ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jasprit Bumrah: ಪಾಪರಾಜಿಗಳ ಕಾಟಕ್ಕೆ ತಾಳ್ಮೆ ಕಳೆದುಕೊಂಡ ಬುಮ್ರಾ; ವಿಡಿಯೊ ವೈರಲ್‌

ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಬುಮ್ರಾ ಅವರಿಗೆ ಆಸ್ಟ್ರೇಲಿಯಾ ಏಕದಿನ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಅವರು 5 ಪಂದ್ಯಗಳ ಟಿ20 ಸರಣಿ ಮಾತ್ರ ಆಡಲಿದ್ದಾರೆ. ಆದರೆ ಎಲ್ಲ ಪಂದ್ಯಗಳನ್ನು ಆಡಲಿದ್ದಾರಾ ಎಂದು ಕಾದು ನೋಡಬೇಕಿದೆ. ಒಂದೊಮ್ಮೆ ಭಾರತ 5 ಪಂದ್ಯಗಳ ಮೊದಲೇ ಸರಣಿ ವಶಪಡಿಸಿಕೊಂಡರೆ ಆಗ ಬುಮ್ರಾ ಅಂತಿಮ ಪಂದ್ಯಕ್ಕೆ ವಿಶ್ರಾಂತಿ ಪಡೆಯಲೂ ಬಹುದು.

ಮುಂಬೈ: ನವದೆಹಲಿ ಟೆಸ್ಟ್‌ ಪಂದ್ಯ ಮುಗಿಸಿ ಮುಂಬೈಗೆ ಆಗಮಿಸಿದ ವೇಳೆ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಅವರಿಗೆ ವಿಮಾನ ನಿಲ್ದಾಣದ(Mumbai Airport) ಹೊರಗೆ ಪಾಪರಾಜಿಗಳು(Paparazzi) ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಕಿರಿಕಿರಿ ಉಂಟುಮಾಡಿದ್ದಾರೆ. ಈ ವೇಳೆ ತಾಳ್ಮೆ ಬುಮ್ರಾ ತಾಳ್ಮೆ ಕಳೆದುಕೊಂಡು 'ನಾನು ನಿಮ್ಮನ್ನು ಬರಲು ಹೇಳಿಲ್ಲ' ಎಂದು ಏರು ಧ್ವನಿಯಲ್ಲಿ ಹೇಳಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಕ್ರಿಕೆಟ್ ಪಿಚ್‌ನಲ್ಲಿ ವಿರಳವಾಗಿ ತಾಳ್ಮೆ ಕಳೆದುಕೊಳ್ಳುವ ವೇಗದ ಬೌಲರ್ ಬುಮ್ರಾ, ಪಾಪಾರಾಜಿಗಳ ಕಾಟ ತಪ್ಪಿಸಲು "ಮೈನೆ ಬುಲಾಯಾ ಹೈ ನಹಿ. ತುಮ್ ಕಿಸಿ ಔರ್ ಕೆ ಲಿಯೇ ಆಯೇ ಹೋ, ಆ ರಹೇ ಹೊಂಗೆ ವೋ" (ನಾನು ನಿಮ್ಮನ್ನು ಬರಲು ಹೇಳಿಲ್ಲ. ನೀವು ಬೇರೆಯವರಿಗಾಗಿ ಬಂದಿದ್ದೀರಿ; ಅವರು ಬರಬಹುದು), ದಯವಿಟ್ಟು ನನ್ನ ಕಾರಿಗೆ ಹೋಗಲು ಅವಕಾಶ ಮಾಡಿಕೊಡಿ ಎಂದು ಹೇಳುವ ಮೂಲಕ ಬುಮ್ರಾ ವಿಮಾನ ನಿಲ್ದಾಣದಿಂದ ಹೊರ ನಡೆದರು. ಆದಾಗ್ಯೂ, ಕೆಲ ಛಾಯಾಗ್ರಾಹಕರು ಛಾಯಾಚಿತ್ರಕ್ಕಾಗಿ ವಿನಂತಿಸುತ್ತಲೇ ಇದ್ದರು ಮತ್ತು ಅವರಲ್ಲಿ ಒಬ್ಬರು 'ನೀವು ನಮ್ಮ ದೀಪಾವಳಿ ಬೋನಸ್' ಎಂದು ಹಾಸ್ಯಾಸ್ಪದವಾಗಿ ಹೇಳಿದರು.

ಬುಮ್ರಾ ತಾಳ್ಮೆ ಕಳೆದುಕೊಂಡ ವಿಡಿಯೊ



ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಬುಮ್ರಾ ಅವರಿಗೆ ಆಸ್ಟ್ರೇಲಿಯಾ ಏಕದಿನ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಅವರು 5 ಪಂದ್ಯಗಳ ಟಿ20 ಸರಣಿ ಮಾತ್ರ ಆಡಲಿದ್ದಾರೆ. ಆದರೆ ಎಲ್ಲ ಪಂದ್ಯಗಳನ್ನು ಆಡಲಿದ್ದಾರಾ ಎಂದು ಕಾದು ನೋಡಬೇಕಿದೆ. ಒಂದೊಮ್ಮೆ ಭಾರತ 5 ಪಂದ್ಯಗಳ ಮೊದಲೇ ಸರಣಿ ವಶಪಡಿಸಿಕೊಂಡರೆ ಆಗ ಬುಮ್ರಾ ಅಂತಿಮ ಪಂದ್ಯಕ್ಕೆ ವಿಶ್ರಾಂತಿ ಪಡೆಯಲೂ ಬಹುದು.

ಇದನ್ನೂ ಓದಿ IND vs AUS: ʻಕಿಂಗ್‌ ಕೊಹ್ಲಿ ಡೆಡ್‌, ಇನ್ಮುಂದೆ ಕಿಂಗ್‌ ಬುಮ್ರಾʼ-ವಿರಾಟ್‌ ವಿರುದ್ಧ ಸೈಮನ್‌ ಕ್ಯಾಟಿಚ್‌ ಕಿಡಿ!

ಭಾರತ ಟಿ20 ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿ.ಕೀ.), ವರುಣ್ ಚಕ್ರವರ್ತಿ, ಜಸ್‌ಪ್ರೀತ್‌ ಬುಮ್ರಾ, ಅರ್ಷ್‌ದೀಪ್ ಸಿಂಗ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಸಂಜು ಸ್ಯಾಮ್‌ಸನ್ (ವಿ.ಕೀ.), ವಾಶಿಂಗ್‌ಟನ್ ಸಿಂಗ್‌ಕುದರ್ (ಡಬ್ಲ್ಯುಕೆ),