ಮನೀಶ್ ಪಾಂಡೆಯ ಅದ್ಭುತ ಕ್ಯಾಚ್‌ಗೆ ಮನಸೋತ ವಿರಾಟ್ ಕೊಹ್ಲಿ; ಮೈದಾನದಲ್ಲೇ ಮೆಚ್ಚುಗೆ
IPL 2026: ಈ ಅದ್ಭುತ ಕ್ಯಾಚ್ ಕಂಡ ವಿರಾಟ್ ಕೊಹ್ಲಿ ನೇರವಾಗಿ ಪಾಂಡೆ ಬಳಿ ಬಂದು ಅವರನ್ನು ಶ್ಲಾಘಿಸಿದರು. ಪಾಂಡೆಯ ಈ ಕ್ಯಾಚ್ ಮತ್ತು ಕೊಹ್ಲಿಯ ಮೆಚ್ಚುಗೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.
Manish Pandey -
ರಾಯ್ಪುರ, ಮೇ 14: ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಸೋತಿರಬಹುದು, ಆದರೆ ಪಂದ್ಯದಲ್ಲಿ ಕನ್ನಡಿಗ ಮನೀಶ್ ಪಾಂಡೆ(Manish Pandey) ಹಿಡಿದ ಒಂದು ಅದ್ಭುತ ಕ್ಯಾಚ್ ಎದುರಾಳಿ ತಂಡದ ಆಟಗಾರರು ಕೂಡ ಭೇಷ್ ಎಂದಿದ್ದಾರೆ.
ಕಾರ್ತಿಕ್ ತ್ಯಾಗಿ ಎಸೆದ ಓವರ್‌ನಲ್ಲಿ ಕವರ್ ಪಾಯಿಂಟ್ ಕಡೆಗೆ ಟಿಮ್ ಡೇವಿಡ್ ಬಾರಿಸಿದ ಚೆಂಡನ್ನು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಪಾಂಡೆ ಅದ್ಭುತವಾದ ಒಂದು ಕೈಯಿಂದ ಫ್ಲೈಯಿಂಗ್ ಕ್ಯಾಚ್ ಪಡೆದರು. ಅವರ ಈ ಕ್ಯಾಚ್ ಕಂಡು ಕೋಲ್ಕತ್ತಾ ತಂಡದ ಸಹ ಆಟಗಾರರು ಮಾತ್ರವಲ್ಲದೆ ನಾನ್‌ಸ್ಟ್ರೈಕರ್‌ನಲ್ಲಿದ್ದ ವಿರಾಟ್ ಕೊಹ್ಲಿಯನ್ನು ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸಿತು.
ಈ ಅದ್ಭುತ ಕ್ಯಾಚ್ ಕಂಡ ವಿರಾಟ್ ಕೊಹ್ಲಿ ನೇರವಾಗಿ ಪಾಂಡೆ ಬಳಿ ಬಂದು ಅವರನ್ನು ಶ್ಲಾಘಿಸಿದರು. ಪಾಂಡೆಯ ಈ ಕ್ಯಾಚ್ ಮತ್ತು ಕೊಹ್ಲಿಯ ಮೆಚ್ಚುಗೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.
𝙄𝙨 𝙞𝙩 𝙖 𝙗𝙞𝙧𝙙? 𝙄𝙨 𝙞𝙩 𝙖 𝙥𝙡𝙖𝙣𝙚? 𝙄𝙩'𝙨 𝙈𝙖𝙣𝙞𝙨𝙝 𝙋𝙖𝙣𝙙𝙚𝙮 ✈️#ManishPandey catches a blinder to dismiss #TimDavid 🤯#TATAIPL Race To Playoffs 2026 ➡️ #RCBvKKR | LIVE NOW 👉https://t.co/9SHVzm41aO pic.twitter.com/uwWo8hx3Vm
— Star Sports (@StarSportsIndia) May 13, 2026
ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 193 ರನ್‌ಗಳ ಗುರಿ ಬೆನ್ನಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 6 ವಿಕೆಟ್‌ಗಳಿಂದ ಗೆದ್ದಿತು. ವಿರಾಟ್ 60 ಎಸೆತಗಳಲ್ಲಿ 105 ರನ್ ಗಳಿಸಿದರು. ಅದರಲ್ಲಿ 11 ಬೌಂಡರಿಮತ್ತು 3 ಸಿಕ್ಸರ್ ಇದ್ದವು. ದೇವದತ್ತ ಪಡಿಕ್ಕಲ್ (37) ಕೂಡ ನೆರವಾದರು. ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ ಕೊಹ್ಲಿ ಜತೆ 92 ರನ್ ಸೇರಿಸಿದ್ದರಿಂದ ಗೆಲುವಿನ ಹಾದಿ ಸರಾಗವಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ಪರ ಅಂಗಕ್ರಿಷ್ ರಘುವಂಶಿ ಚೆಂದದ ಅರ್ಧಶತಕ ಗಳಿಸಿದರು. ರಘುವಂಶಿ (71) ಅವರ ಆಟದ ಬಲದಿಂದ ಕೋಲ್ಕತ್ತ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 20 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್‌ಗಳಿಗೆ 192 ರನ್ ಗಳಿಸಿತು.
ಸಂಕ್ಷಿಪ್ತ ಸ್ಕೋರು
ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 192 (ಕ್ಯಾಮರಾನ್ ಗ್ರೀನ್ 32, ಅಂಗಕ್ರಿಷ್ ರಘುವಂಶಿ 71, ರಿಂಕು ಸಿಂಗ್ ಔಟಾಗದೇ 49, ಭುವನೇಶ್ವರ್ ಕುಮಾರ್ 12ಕ್ಕೆ1, ಜೋಶ್ ಹೇಝಲ್‌ವುಡ್ 25ಕ್ಕೆ1, ರಸಿಕ್ ಸಲಾಮ್ 28ಕ್ಕೆ1). ರಾಯಲ್ ಚಾಲೆಂಜರ್ಸ್ ಬೆಂಗಳೂರು: 19.1 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 194 (ವಿರಾಟ್ ಕೊಹ್ಲಿ ಅಜೇಯ 105, ದೇವದತ್ತ ಪಡಿಕ್ಕಲ್ 39, ರಜತ್ ಪಾಟೀದಾರ್ 11, ಕಾರ್ತಿಕ್ ತ್ಯಾಗಿ 32ಕ್ಕೆ3, ಸುನಿಲ್ ನಾರಾಯಣ್ 31ಕ್ಕೆ1).