DC vs PBKS: ಪಂಜಾಬ್ ಕಿಂಗ್ಸ್‌ಗೆ ಸತತ ನಾಲ್ಕನೇ ಸೋಲು, ಜಯದೊಂದಿಗೆ ಡೆಲ್ಲಿ ಪ್ಲೇಆಫ್ಸ್ ಆಸೆ ಜೀವಂತ!
DC vs PBKS Match Highlights: ಡೇವಿಡ್ ಮಿಲ್ಲರ್ ಹಾಗೂ ಅಕ್ಷರ್ ಪಟೇಲ್ ಅವರ ನಿರ್ಣಾಯಕ ಅರ್ಧಶತಕಗಳ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಎದುರಾಳಿ ಪಂಜಾಬ್ ಕಿಂಗ್ಸ್ ಎದುರು 3 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇಆಫ್ಸ್ ಆಸೆಯನ್ನು ಜೀವಂತವಾಗಿಸಿಕೊಂಡಿದೆ. ಇನ್ನು ಪಂಜಾಬ್ ತಂಡದ ಸೋಲಿನ ಸರಪಳಿ ಮುಂದುವರಿದಿದೆ.
ಪಂಜಾಬ್ ಕಿಂಗ್ಸ್ ಎದುರು ಡೆಲ್ಲಿಗೆ ಜಯ. -
ಧರ್ಮಶಾಲಾ: ಡೇವಿಡ್ ಮಿಲ್ಲರ್ (David Miller) ಹಾಗೂ ಅಕ್ಷರ್ ಪಟೇಲ್ (Axar patel) ಅವರ ಅರ್ಧಶತಕಗಳ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಎದುರಾಳಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಮೂರು ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ತನ್ನ ಪ್ಲೇಆಫ್ಸ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನು ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ತಂಡ ದೊಡ್ಡ ಮೊತ್ತದ ಗುರಿಯನ್ನು ನೀಡಿದರೂ ಬೌಲಿಂಗ್ ವೈಫಲ್ಯದಿಂದ ಸತತ ನಾಲ್ಕನೇ ಸೋಲು ಒಪ್ಪಿಕೊಂಡಿತು.
ಸೋಮವಾರ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ್ದ 211 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ನಂತರ 33ರನ್‌ಗೆ ಮೂರನೇ ವಿಕೆಟ್ ಅನ್ನು ಕಳೆದುಕೊಂಡಿತ್ತು. ನಂತರ 74 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಆದರೆ, ಈ ವೇಳೆ ಜೊತೆಯಾದ ಡೇವಿಡ್ ಮಿಲ್ಲರ್ ಹಾಗೂ ಅಕ್ಷರ್ ಪಟೇಲ್ 64 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದರು. ಅಕ್ಷರ್ ಪಟೇಲ್ 36 ಎಸೆತಗಳಲ್ಲಿ 56 ರನ್ ಗಳಿಸಿ ತಂಡದ ಗೆಲುವಿನ ಹಾದಿಯಲ್ಲಿರಿಸಿ ಔಟ್ ಆಗಿದ್ದರು.
DC vs PBKS: ಪಂದ್ಯದ ಮೊದಲ ಎಸೆತದಲ್ಲಿಯೇ ಸಿಕ್ಸರ್ ಬಾರಿಸಿ ವಿಶಷ ದಾಖಲೆ ಬರೆದ ಪ್ರಿಯಾಂಶ್ ಆರ್ಯ!
ನಂತರ ಡೇವಿಡ್ ಮಿಲ್ಲರ್ ಕೇವಲ 28 ಎಸೆತಗಳಲ್ಲಿ 51 ರನ್ ಗಳಿಸಿ ತಂಡವನ್ನು ಗೆಲುವಿನ ಸನಿಹ ತಂದು ಔಟ್ ಆದರು. ಆದರ, ಕೊನೆಯಲ್ಲಿ ಆಶುತೋಷ್ ಶರ್ಮಾ 24 ರನ್ ಹಾಗೂ ಮಾಧವ್ ರಿವಾರಿ 18 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಕೊನೆಯಲ್ಲಿ ಆಕಿಬ್ ನಬಿ 10 ರನ್ ಗಳಿಸಿದರು. ಅಂತಿಮವಾಗಿ ಡೆಲ್ಲಿ 19 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿ ಗೆದ್ದು ಬೀಗಿತು.
