ಧರ್ಮಶಾಲಾ, ಮೇ 16: 2026ರ ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs PBKS) ತಂಡದ ಸಾವಾಲು ಎದುರಿಸಲು ಸಜ್ಜಾಗಿ ನಿಂತದೆ. ಪ್ಲೇ ಆಫ್ ಸ್ಥಾನ ಖಚಿತಪಡಿಸಲು ಶ್ರೇಯಸ್ ಅಯ್ಯರ್ ಪಡೆಗೆ ಇದು ಗೆಲ್ಲಲ್ಲೇ ಬೇಕಾದ ಪಂದ್ಯವಾಗಿದೆ. ಹಾಲಿ ಆವೃತ್ತಿಯಲ್ಲಿ ಇತ್ತಂಡಗಳ ಮೊದಲ ಮುಖಾಮುಖಿಯೂ ಇದಾಗಿದೆ. ಈ ಪಂದ್ಯದ ಪಿಚ್, ಸಂಭಾವ್ಯ ತಂಡ ಮತ್ತು ಮುಖಾಮುಖಿಯ ದಾಖಲೆ ಹೀಗಿದೆ.
ಪಂಜಾಬ್ ಕಿಂಗ್ಸ್ ತಂಡವು ತನ್ನ ಮೊದಲ ಏಳು ಪಂದ್ಯಗಳಲ್ಲಿ ಅಜೇಯವಾಗಿ ಗೆದು ಉತ್ತಮ ಆರಂಭ ಪಡೆದಿತ್ತು. ಆದರೆ ಆ ಬಳಿಕ ಸತತ 5 ಪಂದ್ಯಗಳನ್ನು ಸೋತಿತು. ವಿಪರ್ಯಾಸ ಎಂದರೆ ಬಹುತೇಕ ಪಂದ್ಯಗಳಲ್ಲಿ 200 ಪ್ಲಸ್ ಮೊತ್ತವನ್ನು ಬಾರಿಸಿಯೂ ಸೋಲು ಕಂಡಿದ್ದು. ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನುಭವಿಸಿತ್ತು. ಅಲ್ಲಿ ಅವರು ಒಟ್ಟು 201 ರನ್‌ಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು. ತಂಡದ ಸಂಯೋಜನೆಯಲ್ಲಿ ಕೆಲ ಬದಲಾವಣೆ ಮಾಡದ ಹೊರತು ಗೆಲುವು ಕಷ್ಟ.
ಐಪಿಎಲ್ 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹನ್ನೆರಡು ಪಂದ್ಯಗಳಲ್ಲಿ ಎಂಟು ಗೆಲುವುಗಳನ್ನು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬಹುತೇಕ ಪ್ಲೇ-ಆಫ್ ಪ್ರವೇಶಿಸಿದರೂ ಅಧಿಕೃತವಾಗಿಲ್ಲ. ಈ ಪಂದ್ಯ ಗೆದ್ದರೆ ಅದು ಅಧಿಕೃತವಾಗಲಿದೆ.
ಪಿಚ್ ರಿಪೋರ್ಟ್
ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣವು ದೇಶದ ಅತ್ಯಂತ ರಮಣೀಯ ಸ್ಥಳಗಳಲ್ಲಿ ಒಂದಾಗಿದೆ. ಸೌಂದರ್ಯವನ್ನು ಬದಿಗಿಟ್ಟರೂ, ಬ್ಯಾಟಿಂಗ್ ಸ್ನೇಹಿ ಸ್ವಭಾವದಿಂದಾಗಿ ಇದು ಇನ್ನೂ ಅತ್ಯಂತ ರೋಮಾಂಚಕ ಸ್ಥಳಗಳಲ್ಲಿ ಒಂದಾಗಿದೆ. ಕಪ್ಪು ಮಣ್ಣಿನ ಈ ಪಿಚ್ ಸಂಪೂರ್ಣವಾಗಿ ಬ್ಯಾಟಿಂಗ್ ಸ್ನೇಹಯಾಗಿದೆ. ಇಲ್ಲಿನ ಸರಾಸರಿ ಮೊತ್ತವೇ 200 ಪ್ಲಸ್ ಮೊತ್ತವಾಗಿದೆ.
PBKS vs RCB: ಆರ್‌ಸಿಬಿ-ಪಂಜಾಬ್ ಪಂದ್ಯದ ಸಂಭಾವ್ಯ ಇಂಪ್ಯಾಕ್ಟ್ ಆಟಗಾರರಿವರು
ಮುಖಾಮುಖಿ
ಆಡಿದ ಪಂದ್ಯಗಳು-37
ಪಂಜಾಬ್ ಗೆಲುವು-18
ಆರ್‌ಸಿಬಿ ಗೆಲುವು- 19
ಸಂಭಾವ್ಯ ಆಡುವ ಬಳಗ
ಪಂಜಾಬ್ ಕಿಂಗ್ಸ್ (PBKS): ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಕೂಪರ್ ಕೊನೊಲಿ, ವಿಷ್ಣು ವಿನೋದ್ (ವಿ.ಕೀ.), ಸೂರ್ಯಾಂಶ್ ಶೆಡ್ಜ್, ಅಜ್ಮತುಲ್ಲಾ ಒಮರ್ಜಾಯ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಹಾಲ್, ವಿಜಯ್ಕುಮಾರ್ ವೈಶಾಕ್.
ಇಂಪ್ಯಾಕ್ಟ್ ಆಟಗಾರ: ಪ್ರಭಾಸಿಮ್ರಾನ್ ಸಿಂಗ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಜಾಕೋಬ್ ಬೆಥೆಲ್/ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (WK), ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ವೆಂಕಟೇಶ್ ಅಯ್ಯರ್, ರಾಸಿಖ್ ಸಲಾಂ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಜಾಕೋಬ್ ಡಫಿ.
ಇಂಪ್ಯಾಕ್ಟ್ ಪ್ಲೇಯರ್: ದೇವದತ್ ಪಡಿಕ್ಕಲ್.