ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದ ಡೆಲ್ಲಿ; ಸೋತರೂ 4ನೇ ಸ್ಥಾನ ಉಳಿಸಿಕೊಂಡ ಪಂಜಾಬ್‌

IPL 2026 Points Table: ಸೋಲಿನ ಹೊರತಾಗಿಯೂ ಪಂಜಾಬ್‌ ತಂಡ ನಾಲ್ಕನೇ ಸ್ಥಾನದಲ್ಲೇ ಉಳಿಯಿತು. ಡೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯಗಳಿಂದ 10 ಅಂಕ ಕಲೆಹಾಕಿ 7ನೇ ಸ್ಥಾನದಲ್ಲಿದೆ. ಇನ್ನುಳಿದ ಎರಡು ಪಂದ್ಯಗಳನ್ನು ಗೆದ್ದರೂ ಇತರ ತಂಡಗಳ ಫಲಿತಾಂಶದ ಆಧಾರದಲ್ಲಿ ಪ್ಲೇ-ಆಫ್‌ ಭವಿಷ್ಯ ಅಡಗಿದೆ.

Delhi Capitals

ಧರ್ಮಶಾಲಾ, ಮೇ 12: ಸೋಮವಾರ ರಾತ್ರಿ ನಡೆದಿದ್ದ ಬೃಹತ್‌ ಮೊತ್ತದ ಅತ್ಯಂತ ರೋಚಕ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ತಂಡ ಪಂಜಾಬ್‌ ಕಿಂಗ್ಸ್‌ ವಿರುದ್ಧ 3 ವಿಕೆಟ್‌ ಅಂತರದ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್‌ ರೇಸ್‌ನಲ್ಲಿ ತನ್ನ ಓಟವನ್ನು ಜೀವಂತವಿರಿಸಿತು. ಜತೆಗೆ ಅಂಕಪಟ್ಟಿ(IPL 2026 Points Table)ಯಲ್ಲಿ 7ನೇ ಸ್ಥಾನಕ್ಕೇರಿದೆ.

211 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡವು 74ಕ್ಕೆ4 ವಿಕೆಟ್‌ ಕಳೆದುಕೊಂಡಾಗ ಸೋಲುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಮಿಲ್ಲರ್ 28 ಎಸೆತಗಳಲ್ಲಿ 51 ರನ್ ಮತ್ತು ನಾಯಕ ಅಕ್ಷರ್ 30 ಎಸೆತಗಳಲ್ಲಿ 56 ರನ್ ಗಳಿಸಿ ಪಂದ್ಯದ ಚಿತ್ರವಣವನ್ನೇ ಬದಲಾಯಿಸಿದರು. ನಿರ್ಣಾಯಕ 64 ರನ್‌ಗಳ ಜೊತೆಯಾಟ ನಡೆಸಿದರು. ನಂತರ ಅಶುತೋಷ್ ಶರ್ಮಾ ಮತ್ತು ಮಾಧವ್ ತಿವಾರಿ ಅವರು ಅತ್ಯುನ್ನತ ಯಶಸ್ವಿ ಚೇಸಿಂಗ್ ಅನ್ನು ಪೂರ್ಣಗೊಳಿಸಿದರು.

ಸೋಲಿನ ಹೊರತಾಗಿಯೂ ಪಂಜಾಬ್‌ ತಂಡ ನಾಲ್ಕನೇ ಸ್ಥಾನದಲ್ಲೇ ಉಳಿಯಿತು. ಡೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯಗಳಿಂದ 10 ಅಂಕ ಕಲೆಹಾಕಿ 7ನೇ ಸ್ಥಾನದಲ್ಲಿದೆ. ಇನ್ನುಳಿದ ಎರಡು ಪಂದ್ಯಗಳನ್ನು ಗೆದ್ದರೂ ಇತರ ತಂಡಗಳ ಫಲಿತಾಂಶದ ಆಧಾರದಲ್ಲಿ ಪ್ಲೇ-ಆಫ್‌ ಭವಿಷ್ಯ ಅಡಗಿದೆ.

ಕನ್ನಡಿಗ ಕೆಎಲ್ ರಾಹುಲ್ ಆರೆಂಜ್ ಕ್ಯಾಪ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿದರು. ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕ ಆಟಗಾರ ಒಂಬತ್ತು ರನ್‌ಗಳನ್ನು ಸೇರಿಸುವ ಮೂಲಕ ತಮ್ಮ ಸ್ಕೋರ್ ಅನ್ನು 468 ರಿಂದ 477 ಕ್ಕೆ ಏರಿಸಿದರು. ಅಭಿಷೇಕ್ ಶರ್ಮಾ ಅವರ 475 ರನ್‌ಗಳನ್ನು ಹಿಂದಿಕ್ಕಿದರು. ಇನ್ನಿಂಗ್ಸ್ ನಂತರ ರಾಹುಲ್ ಅವರ ಸ್ಟ್ರೈಕ್ ರೇಟ್ 180.00 ರಿಂದ 177.98 ಕ್ಕೆ ಸ್ವಲ್ಪ ಕುಸಿದಿತು.

DC vs PBKS: ಪಂಜಾಬ್‌ ಕಿಂಗ್ಸ್‌ಗೆ ಸತತ ನಾಲ್ಕನೇ ಸೋಲು, ಜಯದೊಂದಿಗೆ ಡೆಲ್ಲಿ ಪ್ಲೇಆಫ್ಸ್‌ ಆಸೆ ಜೀವಂತ!

ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ನಂತರ ಪರ್ಪಲ್ ಕ್ಯಾಪ್ ಅಂಕಪಟ್ಟಿಯಲ್ಲಿ ಅಗ್ರ ಒಂಬತ್ತು ಸ್ಥಾನಗಳು ಬದಲಾಗದೆ ಉಳಿದಿವೆ. ಭುವನೇಶ್ವರ್ ಕುಮಾರ್ 21 ವಿಕೆಟ್‌ಗಳೊಂದಿಗೆ ಓಟದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅನ್ಶುಲ್ ಕಾಂಬೋಜ್, ಕಗಿಸೊ ರಬಾಡ, ಪ್ರಿನ್ಸ್ ಯಾದವ್ ಮತ್ತು ಇಶಾನ್ ಮಾಲಿಂಗ ಕೂಡ ಅಗ್ರ ಐದು ಸ್ಥಾನಗಳಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.

10ನೇ ಸ್ಥಾನದಲ್ಲಿ ಮಾತ್ರ ಬದಲಾವಣೆಯಾಗಿದ್ದು, ವೇಗಿ ಅರ್ಶ್‌ದೀಪ್ ಸಿಂಗ್ 11 ಪಂದ್ಯಗಳಿಂದ 9.92 ಎಕಾನಮಿ ರೇಟ್‌ನಲ್ಲಿ 13 ವಿಕೆಟ್‌ಗಳನ್ನು ಪಡೆದು ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನ ಸ್ಪಿನ್ನರ್ ನೂರ್ ಅಹ್ಮದ್ 12 ವಿಕೆಟ್‌ಗಳನ್ನು ಹೊಂದಿದ್ದರೂ ಟಾಪ್ 10 ರಿಂದ ಹೊರಗುಳಿದಿದರು.