಲೇಆಫ್ ರೇಸ್‌ನಿಂದ ನಿರ್ಗಮಿಸಿದೆ. ಗುಜರಾತ್ ಮತ್ತು ಆರ್‌ಸಿಬಿ ತಂಡಗಳು ಬಹುತೇಕ ಅರ್ಹತೆ ಪಡೆದಿವೆ. ಸನ್‌ರೈಸರ್ಸ್ ಮತ್ತು ಪಂಜಾಬ್ ಕಿಂಗ್ಸ್ ಕೂಡ ಪ್ಲೇ-ಆಫ್(IPL 2026 Playoff Qualification Scenarios) ತಲುಪಲು ಉತ್ತಮ ಸ್ಥಿತಿಯಲ್ಲಿದೆ. ಆದರೆ ತಂಡಕ್ಕೆ ಮಂದಿನ ಪಂದ್ಯಗಳಲ್ಲಿ ಗೆಲುವು ಅತ್ಯಗತ್ಯ. ಪ್ಲೇ ಆಫ್ ಪ್ರವೇಶಿಸಲು ಸದ್ಯ ಯಾವ ತಂಡಕ್ಕೆ ಎಷ್ಟು ಅವಕಾಶ ಇದೆ ಎನ್ನುವ ವರದಿ ಇಲ್ಲಿದೆ.
ಜಿಟಿ ತಂಡವು ಅಂಕಗಳ ವಿಷಯದಲ್ಲಿ (ಸಂಭವನೀಯ ಟೈಗಳು ಸೇರಿದಂತೆ) ಮೊದಲ ನಾಲ್ಕು ಸ್ಥಾನಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ 99.7% ರಷ್ಟಿದೆ ಮತ್ತು ಒಂಟಿಯಾಗಿ ಅಥವಾ ಜಂಟಿಯಾಗಿ ಮೊದಲ ಅಥವಾ ಎರಡನೇ ಸ್ಥಾನದಲ್ಲಿ ಕೊನೆಗೊಳ್ಳುವ ಸಾಧ್ಯತೆ 82.6% ರಷ್ಟಿದೆ.
ಬುಧವಾರದ ಗೆಲುವಿನೊಂದಿಗೆ, ಆರ್‌ಸಿಬಿ ಅಂಕಗಳ ಆಧಾರದ ಮೇಲೆ ಮೊದಲ ನಾಲ್ಕು ಸ್ಥಾನಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಶೇ. 99 ಮತ್ತು ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಶೇ. 77.6 ರಷ್ಟಿದೆ.
ಅಂಕಗಳ ಆಧಾರದ ಮೇಲೆ SRH ಮೊದಲ ನಾಲ್ಕು ಸ್ಥಾನಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ 77% ರಷ್ಟಿದ್ದು, ಮೊದಲ ಎರಡರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕೇವಲ 31.4% ಮಾತ್ರ.
ಅಂಕಗಳ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಪಂಜಾಬ್‌ಗೆ 63.6% ರಷ್ಟಿದ್ದು, ಮೊದಲ ಎರಡರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕೇವಲ 22.2% ರಷ್ಟಿದೆ.
53.2% ನೊಂದಿಗೆ, ಸಿಎಸ್‌ಕೆ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಉತ್ತಮವಾಗಿದೆ. ಆದರೆ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕೇವಲ 19% ಮಾತ್ರ ಇದೆ.
ಮನೀಶ್ ಪಾಂಡೆಯ ಅದ್ಭುತ ಕ್ಯಾಚ್‌ಗೆ ಮನಸೋತ ವಿರಾಟ್ ಕೊಹ್ಲಿ; ಮೈದಾನದಲ್ಲೇ ಮೆಚ್ಚುಗೆ
ರಾಜಸ್ಥಾನ್ ಮೊದಲ ನಾಲ್ಕು ಸ್ಥಾನಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಶೇ. 53 ರಷ್ಟಿದೆ. ಆದರೆ ಮೊದಲ ಎರಡು ಸ್ಥಾನಗಳಲ್ಲಿ ಒಂದನ್ನು ಪಡೆಯುವ ಸಾಧ್ಯತೆ ಶೇ. 15.3 ರಷ್ಟು ಮಾತ್ರ ಕಾಣಿಸಿಕೊಂಡಿದೆ.
ಬುಧವಾರ ಆರ್‌ಸಿಬಿ ವಿರುದ್ಧ ಸೋಲಿನ ನಂತರ ಕೆಕೆಆರ್ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳು ಈಗಾಗಲೇ ಕಡಿಮೆಯಾಗಿದೆ. ಒಂದೊಮ್ಮೆ ಮುಂದಿನ ಎಲ್ಲ ಪಂದ್ಯಗಳನ್ನು ಗೆದ್ದರೂ ಇತರ ತಂಡಗಳ ಫಲಿತಾಂಶ ಗಣನೆಗೆ ಬರಲಿದೆ.
ಪ್ಲೇಆಫ್‌ಗೆ ತಲುಪುವ ಡೆಲ್ಲಿಯ ಭರವಸೆ ಕೇವಲ 2.7% ಮಾತ್ರ ಉಳಿದಿದೆ. ಪವಾಡವೊಂದು ಸಂಭವಿಸಿದರಷ್ಟೇ ಅವರು ಅಗ್ರ 4ರಲ್ಲಿ ಕಾಣಿಸಬಹುದಷ್ಟೇ.