IND-W vs AUS-W: ವೈರಲ್ ಜ್ವರ; ಆಸ್ಟ್ರೇಲಿಯಾ ಮಹಿಳಾ ಏಕದಿನ ಸರಣಿಯಿಂದ ಹೊರಬಿದ್ದ ಜೆಮೀಮಾ
28 ವರ್ಷದ ತೇಜಲ್ ಹಸಬ್ನಿಸ್ ಕಳೆದ ವರ್ಷ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ವರೆಗೆ ಆರು ಏಕದಿನ ಪಂದ್ಯಗಳನ್ನು ಆಡಿದ್ದಾರೆ. 46.66 ಸರಾಸರಿಯಲ್ಲಿ 140 ರನ್ ಗಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ರಾಜ್‌ಕೋಟ್‌ನಲ್ಲಿ ಐರ್ಲೆಂಡ್ ವಿರುದ್ಧ ಅಜೇಯ 53 ರನ್ ಗಳಿಸಿದ್ದರು.

-

ಮುಂಬಯಿ: ವೈರಲ್ ಜ್ವರದಿಂದಾಗಿ ಭಾರತದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಅವರು ಆಸ್ಟ್ರೇಲಿಯಾ(IND-W vs AUS-W) ವಿರುದ್ಧದ ಏಕದಿನ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಪ್ರಕಟಿಸಿದೆ. ಬದಲಿ ಆಟಗಾರ್ತಿಯಾಗಿ ತೇಜಲ್ ಹಸಬ್ನಿಸ್(Tejal Hasabnis) ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
"ಬಿಸಿಸಿಐ ವೈದ್ಯಕೀಯ ತಂಡವು ಜೆಮಿಮಾ ಅವರ ಪ್ರಗತಿಯನ್ನು ಗಮನಿಸುತ್ತಿದೆ" ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ನ್ಯೂ ಚಂಡೀಗಢದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಜೆಮಿಮಾ 26 ಎಸೆತಗಳಲ್ಲಿ 18 ರನ್ ಗಳಿಸಿದ್ದರು.
🚨 𝗡𝗘𝗪𝗦 🚨
— BCCI Women (@BCCIWomen) September 17, 2025
Tejal Hasabnis named as a replacement for Jemimah Rodrigues for the remainder of the #INDvAUS ODI series.
Details 🔽 #TeamIndia | @IDFCFIRSTBankhttps://t.co/8CtDA07rHz
28 ವರ್ಷದ ತೇಜಲ್ ಹಸಬ್ನಿಸ್ ಕಳೆದ ವರ್ಷ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ವರೆಗೆ ಆರು ಏಕದಿನ ಪಂದ್ಯಗಳನ್ನು ಆಡಿದ್ದಾರೆ. 46.66 ಸರಾಸರಿಯಲ್ಲಿ 140 ರನ್ ಗಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ರಾಜ್‌ಕೋಟ್‌ನಲ್ಲಿ ಐರ್ಲೆಂಡ್ ವಿರುದ್ಧ ಅಜೇಯ 53 ರನ್ ಗಳಿಸಿದ್ದರು. ಮುಂಬರುವ ಮಹಿಳಾ ವಿಶ್ವಕಪ್‌ಗಾಗಿ ಪ್ರೇಮಾ ರಾವತ್, ಪ್ರಿಯಾ ಮಿಶ್ರಾ, ಉಮಾ ಚೆಟ್ರಿ, ಮಿನ್ನು ಮಣಿ ಮತ್ತು ಸಯಾಲಿ ಸತ್‌ಘರೆ ಅವರೊಂದಿಗೆ ತೇಜಲ್ ಕೂಡ ಸ್ಟ್ಯಾಂಡ್‌ಬೈ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ.
ಪರಿಷ್ಕೃತ ಭಾರತ ಮಹಿಳಾ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್ (ವಿ.ಕೀ.), ಕ್ರಾಂತಿ ಗೌಡ್, ಸಯಾಲಿ ಸತ್ಘರೆ, ರಾಧಾ, ಯಾದವ್, ಶ್ರೀ ಚರಣಿ, ಶ್ರೀ ಚರಣಿ, ಶ್ರೀ ಚರಣಿ ಹಸಾಬ್ನಿಸ್.