2⃣ points in the bag ✅
— IndianPremierLeague (@IPL) May 11, 2026
Picture perfect victory at a picturesque venue 🖼️@DelhiCapitals continue to fight in #TATAIPL 2026 💙
Scorecard ▶️ https://t.co/wHhflKIvCR#KhelBindaas | #PBKSvDC pic.twitter.com/Lv8HuWeRhe
210 ರನ್ ಕಲೆ ಹಾಕಿದ ಪಂಜಾಬ್ ಕಿಂಗ್ಸ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಪಂಜಾಬ್ ಕಿಂಗ್ಸ್ ತಂಡ ಪ್ರಿಯಾಂಶ್ ಆರ್ಯ ಹಾಗೂ ಶ್ರೇಯಸ್ ಅಯ್ಯರ್ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ ಐದು ವಿಕೆಟ್ ನಷ್ಟಕ್ಕೆ 210 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 211 ರನ್‌ಗಳ ಗುರಿಯನ್ನು ನೀಡಿತು.
Finishing of the finest quality 🤩@DelhiCapitals fans, how elated are you? 🥳
— IndianPremierLeague (@IPL) May 11, 2026
A terrific victory by 3⃣ wickets in Dharamshala ✌️
Updates ▶️ https://t.co/wHhflKIvCR#TATAIPL | #KhelBindaas | #PBKSvDC pic.twitter.com/63K0Tcylbg
ಪಿಬಿಕೆಎಸ್‌ಗೆ ಭರ್ಜರಿ ಆರಂಭ
ಪಂಜಾಬ್ ಪರ ಇನಿಂಗ್ಸ್ ಆರಂಭಿಸಿದ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್‌ಸಿಮ್ರನ್ ಸಿಂಗ್ ಮೊದಲನೇ ವಿಕೆಟ್‌ಗೆ ಭರ್ಜರಿ ಆಟವನ್ನು ಪ್ರದರ್ಶಿಸಿದರು. ಈ ಜೋಡಿ ಆರಂಭಿಕ ವಿಕೆಟ್‌ಗೆ 41 ಎಸೆತಗಳಲ್ಲಿ 78 ರನ್‌ಗಳನ್ನು ಕಲೆ ಹಾಕಿತು. ಪ್ರಭ್ ಸಿಮ್ರನ್ ಸಿಂಗ್ 15 ಎಸೆತಗಳಲ್ಲಿ 18 ರನ್ ಗಳಿಸಿದರೆ, ಪ್ರಿಯಾಂಶ್ ಆರ್ಯ 33 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ 56 ರನ್ ಚಚ್ಚಿದರು. ಆ ಮೂಲಕ ಪಂಜಾಬ್ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟ ಬಳಿಕ ಈ ಇಬ್ಬರೂ ವಿಕೆಟ್ ಒಪ್ಪಿಸಿದರು.
Wonderful knock comes to an end 👏👏
— IndianPremierLeague (@IPL) May 11, 2026
David Miller goes back for a fiery 51(28) in the chase 🫡
Updates ▶️ https://t.co/wHhflKIvCR#TATAIPL | #KhelBindaas | #PBKSvDC pic.twitter.com/Cux5Ilg8iq
ನಂತರ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೂಪರ್ ಕನೋಲಿ 52 ಎಸೆತಗಳಲ್ಲಿ 83 ರನ್‌ಗಳನ್ನು ಕಲೆ ಹಾಕಿದರು. ಈ ಜೊತೆಯಾಟದಲ್ಲಿ ಕನೋಲಿ 27 ಎಸೆತಗಳಲ್ಲಿ 38 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ನಾಯಕ ಶ್ರೇಯಸ್ ಅಯ್ಯರ್, 36 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 59 ರನ್ ಗಳಿಸಿದರು. ಕೊನೆಯಲ್ಲಿ ಸೂರ್ಯಾಂಶ್ ಶೆಡ್ಗೆ 8ಎಸೆತಗಳಲ್ಲಿ 21 ರನ್ ಚಚ್ಚಿದರು.